Home Karnataka State Politics Updates Telangana Election : ಮುಸ್ಲಿಂ ಮತಗಳು ನನಗೆ ಬೇಡ…ಗೋಹತ್ಯೆ ಮಾಡುವವರರನ್ನು ಬಿಡುವುದಿಲ್ಲ- ಬಿಜೆಪಿ ಅಭ್ಯರ್ಥಿ ಟಿ.ರಾಜಾ...

Telangana Election : ಮುಸ್ಲಿಂ ಮತಗಳು ನನಗೆ ಬೇಡ…ಗೋಹತ್ಯೆ ಮಾಡುವವರರನ್ನು ಬಿಡುವುದಿಲ್ಲ- ಬಿಜೆಪಿ ಅಭ್ಯರ್ಥಿ ಟಿ.ರಾಜಾ ಸಿಂಗ್‌ ಮತ್ತೆ ವಿವಾದಾತ್ಮಕ ಹೇಳಿಕೆ!!!

Telangana Election
Image source: the hindu

Hindu neighbor gifts plot of land

Hindu neighbour gifts land to Muslim journalist

Telangana Election: ನವೆಂಬರ್‌ 30 ರಂದು ತೆಲಂಗಾಣ ವಿಧಾನಸಭೆ ಚುನಾವಣೆ (Telangana Election)ಮತದಾನ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿಯ ಟಿ.ರಾಜಾ ಸಿಂಗ್‌ ಅವರು ಮತ್ತೊಂದು ದೊಡ್ಡ ಶಾಕಿಂಗ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ರಾಜ್ಯದಲ್ಲಿ ಮುಸ್ಲಿಂರ ಮತ ಬೇಡ ಎಂದು ಟಿ. ರಾಜಾ ಸಿಂಗ್‌ ಹೇಳಿದ್ದಾರೆ. ಇದರ ಜೊತೆಗೆ ಗೋಹತ್ಯೆ ಮಾಡುವವರ ಕೈ ಮುರಿಯುತ್ತೇನೆʼ ಎಂದು ಎಚ್ಚರಿಕೆ ನೀಡಿದ್ದಾರೆ. ದೇಶಾದ್ಯಂತ ಹಿಂದೂಗಳ ಮೇಲೆ ತಾರತಮ್ಯ ಮಾಡಲಾಗುತ್ತಿದ್ದು, ಇದನ್ನು ಸಹಿಸುವುದಿಲ್ಲ ಎಂದು ಟಿ ರಾಜಾ ಸಿಂಗ್‌ ಹೇಳಿದ್ದಾರೆ.

ತೆಲಂಗಾಣದ ಗೋಶಾಮಹಲ್‌ ವಿಧಾಣಸಭಾ ಕ್ಷೇತ್ರದಿಂದ ಟಿ ರಾಜಾ ಸಿಂಗ್‌ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಕೂಡಾ ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಆದರೆ ಈ ಬಾರಿ ಚುನಾವಣೆಯ ಮೊದಲ ಪಟ್ಟಿ ಬಿಡುಗಡೆಗೂ ಮುನ್ನವೇ ಅವರ ಅಮಾನತು ಹಿಂಪಡೆಯಲಾಗಿದೆ. ಅಲ್ಲದೆ, 2018 ರಲ್ಲಿ ಗೋಶಾಮಹಲ್‌ನಿಂದ ಗೆದ್ದಿದ್ದ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಟಿ.ರಾಜಾ ಸಿಂಗ್‌ ಇದೀಗ ಮತ್ತೊಮ್ಮೆ ಹತ್ಯೆಯ ಕುರಿತು ಮಾತಾಡಿದ್ದಾರೆ. ದೈನಿಕ್‌ ಭಾಸ್ಕರ್‌ ವರದಿಯ ಪ್ರಕಾರ, ” ಇದು ನನ್ನ ಜೀವನ ಮತ್ತು ಸಾವಿನ ಚುನಾವಣೆ. ನಾನು ಸಾಯುವ ಭಯ ಇಲ್ಲ. ಆದರೆ ನನಗೆ ದ್ರೋಹ ಮಾಡುವ ಮೊದಲು ಎಚ್ಚರಿಕೆಯಿಂದಿರಿ. ನನ್ನ ದ್ವೇಷವು ದುಬಾರಿ” ಎಂದು ಹೇಳಿದ್ದಾರೆ.

ನನಗೆ ಮುಸ್ಲಿಮರ ಮತಗಳು ಏಕೆ ಬೇಡ ಎಂಬುದಕ್ಕೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಸಿಂಗ್, ಗೋಶಾಮಹಲ್ ಪ್ರದೇಶದಲ್ಲಿ ಎರಡು ಲಕ್ಷ ಹಿಂದೂ ಮತದಾರರಿದ್ದು, 70 ಸಾವಿರ ಮುಸ್ಲಿಮರು ಹಿಂದುತ್ವದ ವಿರುದ್ಧ ಇದ್ದಾರೆ. ಆದ್ದರಿಂದಲೇ ನನ್ನ ಹಿಂದೂಗಳಿಂದ ನನಗೆ ಹೆಚ್ಚಿನ ಬೆಂಬಲವಿದೆ. ನನಗೆ ಮುಸ್ಲಿಮರ ಮತ ಬೇಡ ” ಎಂದು ಹೇಳಿದ್ದಾರೆ.

2013ರ ಚುನಾವಣೆಯಲ್ಲೂ ಅದನ್ನೇ ಹೇಳಿದ್ದೆ, 2018ರಲ್ಲೂ ಅದನ್ನೇ ಹೇಳಿದ್ದೆ ಮತ್ತು ಈಗ 2023ರಲ್ಲೂ ಅದನ್ನೇ ಹೇಳುತ್ತಿದ್ದೇನೆ, ನನಗೆ ಮುಸ್ಲಿಮರ ಮತ ಬೇಡ, ಗೋಹತ್ಯೆ ಮಾಡುವವರ ಕೈ ಮುರಿಯುತ್ತೇನೆ, ಇದು ನನ್ನ ಸ್ಟೈಲ್‌ ಎಂದು ಹೇಳಿದ್ದಾರೆ.

ಇದನ್ನೂ ಓದಿ: Working Visa: ಸೌದಿ ಅರೇಬಿಯಾ ವರ್ಕಿಂಗ್‌ ವೀಸಾ ನಿಯಮದಲ್ಲಿ ಮಾಡಿತು ದೊಡ್ಡ ಬದಲಾವಣೆ! ಭಾರತಕ್ಕೆ ಶಾಕ್‌!!