Aadhaar card: ಆಧಾರ್ ಕಾರ್ಡ್ ಇರುವವರಿಗೆ ದೇಶಾದ್ಯಂತ ಬಂತು ಹೊಸ ರೂಲ್ಸ್ – ಡಿ. 14 ರೊಳಗೆ ಈ ಕೆಲಸ ಕಡ್ಡಾಯ!!

National news New rules for Aadhaar card holders This work is mandatory within dec 14

Aadhaar Card holders : ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕೆಂದು ಸರ್ಕಾರವು ಹಲವು ತಿಂಗಳಿಂದ ಹೇಳುತ್ತಿದೆ. ಕೆಲವರು ಮಾಡಿದೆ ಇನ್ನು ಕೆಲವರು ಅಪ್ಡೇಟ್ ಮಾಡದೆ ಉದಾಸೀನ ತೋರುತ್ತಿದ್ದಾರೆ. ಆದರೀಗ ಸರ್ಕಾರವು ಇದಕ್ಕೆ ಡೆಡ್ ಲೈನ್ ಘೋಷಣೆ ಮಾಡಿದೆ.

ಹೌದು, ಸರ್ಕಾರದ ಪ್ರತಿಯೊಂದು ಪ್ರಯೋಜನ ಪಡೆಯಲು ಆಧಾರ್ ಕಾರ್ಡ್(Adhar card) ಅತ್ಯಗತ್ಯ. ಆದರೆ ಕೆಲವರು ಆಧಾರ್ ಕಾರ್ಡ್ ಮಾಡಿಸಿದಾಗಿಂದಲೂ ಅಂದರೆ ಸುಮಾರು 10 ವರುಷಗಳಿಂದಲೂ ಅದೇ ಆಧಾರ್ ಕಾರ್ಡ್ ಬಳಸುತ್ತಿದ್ದಾರೆ(Aadhaar Card holders ). ಆದರೆ 10 ವರ್ಷಗಳಿಗೂ ಮೊದಲು ಮಾಡಿಸಿದ ಆಧಾರ್ ಅಪ್ಡೇಟ್ ಮಾಡಿ ಎಂದು ಕೇಂದ್ರ ಸರ್ಕಾರ ಹೇಳುತ್ತಾ ಬಂದಿದೆ. ಕೊನೆಗೆ ಇದೀಗ ಡೆಡ್ ಲೈನ್ ಘೋಷಣೆ ಮಾಡಿದ್ದು ಡಿಸೆಂಬರ್ 14 ರವರೆಗೆ ಆನ್‌ಲೈನ್ ಆಧಾರ್ ಅಪ್‌ಡೇಟ್‌ಗಳಿಗೆ ಅವಕಾಶ ನೀಡಿದೆ. ಜೊತೆಗೆ 50 ರೂ ಪಾವತಿಸಬೇಕಾಗಿದೆ.

ಅಂದಹಾಗೆ ಸರ್ಕಾರ ನೀಡಿದ ಈ ಗಡುವಿನ ಅವಧಿಯಲ್ಲಿ ಭಾರತೀಯ ನಿವಾಸಿಗಳು ತಮ್ಮ ಮಾಹಿತಿಯನ್ನು-ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್, ಬದಲಾಯಿಸಲು ಅಥವಾ ಸರಿಪಡಿಸಲು ಅವಕಾಶವನ್ನು ನೀಡವಾಗಿದೆ. ಇವುಗಳನ್ನು ಸಾರ್ವಜನಿಕರು ಇಮೇಲ್ ಇಲ್ಲದೇ ಆನ್‌ಲೈನ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು.

ಇನ್ನು ಫೋಟೋ ಐರಿಸ್ ಅಥವಾ ಇತರ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾದವರು ಆಧಾರ್ ನೋಂದಣಿ ಕೇಂದ್ರಕ್ಕೆ ವೈಯಕ್ತಿಕವಾಗಿ ಭೇಟಿ ನೀಡಬೇಕು. ಯಾಕೆಂದರೆ ಅದಕ್ಕೆ ಅಗತ್ಯವಾದ ಉಪಕರಣಗಳ ಅವಶ್ಯಕತೆ ಇದೆ. ಇನ್ನು ಇದಕ್ಕೆ ಅನ್ವಯವಾಗುವ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ: IPL-2024: RCB ಅಭಿಮಾನಿಗಳಿಗೆ ಶಾಕ್- ತಂಡದಿಂದ ಸ್ಟಾರ್ ಪ್ಲೇಯರ್ ಔಟ್ !!

Leave A Reply

Your email address will not be published.