World Cup 2023: ವಿಶ್ವಕಪ್ ಗೆದ್ದ ಆಸ್ಟ್ರೇಲಿಯನ್ ತಂಡಕ್ಕೆ ಇನ್ನೂ ಚಾಂಪಿಯನ್ ಸ್ವಾಗತ ಸಿಕ್ಕಿಲ್ಲ!! ಏಕೆ ಗೊತ್ತೇ?
Sports news ec 2023 winners Australian cricketers returns home with no welcome from fans here is reason
WC 2023 Winners: 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯಾನ್ ಆಗಿ ಈಗಾಗಲೇ ವಾರ ಕಳೆದಿದೆ. ಆದರೆ ಇದುವರೆಗೂ ತಂಡಕ್ಕೆ ಯಾವುದೇ ಗೌರವ ದೊರಕಿಲ್ಲ. ಆಸ್ಟ್ರೇಲಿಯಾದ ವಿಶ್ವಕಪ್ ತಂಡದ ಆಟಗಾರರು (WC 2023 Winners)ದೇಶಕ್ಕೆ ಮರಳಿದಾಗ, ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಗುಂಪಾಗಲಿ, ಕ್ರಿಕೆಟ್ ಆಸ್ಟ್ರೇಲಿಯಾ ಆಯೋಜಿಸಿದ್ದ ಯಾವುದೇ ರೀತಿಯ ಸ್ವಾಗತ ಕಾರ್ಯಕ್ರಮ ಇರಲಿಲ್ಲ. ʼಓಪನ್ ಬಸ್ ಪರೇಡ್ʼ ಗೂ ಇರಲಿಲ್ಲ.
ಇದ್ಯಾಕೆ ಹೀಗಾಯಿತು? ಯಾವೆ ವಿಶ್ವಕಪ್ ವಿಜೇತರ ಬಗ್ಗೆ ಇಂತಹ ಅಸಡ್ಡೆ? ಇಂತಹ ಅನೇಕ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳ ಮನಸ್ಸಲ್ಲಿ ಎದ್ದಿರಬಹುದು. ಅದಕ್ಕೆ ಕೆಲವೊಂದು ಕಾರಣಗಳನ್ನು ನಾವು ಇಲ್ಲಿ ನೀಡಿದ್ದೇವೆ.
ವಾಸ್ತವವಾಗಿ, ವಿಶ್ವಕಪ್ ನಂತರ, ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಐದು ಪಂದ್ಯಗಳ T20 ಸರಣಿ ಪ್ರಾರಂಭವಾಯಿತು. ಹಾಗಾಗಿ ಕಾಂಗರೂಗಳ ವಿಶ್ವಕಪ್ ತಂಡದ ಅರ್ಧದಷ್ಟು ಆಟಗಾರರು ಭಾರತದಲ್ಲಿಯೇ ಉಳಿಯಬೇಕಾಯಿತು. ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ 6-7 ಆಟಗಾರರು ಮಾತ್ರ ಆಸ್ಟ್ರೇಲಿಯಾ ತಲುಪಿದ್ದಾರೆ. ಅರ್ಧ ತಂಡದೊಂದಿಗೆ ಚಾಂಪಿಯನ್ ಆಗುವ ಸಂಭ್ರಮ ಅಪೂರ್ಣ ಎಂದು ಹೇಳಲಾಗಿದೆ. ಬಹುಶಃ ಆಸ್ಟ್ರೇಲಿಯಾದ ಆಟಗಾರರನ್ನು ಇಲ್ಲಿಯವರೆಗೆ ಗೌರವದಿಂದ ಸ್ವಾಗತಿಸದಿರಲು ಇದೇ ದೊಡ್ಡ ಕಾರಣ ಎಂದು ಊಹಿಸಬಹುದು.
ವಿಶ್ವಕಪ್ ನಂತರ ಟಿ20 ಸರಣಿಯನ್ನು ಏಕೆ ಇಡಲಾಯಿತು ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ. ಇಂತಹ ಒಂದು ಪ್ರಶ್ನೆ ಎಲ್ಲಾ ಕಡೆ ಬರುತ್ತಿದೆ. ಐಸಿಸಿ ಪಂದ್ಯಾವಳಿಗಳ ನಂತರ ತಕ್ಷಣವೇ ಯಾವುದೇ ರೀತಿಯ ಸರಣಿಗಳನ್ನು ಇಡಬಾರದು ಎಂದು ಕೆಲವು ಕ್ರಿಕೆಟಿಗರು ಧ್ವನಿ ಎತ್ತಿದ್ದಾರೆ. ಆದಾಗ್ಯೂ, ಈ ವಿಷಯವು ಕ್ರಿಕೆಟ್ ಮಂಡಳಿಗಳು ಮತ್ತು ಪ್ರಸಾರ ಪಾಲುದಾರರಿಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ: Veteran Actress Leelavathi: ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ಹೇಗಿದೆ? ಇವರು ಜೀವನದ ಕುರಿತ ಕಿರು ಚಿತ್ರಣ ಇಲ್ಲಿದೆ!