Crime News: ಪ್ರಿಯಕರನ ಮೊಬೈಲಿನಲ್ಲಿತ್ತು 13ಸಾವಿರ ಯುವತಿಯರ ನಗ್ನ ಫೋಟೋ! ಪ್ರೇಯಸಿ ಶಾಕ್‌, ಮಂಗಳೂರು ಮೂಲದ ಟೆಕ್ಕಿ ಬಂಧನ!!

Share the Article

Bengaluru: ಪ್ರಿಯಕರನ ಮೊಬೈಲ್‌ನಲ್ಲಿ 13ಸಾವಿರ ಯುವತಿಯ ನಗ್ನ ಫೋಟೋಗಳನ್ನು ನೋಡಿದ ಆತನ ಪ್ರೇಯಸಿ ನಿಜಕ್ಕೂ ಶಾಕ್‌ ಆಗಿದ್ದು, ಈ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಬಿಪಿಓ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಯೋರ್ವಳ ತನ್ನ ಸಹೋದ್ಯೋಗಿ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಇಬ್ಬರ ಮಧ್ಯೆ ಖಾಸಗಿ ಕ್ಷಣಗಳು ಕೂಡಾ ಬಂದು ಹೋಗಿದೆ. ಇದನ್ನು ಆಕೆಯ ಪ್ರಿಯಕರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಹಾಗಾಗಿ ಯುವತಿ ಆತ ಶೌಚಾಲಯಕ್ಕೆಂದು ಹೋದಾಗ ಆತನ ಮೊಬೈಲ್‌ ತೆಗೆದು ತನ್ನ ಫೋಟೋಗಳನ್ನು ಡಿಲೀಟ್‌ ಮಾಡಲು ಹೋಗಿದ್ದಾಳೆ. ಆದರೆ ಆಕೆ ಅಲ್ಲಿ ಕಂಡದ್ದೇ ವಿಚಿತ್ರ ಚಿತ್ರಗಳು. ಅದು ಕೂಡಾ ಬರೋಬ್ಬರು 13 ಸಾವಿರ ಯುವತಿಯ ನಗ್ನ ಫೋಟೋ, ವೀಡಿಯೋ. ಇದನ್ನೆಲ್ಲ ಕಂಡ ಯುವತಿ ಶಾಕ್‌ ಆಗಿದ್ದಾಳೆ.

ಇದರಲ್ಲಿ ಈಕೆಯ ಜೊತೆ ಕೆಲಸ ಮಾಡುವ ಯುವತಿಯರ ಮಾದಕ ಫೋಟೋಗಳು ಕೂಡಾ ಇದ್ದವು. ಇದರಿಂದ ಕೋಪಗೊಂಡ ಯುವತಿ ಆ ಯುವಕನ ಜೊತೆ ಜಗಳ ಮಾಡಿ ಆತನಿಂದ ದೂರವಾಗಿದ್ದಳು. ಹಾಗೆನೇ ತನ್ನ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಕೂಡಾ ಇದರ ಬಗ್ಗೆ ಹೇಳಿದ್ದಳು.

ಕೂಡಲೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಯುವಕ ಮಾತ್ರ ತಾನು ಯಾವ ಯುವತಿಗೂ ಏನೂ ತೊಂದರೆ ನೀಡಿಲ್ಲ ಎಂದು ಹೇಳಿದ್ದಾನೆ. ಇಷ್ಟೊಂದು ಯುವತಿಯರ ಅರೆನಗ್ನ ಫೋಟೋ ಹೇಗೆ ದೊರಕಿತು ಎಂದು ತನಿಖೆ ನಡೆಸುತ್ತಿದ್ದು, ಮಾರ್ಫ್‌ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಸೆ.23 ರಂದು ಅಧಿಕಾರಿಗಳೇ ಕೇಂದ್ರ ವಿಭಾಗದ ಸೆನ್‌ ಠಾಣೆಗೆ ದೂರು ನೀಡಿದ್ದರು. ಅನಂತರ ಪೊಲೀಸರು ಮಂಗಳೂರು ಮೂಲದ ಆದಿತ್ಯ ಸಂತೋಷ್‌ ಎಂಬ ಟೆಕ್ಕಿಯನ್ನು ಬಂಧಿಸಿದ್ದಾರೆ. ಯುವಕ ತಾನು ಹುಡುಗಿಯರ ಫೊಟೋ ಮಾರ್ಫ್‌ ಮಾಡಿ ಈ ರೀತಿ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಇದನ್ನು ಓದಿ:  Laxmi Hebbalkar: ಈ ಭಾಗದ ರೈತರಿಗೆ ಭರ್ಜರಿ ಗುಡ್ ನ್ಯೂಸ್- ಜಮೀನು ಬಾಡಿಗೆ ಹೆಚ್ಚಿಸಿ ಆದೇಶ ಹೊರಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್

Leave A Reply