Home Health Periods ಆಗೋ ಮೊದಲು ಹೆಣ್ಮಕ್ಕಳೇ ನಿಮ್ಮಲ್ಲಿ ಕಾಮಾಸಕ್ತಿ ಏರಿಕೆಯಾಗುತ್ತಾ? ಕಾರಣ ಏನು?

Periods ಆಗೋ ಮೊದಲು ಹೆಣ್ಮಕ್ಕಳೇ ನಿಮ್ಮಲ್ಲಿ ಕಾಮಾಸಕ್ತಿ ಏರಿಕೆಯಾಗುತ್ತಾ? ಕಾರಣ ಏನು?

Horney before Periods

Hindu neighbor gifts plot of land

Hindu neighbour gifts land to Muslim journalist

Horney before Periods: ಮುಟ್ಟಾಗುವ ಮೊದಲು ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಆಗುತ್ತದೆ. ಹಾರ್ಮೋನುಗಳು ವೇಗವಾಗಿ ಬದಲಾಗುವಿಕೆ ಈ ಸಮಯದಲ್ಲಿ ಆಗುತ್ತದೆ. ಇದು ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಇದು ಈ ರೀತಿ ಆಗಲು ಕಾರಣವೇನು? ನಿಮಗೆ ತಿಳಿದಿದೆಯೇ? ಬನ್ನಿ ತಿಳಿಯೋಣ.

ಋತುಚಕ್ರ ಪ್ರಾರಂಭವಾಗುವ ಮೊದಲು ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆ(Horney before Periods) ಹೆಚ್ಚಾಗಲು ತಜ್ಞರು ನೀಡಿರುವ ಕಾರಣ ಇಲ್ಲಿದೆ.

ಮುಟ್ಟಿನ ಸಮಯದಲ್ಲಿ ನಿಕಟ ಭಾಗಗಳಲ್ಲಿ ರಕ್ತ ಹೆಚ್ಚಾಗಿ ಹರಿಯುತ್ತದೆ. ರಕ್ತದ ಹರಿವು ಹೆಚ್ಚಾಗುವುದರಿಂದ ಇದು ಮಹಿಳೆಯರು ಸ್ವಲ್ಪ ಮಟ್ಟಿನ ಉದ್ವೇಗಕ್ಕೆ ಕಾರಣವಾಗುತ್ತದೆ. ಇಷ್ಟು ಮಾತ್ರವಲ್ಲದೇ, ಈ ಸಮಯದಲ್ಲಿ ಡಿಸ್ಚಾರ್ಜ್‌ ಕೂಡಾ ಹೆಚ್ಚಾಗಿರುವ ಕಾರಣ, ವಜೈನಾ ಸ್ಮೂತ್‌ ಇರುತ್ತದೆ. ಶುಷ್ಕತೆ ಇರುವುದಿಲ್ಲ. ಹಾಗಾಗಿ ಈ ಎಲ್ಲಾ ಕಾರಣದಿಂದ ಮಹಿಳೆಯರು ಈ ಸಮಯದಲ್ಲಿ ಹೆಚ್ಚು ಉದ್ವೇಗಕ್ಕೊಳಗಾಗುತ್ತಾರೆ.

ಈಸ್ಟ್ರೋಜೆನ್‌ ಹಾರ್ಮೋನ್‌ ಉತ್ಪಾದನೆ ಹೆಚ್ಚಾಗುತ್ತದೆ. ಈಸ್ಟ್ರೋಜನ್‌, ಟೆಸ್ಟೋಸ್ಟೆರಾನ್‌ ಎಂಬ ಮತ್ತೊಂದು ಹಾರ್ಮೋನ್‌ ಜೊತೆಗೆ ಅಂಡೋತ್ಪತ್ತಿ ಆಗುವುದರಿಂದ ಪ್ರಚೋದನೆ ಹೆಚ್ಚಾಗುತ್ತದೆ. ಇದಾದ ನಂತರ ಪ್ರೊಜೆಸ್ಟರಾನ್‌ ಮಟ್ಟ ಹೆಚ್ಚಾಗುತ್ತದೆ. ಈ ಹಾರ್ಮೊನ್‌ ಮಟ್ಟವು ಋತುಚಕ್ರದ ಮೊದಲು ಮತ್ತು ನಂತರ ಕಡಿಮೆಯಾಗುವುದರಿಂದ ಲೈಂಗಿಕ ಪ್ರಚೋದನೆ ಹೆಚ್ಚಾಗುತ್ತದೆ.

ಮಹಿಳೆಯರು ಗರ್ಭಿಣಿಯಾಗುವುದು ಮುಟ್ಟಿನ ಸಮಯದಲ್ಲಿ ಸಾಧ್ಯವಿಲ್ಲ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರು Fertile ಆಗಿರುವುದಿಲ್ಲ. ಈ ಕಾರಣಕ್ಕೆ ಮಹಿಳೆಯರು ನಿರ್ಭೀತಿಯಿಂದ ಲೈಂಗಿಕ ಕ್ರಿಯೆ ನಡೆಸಲು ಇಚ್ಛೆ ವ್ಯಕ್ತ ಪಡಿಸುತ್ತಾರೆ. ಋತುಚಕ್ರದ ಲೈಂಗಿಕತೆಯನ್ನು ಆನಂದಿಸುವುದು ಒಕೆ. ಆದರೆ ಈ ಸಮಯದಲ್ಲಿ ಸೋಂಕಿನ ಅಪಾಯ ಹೆಚ್ಚು.

ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇಚ್ಛೆ ಪಡುತ್ತಿದ್ದರೆ, ನೀವು ಸೇಫ್ಟಿ ಕಾಂಡೋಮ್‌ ಬಳಸುವುದು ಉತ್ತಮ. ಇಲ್ಲಿ ಗರ್ಭಧಾರಣೆಯ ಬಗ್ಗೆ ಅಲ್ಲ, ಇದನ್ನು ಮುಟ್ಟಿನ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬಳಸಿದರೆ ಉತ್ತಮ. ಕಾಂಡೋಮ್‌ ಬಳಸದೇ ಲೈಂಗಿಕ ಕ್ರಿಯೆ ಮಾಡಿದರೆ ಇಬ್ಬರೂ STI ಪಡೆಯುವ ಸಾಧ್ಯತೆ ಇದೆ.

ಮುಟ್ಟಿನ ಸಮಯದಲ್ಲಿ ನೀವು ಇಂಟಿಮೇಟ್‌ ಆಗಲು ಬಯಸಿದರೆ ಲೈಂಗಿಕತೆಯ ಮೊದಲು, ಆಮೇಲೆ ಅನಂತರ ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಬಹಳ ಮುಖ್ಯ. ಪುರುಷರು ಇದರ ಬಗ್ಗೆ ಸಂಪೂರ್ಣ ಮುತುವರ್ಜಿ ವಹಿಸಬೇಕು. ಇಲ್ಲದಿದ್ದರೆ ಸೋಂಕು ತಗುಲುವ ಅಪಾಯ ಹೆಚ್ಚು.

ಇದನ್ನೂ ಓದಿ: Self Harming: ಮಕ್ಕಳನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಮಹಿಳೆ!