Belthangady: ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್‌; ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವು!!!

Share the Article

Belthangady: ನ.23 ರಂದು ವಿದ್ಯಾರ್ಥಿಯ ನಿಯಂತ್ರಣ ತಪ್ಪಿದ ಬೈಕೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಉಜಿರೆಯ ಕಾಲೇಜು ರಸ್ತೆಯ ಬಳಿ ನಡೆದಿದ್ದು, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವಿಗೀಡಾದ ಘಟನೆಯೊಂದು ನಡೆದಿದೆ.

ಕಾಲೇಜಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಮಧ್ಯಾಹ್ನದ ಊಟ ಮಾಡಿ ವಾಪಸ್‌ ಬರುವ ಸಂದರ್ಭ ಬೈಕ್‌ ಸ್ಟ್ಯಾಂಡ್‌ ತೆಗೆಯದೆ ಚಲಾಯಿಸಿಕೊಂಡು ಬರುವಾಗ ಡಿವೈಡರ್‌ಗೆ ಬೈಕ್‌ ಡಿಕ್ಕಿ ಹೊಡೆದಿದೆ. ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಉಜಿರೆಯ ಎಸ್‌.ಡಿ.ಎಮ್‌. ಖಾಸಗಿ ಕಾಲೇಜಿನ ಮೆಕ್ಯಾನಿಕನಲ್‌ ಕೋರ್ಸ್‌ ಡಿಪ್ಲೋಮಾ ವಿದ್ಯಾರ್ಥಿ ದೀಕ್ಷಿತ್‌ (20) ತಲೆಗೆ ಗಂಭೀರ ಗಾಯಗೊಂಡಿತ್ತು. ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ: HSRP Update: ಎಚ್‌ಎಸ್‌ಆರ್‌ಪಿ ಗೊಂದಲ ಕುರಿತು ಸರಕಾರದಿಂದ ಮಹತ್ವದ ಹೇಳಿಕೆ!!!

Leave A Reply