Love possessiveness: ದಾರಿಯಲ್ಲಿ ಬೇರೆ ಹುಡುಗಿಯರನ್ನು ನೋಡಿದ ಪ್ರಿಯತಮ – ಸೂಜಿ ಹಿಡಿದು ಪ್ರಿಯತಮೆ ಏನು ಮಾಡಿದ್ಲು ಗೊತ್ತಾ?! ಯಪ್ಪಾ.. ವಿಚಾರ ತಿಳುದ್ರೆ ಬೆಚ್ಚಿಬೀಳ್ತೀರಾ !!
World news love possessiveness woman stab her boyfriend in eye from rabis injection in Florida
love possessiveness: ಪ್ರೀತಿಯಲ್ಲಿ ಪೊಸೆಸಿವ್ನೆಸ್(love possessiveness) ಎನ್ನುವುದು ಇದ್ದೇ ಇರುತ್ತದೆ. ತಾನು ಪ್ರೀತಿಸುವ ಹುಡುಗ ಇನ್ನೊಬ್ಬಳು ಹುಡುಗಿಯನ್ನು ನೋಡಬಾರದು ಅಥವಾ ತಾನು ಪ್ರೀತಿಸುವ ಹುಡುಗಿ ಇನ್ನೊಬ್ಬ ಹುಡುಗನನ್ನು ನೋಡಬಾರದು ಎಂಬ ರೂಲ್ಸ್ ಕೆಲವು ಪ್ರೀತಿಗಳಲ್ಲಿ ಇದ್ದೇ ಇರುತ್ತದೆ. ಇಲ್ಲೊಬ್ಬ ಹುಡುಗ ಪಕ್ಕದಲ್ಲಿ ಹೋಗುವ ಹುಡುಗಿಯರನ್ನು ನೋಡಿದ ಎಂಬ ಕಾರಣಕ್ಕೆ ಪ್ರಿಯತಮೆಯು ಏನು ಮಾಡಿದಳು ಗೊತ್ತೇ? ಈ ವಿಚಾರವನ್ನೇನಾದರೂ ನೀವು ತಿಳಿದರೆ ಶಾಕ್ ಆಗಿಬಿಡುತ್ತೀರಿ.
ಹೌದು, ಪ್ಲೋರಿಡಾದಲ್ಲಿ ಹುಡುಗನೊಬ್ಬ ತನ್ನ ಅಕ್ಕ ಪಕ್ಕದ ಹುಡುಗಿಯನ್ನು ನೋಡಿದ ಎಂಬ ಕಾರಣಕ್ಕೆ ಆತನ ಪ್ರೇಯಸಿಯು ರೇಬೀಸ್ ಸೂಜಿಯಿಂದ ಕಣ್ಣಿಗೆ ಚುಚ್ಚಿದ್ದಾಳೆ. ಇದರಿಂದ ತೀವ್ರವಾಗಿ ನೊಂದ ಹಾಗೂ ಆಘಾತಕ್ಕೊಳಗಾದ ಗೆಳೆಯನು ಕೂಡಲೇ ಪೋಲಿಸರಿಗೆ ದೂರು ನೀಡಿದ್ದಾನೆ. ನಂತರ ಆಕೆಯನ್ನು ಬಂಧಿಸಲಾಗಿದೆ.
ಅಂದಹಾಗೆ 44 ವರ್ಷದ ಸಾಂಡ್ರಾ ಜಿಮೆನೆಜ್ ತನ್ನ ಗೆಳೆಯನೊಂದಿಗೆ ಮನೆಯಲ್ಲಿ ಇರುವಾಗ ಶನಿವಾರ ಈ ಘಟನೆ ಸಂಭವಿಸಿದೆ. ಇತರ ಮಹಿಳೆಯರನ್ನು ನೋಡುತ್ತಿದ್ದಾನೆ ಎಂಬ ವಾದದ ಸಮಯದಲ್ಲಿ ಜಿಮೆನೆಜ್ ಮಂಚದ ಮೇಲೆ ಮಲಗಿದ್ದಾಗ ತನ್ನ ಗೆಳೆಯನ ಮೇಲೆ ಹಾರಿ ಸೂಜಿಯಿಂದ ಅವನ ಕಣ್ಣಿಗೆ ಚುಚ್ಚಿದ್ದಾಳೆ. ದಾಳಿಯ ನಂತರ ಸಂತ್ರಸ್ತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಆಕೆಯನ್ನು ಬಂಧಿಸಿದರು.
ಇದನ್ನೂ ಓದಿ: Revenue department: ರಾಜ್ಯಾದ್ಯಂತ ಜಮೀನು ದಾಖಲೆಗಳಲ್ಲಿ ಮಹತ್ತರ ಬದಲಾವಣೆ- ಸರ್ಕಾರದಿಂದ ಹೊಸ ನಿರ್ಧಾರ