Home latest Yogi Adityanath government: ರಾತ್ರೋ ರಾತ್ರಿ ನ್ಯೂಯಾರ್ಕ್ ಗೆ ನುಗ್ಗಿದ ಯೋಗಿ ಸರ್ಕಾರದ ಬುಲ್ಡೋಜರ್ ಗಳು-...

Yogi Adityanath government: ರಾತ್ರೋ ರಾತ್ರಿ ನ್ಯೂಯಾರ್ಕ್ ಗೆ ನುಗ್ಗಿದ ಯೋಗಿ ಸರ್ಕಾರದ ಬುಲ್ಡೋಜರ್ ಗಳು- ಕಟ್ಟಡಗಳು ನೆಲಸಮ !

Yogi Adityanath government

Hindu neighbor gifts plot of land

Hindu neighbour gifts land to Muslim journalist

Yogi Adityanath government : ಲಕ್ನೋ- ಕ್ರಿಮಿನಲ್‌ಗಳು, ಗ್ಯಾಂಗ್‌ಸ್ಟರ್‌ಗಳು, ಮಾಫಿಯಾ ನಾಯಕರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ( Yogi Adityanath government )ಟ್ರೆಂಡ್ ಮಾರ್ಕ್. ಅದೇ ರೀತಿ ಇದೀಗ ಅವರ ಬುಲ್ಡೋಜರ್ಸ್ ನ್ಯೂಯಾರ್ಕ್ ಸಿಟಿಯಲ್ಲೂ ಸದ್ದು ಮಾಡುತ್ತಿದೆ. ಅಲ್ಲಿ ಅಕ್ರಮವಾಗಿ, ಕಾನೂನುಬಾಹಿರವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ನೆಲಸಮಗೊಳಿಸಿದೆ.

ಈ ಘಟನೆ ಅಮೆರಿಕಾದ ನ್ಯೂಯಾರ್ಕ್ ಸಿಟಿಯದ್ದಲ್ಲ. ಉತ್ತರ ಪ್ರದೇಶದ ಕಾಲೋನಿಯಲ್ಲಿ ನ್ಯೂಯಾರ್ಕ್ ಎಂಬ ಸಿಟಿ ಇದೆ. ಉತ್ತರಪ್ರದೇಶದ ಹೊರವಲಯದಲ್ಲಿರುವ ಕಾಕೋರಿಯಾ ಮೌಡಾ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದ `ನ್ಯೂಯಾರ್ಕ್ ಸಿಟಿ’ ಅನ್ನು ಕಾನೂನು ಬಾಹಿರವಾಗಿ ಜೊತೆಗೆ ಎಲ್‌ಡಿಎ ಅನುಮತಿ ಪಡೆಯದೆಯೇ ಲೇಔಟ್‌ ನಿರ್ಮಾಣ ಕಾರ್ಯವು ಸಾಗುತ್ತಿದ್ದರಿಂದ ಲಕ್ನೋ ಅಭಿವೃದ್ಧಿ ಪ್ರಾಧಿಕಾರ (LDA) ಧ್ವಂಸಗೊಳಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ಕೂಡ ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮನೆ ನಿರ್ಮಿಸಬೇಡಿ ಎಂದು ಎಚ್ಚರಿಸಿದ್ದರೂ ಕ್ಯಾರೆ ಎನ್ನದೆ ಕಟ್ಟಡಗಳು ನಿರ್ಮಾಣವಾಗುತ್ತಿತ್ತು. ಆದುದರಿಂದ ಎಲ್‌ಡಿಎ ನ್ಯಾಯಾಲಯವು ಇದನ್ನು ಕೆಡವಲು ಆದೇಶ ಹೊರಡಿಸಿದ ಕಾರಣ, ವೈಪಿ ಸಿಂಗ್ ನೇತೃತ್ವದ ಎಲ್‌ಡಿಎ ತಂಡ ಮತ್ತು ಪೊಲೀಸರ ಬೆಂಗಾವಲಿನೊಂದಿಗೆ ಬಡಾವಣೆಯನ್ನು ಧ್ವಂಸಗೊಳಿಸಲಾಯಿತು ಎಂದು ಎಲ್‌ಡಿಎ ವಲಯ ಅಧಿಕಾರಿ ದೇವಾಂಶ್ ತಿಳಿಸಿದ್ದಾರೆ.

ಇದನ್ನೂ ಓದಿ: Liquor Sale: ಖಾಲಿಯಾದ ಸರ್ಕಾರದ ಖಜಾನೆ -ಮಧ್ಯ ಮಾರಾಟ ಮಾಡಲು ಬಂತು ಹೊಸ ರೂಲ್ಸ್, ಇನ್ನು ಟಾರ್ಗೆಟ್ ಫಿಕ್ಸ್!!