Bigg boss kannada: ಬಿಗ್ ಬಾಸ್’ನ ಮತ್ತೊಬ್ಬ ಸ್ಪರ್ಧಿ ಮೇಲೆ ದೂರು ದಾಖಲು ?!

Bigg boss kannada: ಬಿಗ್ ಬಾಸ್ ಕನ್ನಡ(Bigg boss kannada) ಸೀಸನ್-10 ಹಲವು ಆಚ್ಚರಿಗಳಿಗೆ ಸಾಕ್ಷಿಯಾಗಿದೆ. ಸೀಸನ್ ಆರಂಭದಲ್ಲೇ ಹುಲಿ ಉಗುರು ವಿಚಾರೋಲ್ಲಿ ವರ್ತೂರು ಸಂತೋಷ್ ಜೈಲು ಪಾಲಾಗಿ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲೆನಿಸಿದೆ. ಅದಲ್ಲದೆ ಜಾತಿ ನಿಂದನೆ ವಿಚಾರದಲ್ಲೂ ತನಿಷ ಮೇಲೆ ಕೇಸ್ ದಾಖಲಾಗಿತ್ತು. ಆದರೀಗ ಮತ್ತೊಬ್ಬ ಸ್ಪರ್ಧಿ ಮೇಲೆ ಕೇಸ್ ದಾಖಲಾಗುವ ಸಂಭವ ಕಂಡುಬಂದಿದೆ.

 

 

ಹೌದು, ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ತನ್ನ ಸ್ಪರ್ಧಿಗಳಿಗೆ ಎಲ್ಲೂ ಹೇಳದ, ಮನದಲ್ಲೇ ನೊಂದ ಕೆಲವು ಭಾವನಾತ್ಮಕ ಕ್ಷಣ, ಸಂದರ್ಭಗಳನ್ನು ಹೇಳಿಕೊಳ್ಳಲು ತಿಳಿಸಿತ್ತು. ಈ ವೇಳೆ ಪ್ರತಾಪ್(Prathap) ಅವರು ಡ್ರೋನ್ ವಿಚಾರವಾಗಿ ತನ್ನ ಮೇಲಾದ ದೌರ್ಜನ್ಯ ಹಾಗೂ ತನಗಾದ ಅವಮಾನಗಳನ್ನು ನಾಡಿನ ಜನರ ಮುಂದೆ ತೆರೆದಿಟ್ಟಿದ್ದರು. ಈ ಸಮಯದಲ್ಲಿ ಕೋವಿಡ್ ಸಮಯದಲ್ಲಿ ತಾನು ನಿಯಮ ಉಲ್ಲಂಘಿಸಿದ್ದೇನೆಂದು ಬಿಬಿಎಂಪಿ ಅಧಿಕಾರಿಗಳು ಏನೆಲ್ಲಾ ಹಿಂಸೆ ನೀಡಿದರೆಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ್ದರು. ಈ ಹೇಳಿಕೆಗಳೇ ಇದೀಗ ಪ್ರತಾಪ್ ಅವರಿಗೆ ಸಂಚಕಾರ ತಂದೊಡ್ಡಿದೆ.

ಪ್ರತಾಪ್ ಹೇಳಿದ್ದೇನು?

ನನಗೆ ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆದರೆ ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಯ್ತು. ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಚಿತ್ರಹಿಂಸೆ ಕೊಟ್ಟರು. ತಲೆ-ತಲೆಗೆ ಹೊಡೆದರು. ಕೆಟ್ಟದಾಗಿ ಮಾತನಾಡಿದರು. ನಿನ್ನ ತಂಗಿಗೆ ಮದುವೆ ಆಗದ ಹಾಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ಪ್ರತಾಪ್ ಹೇಳಿದ್ದರು. ಅದೇ ಸಮಯದಲ್ಲಿ ಅಪ್ಪ-ಅಮ್ಮನ ಬಳಿ ನನ್ನ ಬಗ್ಗೆ ಇಲ್ಲ-ಸಲ್ಲದ ದೂರುಗಳನ್ನು ಹೇಳಿದರು. ವಿಷವಿಟ್ಟು ಸಾಯಿಸಿ ಎಂದೆಲ್ಲ ಐಡಿಯಾ ಕೊಟ್ಟರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದು ಭಾರಿ ವೈರಲ್ ಆಗುತ್ತಲೇ, ಇದೀಗ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ಬಿಬಿಎಂಪಿ ಹೇಳಿದ್ದಾರೆ.

 

ಅಂದಹಾಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಅವರು ನಾವು ಅವರಿಗೆ ಹಿಂಸೆ ಕೊಟ್ಟಿಲ್ಲ. ಬಿಗ್ಬಾಸ್ ಮನೆಯಲ್ಲಿ ಆತ ಹೇಳುತ್ತಿರುವುದೆಲ್ಲವೂ ಸತ್ಯಕ್ಕೆ ದೂರವಾದದ್ದು. ಹಾಗೊಮ್ಮೆ ನಾವು ಹಿಂಸೆ ಕೊಟ್ಟಿದ್ದಿದ್ದರೆ ಆಗಲೇ ನಮ್ಮ ವಿರುದ್ಧ ದೂರು ನೀಡಬಹುದಿತ್ತು, ಈಗ ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅವರ ತಲೆಗೆ ಹೊಡೆಯುವುದಾಗಲಿ, ಹಿಂಸೆ ನೀಡುವುದಾಗಿ ಮಾಡಿಲ್ಲ. ಅವರ ತಂದೆಯ ಬಳಿಯೂ ಸೌಜನ್ಯದಿಂದಲೇ ವರ್ತಿಸಿದ್ದೆವು. ಸರ್ಕಾರಿ ಅಧಿಕಾರಿಗಳಾಗಿರುವ ನಾವು ಹಾಗೆಲ್ಲ ಮಾಡುವಂತಿಲ್ಲ. ನಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಶಿಕ್ಷೆಯಾಗುತ್ತದೆ. ಕೆಲಸವೇ ಹೋಗುತ್ತದೆ. ಘಟನೆ ನಡೆದು 3 ವರ್ಷಗಳ ನಂತರ ಪ್ರತಾಪ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆತ ಹೇಳಿದ್ದನ್ನು ಸಾಭೀತು ಮಾಡಲಿ. ಇಲ್ಲವಾದರೆ ಇನ್ನೊಂದರೆಡು ದಿನಗಳಲ್ಲಿ ಅಂದರೆ ಸೋಮವಾರ, ಮಂಗಳವಾರದ ಒಳಗೆ ತಾನು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಳ್ಳದೇ ಹೋದರೆ, ಡ್ರೋನ್ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.

Leave A Reply

Your email address will not be published.