Taming Diabetes: ಲೈಂಗಿಕ ಸಂಪರ್ಕದಿಂದ ದೇಹದಲ್ಲಿ ಈ ಅಂಶ ಕಡಿಮೆ ಆಗುತ್ತಾ ?! ತಜ್ಞರು ಹೇಳೋದೇನು ?
Health news taming diabetes after doing physical relation does sugar level in blood drops
Taming Diabetes : ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಪ್ರಪಂಚದಾದ್ಯಂತ ಹಲವರು ಮಧುಮೇಹದಿಂದ(Taming Diabetes) ಬಳಲುತ್ತಿದ್ದಾರೆ.ಡಯಾಬಿಟೀಸ್ ಒಂದು ರೀತಿಯ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ದೇಹದ ಎಲ್ಲಾ ಚಟುವಟಿಕೆಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೇವಲ ದೇಹದ (Body)ಮೇಲೆ ಮಾತ್ರವಲ್ಲದೇ ಜನರ ಲೈಂಗಿಕ ಜೀವನದ (Physical Relation)ಮೇಲೂ ಪ್ರಭಾವವನ್ನು ಬೀರುತ್ತದೆ.
ಶಾರೀರಿಕ ಸಂಬಂಧ ಬೆಳೆಸಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಇಳಿಕೆಯಾಗುವ ಕುರಿತು ಹೆಚ್ಚಿನವರು ಹೇಳುವುದನ್ನು ಕೇಳಿರಬಹುದು.ಮತ್ತೆ ಕೆಲವರಿಗೆ ದೇಹದಲ್ಲಿ ನಿಷಕ್ತಿಯ ಅನುಭವವಾಗಬಹುದು. ಈ ಕುರಿತು ತಜ್ಞರ ಅಭಿಪ್ರಾಯವೇನು ಗೊತ್ತಾ?
ತಜ್ಞರ ಅಭಿಪ್ರಾಯದ ಪ್ರಕಾರ,ಮಧುಮೇಹದಿಂದ ದೌರ್ಬಲ್ಯದ ಅನುಭವ ಉಂಟಾಗಬಹುದು. ಡೈಬಿಟಿಸ್ ನಿಂದ ಸಕ್ಕರೆ ಮಟ್ಟ ಇಳಿಕೆಯಾಗಿ ನಿಮಗೆ ತಲೆ ಸುತ್ತುವಿಕೆಯ ಅನುಭವ ಉಂಟಾಗಬಹುದು. ಈ ಅನುಭವ ಕ್ಷಣಿಕ ಆಗಿದ್ದರೂ ಕೂಡ ಹಲವು ಅಧ್ಯಯನಗಳು ಶಾರೀರಿಕ ಸಂಬಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರಭಾವ ಬೀರುವುದನ್ನು ಸಮರ್ಥಿಸಿಕೊಂಡಿವೆ. ನಮ್ಮ ದೇಹದಲ್ಲಿರುವ ಪ್ಯಾಂಕ್ರಿಸ್ ಇನ್ಸುಲಿನ್ ಸ್ರವಿಕೆಯನ್ನು ನಿಲ್ಲಿಸಿದ ಸಂದರ್ಭ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತ ಹೋಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದ ಸಂದರ್ಭ ಯುರಿನ್ ಡಿಸ್ಚಾರ್ಜ್ ಹೆಚ್ಚಾಗುವ ಹಾಗೂ ದೇಹದಲ್ಲಿ ದೌರ್ಬಲ್ಯ ಕಾಡುತ್ತದೆ. ಅಷ್ಟೇ ಅಲ್ಲದೆ, ಗಾಯಗಳು ಬೇಗ ವಾಸಿಯಾಗುವುದಿಲ್ಲ.
ಅಧ್ಯಯನದ ಪ್ರಕಾರ ಡೈಬಿಟಿಸ್ ಔಷಧಿಗಳು ಟೆಸ್ಟೋಸ್ಟಿರಾನ್ ಹಾರ್ಮೋನ್ ಸ್ರವಿಕೆಯನ್ನು ಕುಂಠಿತ ವಾಗುವಂತೆ ಪ್ರೇರೇಪಿಸುತ್ತವೆ. ಇದರಿಂದ ಸೇಕ್ಷುವಲ್ ವೀಕ್ನೆಸ್ಸ್ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ತಜ್ಞರ ಪ್ರಕಾರ, ಜಾಗಿಂಗ್ ಹಾಗೂ ಏರೋಬಿಕ್ಸ್ ಎಕ್ಸರ್ಸೈಸ್ ಮಾಡುವ ಹಾಗೆ ಶಾರೀರಿಕ ಸಂಬಂಧ ಬೆಳೆಸುವುದು ಕೂಡ ಒಂದು ವ್ಯಾಯಾಮವಾಗಿದೆ. ಶಾರೀರಿಕ ಚಟುವಟಿಕೆಯಲ್ಲಿ ಪ್ರಮುಖವಾಗಿ ಗ್ಲುಕೋಸ್ ಬಳಕೆಯಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪ್ರಭಾವ ಬೀರಿ ದೈಹಿಕ ಚಟುವಟಿಕೆಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ. ಒಂದು ವೇಳೆ ಶಾರೀರಿಕ ಸಂಬಂಧದ ಬಳಿಕ ನಿಮಗೆ ತಲೆ ಸುತ್ತುವಿಕೆ ಇಲ್ಲವೇ ದೇಹದಲ್ಲಿ ನಿಷಕ್ತಿ ಅನುಭವ ಉಂಟಾಗುತ್ತಿದ್ದರೆ ಅದು ಮಧುಮೇಹದ ಲಕ್ಷಣವಾಗಿರುವ ಸಾಧ್ಯತೆಯಿದೆ. ಹಾಗಾದ್ರೆ , ಶಾರೀರಿಕ ಸಂಬಂಧ ಬೆಳೆಸಿದ ನಂತರ ಒಂದು ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಕೆಯಾಗುತ್ತಿದ್ದರೆ ಏನು ಮಾಡಬೇಕು? ಎಂದು ಯೋಚಿಸುತ್ತಿದ್ದರೆ, ನೀವು ಚಾಕ್ಲೇಟ್, ಬೆಲ್ಲ ಇಲ್ಲವೇ ಕಾಫಿ ಸೇವಿಸಿ ಸಕ್ಕರೆ ಮಟ್ಟವನ್ನು ತಹಬದಿಗೆ ತರಬಹುದು.
ಇದನ್ನೂ ಓದಿ: Students Study Tour: ರಾಜ್ಯದ ಎಲ್ಲಾ ಶಾಲೆಗಳಿಗೂ ಬಂತು ಹೊಸ ರೂಲ್ಸ್ – ಶಿಕ್ಷಣ ಇಲಾಖೆಯಿಂದ ಘೋಷಣೆ