Home Education Odisha: ಕ್ಲಾಸಿಗೆ ಚಕ್ಕರ್ ಹಾಕಿದ್ದಕ್ಕೆ ಟೀಚರ್ ಕೊಟ್ರು ಶಿಕ್ಷೆ- ಬಸಕಿ ಹೊಡೆಯುತ್ತಲೇ ಸಾವನ್ನಪ್ಪಿದ ಬಾಲಕ !!

Odisha: ಕ್ಲಾಸಿಗೆ ಚಕ್ಕರ್ ಹಾಕಿದ್ದಕ್ಕೆ ಟೀಚರ್ ಕೊಟ್ರು ಶಿಕ್ಷೆ- ಬಸಕಿ ಹೊಡೆಯುತ್ತಲೇ ಸಾವನ್ನಪ್ಪಿದ ಬಾಲಕ !!

Odisha crime

Hindu neighbor gifts plot of land

Hindu neighbour gifts land to Muslim journalist

Odisha crime: ಶಾಲೆಯಲ್ಲಿ ತಪ್ಪು ಮಾಡಿದಾಗ, ಗಲಾಟೆ-ಕೀಟಲೆ ಮಾಡಿದಾಗ ಟೀಚರ್ ಶಿಕ್ಷೆ ಕೊಡುವುದು ಕಾಮನ್. ಅಂತೆಯೇ ಶಾಲೆಯೊಂದರಲ್ಲಿ ಪಾಠ ಮಾಡುವಾಗ ಆಟದ ಮೈದಾನದಲ್ಲಿದ್ಲ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಬಸಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಆದರೆ ಬಸಕಿ ಹೊಡೆಯುತ್ತಲೇ ಆ ಬಾಲಕ ಸಾವನ್ನಪ್ಪಿರೋ ಅಘಾತಕಾರಿ ಘಟನೆಯೊಂದು ನಡೆದಿದೆ.

ಹೌದು, ಒಡಿಶಾದ(Odisha crime) ಜಾಜ್‌ಪುರದ ಒರಾಲಿಯಲ್ಲಿರುವ ಸೂರ್ಯನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಯಾದ ರುದ್ರ ನಾರಾಯಣ ಸೇಥಿ ತರಗತಿಗೆ ಬರುವ ಬದಲು ತನ್ನ ಗೆಳೆಯರ ಜೊತೆ ಗ್ರೌಂಡಿನಲ್ಲಿ ಆಟವಾಡುತ್ತಿದ್ದನು. ಇದನ್ನು ಗಮನಿಸಿದ ಟೀಚರ್, ಮೂವರನ್ನು ಕರೆಸಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಆದರೆ ಬಸ್ಕಿ ಹೊಡೆಯುತ್ತಲೇ 10 ವರ್ಷದ ಬಾಲಕ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಚ್ಚಿಬೀಳೋ ಘಟನೆ ನಡೆದಿದೆ.

ಅಂದಹಾಗೆ ಗ್ರೌಂಡಿನಲ್ಲಿ ಆಟವಾಡುತ್ತಿದ್ದ ಹುಡುಗರನ್ನು ಗಮನಿಸಿದ ಟೀಚರ್ ತರಗತಿಗೆ ಕರೆಸಿ ಎಲ್ಲರೂ ನೀಡುವ ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಐದಾರು ಬಸ್ಕಿ ಹೊಡೆಯುತ್ತಿದ್ದಂತೆ ರುದ್ರ ನಾರಾಯಣ ಕುಸಿದು ಬಿದ್ದಿದ್ದಾನೆ. ತಕ್ಷಣ ಓಡೋದಿ ಬಂದ ಟೀಚರ್, ತರಗತಿ ಕೊಠಡಿಗೆ ಎತ್ತಿಕೊಂಡು ಹೋಗಿದ್ದು ಬಿಸಿನ ತಾಪದಿಂದ ಪ್ರಜ್ಞೆ ತಪ್ಪಿರುವ ಸಾಧ್ಯತೆ ಇದೆ ಎಂದು ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪರಿಸ್ಥಿತಿ ಗಂಭೀರತೆಯನ್ನು ಅರಿತ ಟೀಚರ್, ಇತರ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಶಾಲಾ ವಾಹನ ಬಳಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಬಾಲಕನು ಕುಸಿದುಬಿದ್ದಾಗಲೆ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Jowar price hike: ಜೋಳದ ಬೆಲೆಯಲ್ಲಿ ದಾಖಲೆಯ ಏರಿಕೆ – ರೈತರಿಗೆ ಹೊಡೀತು ಜಾಕ್ ಪಾಟ್