Muslim Women: ಮುಸ್ಲಿಂ ಹುಡುಗಿಯರು ಇನ್ಮುಂದೆ ಬ್ಯೂಟಿ ಪಾರ್ಲರ್’ಗೆ ಹೋಗುವಂತಿಲ್ಲ !! ಅರೆ ಏನಿದು ಶಾಕಿಂಗ್ ನ್ಯೂಸ್?

Share the Article

Muslim Women: ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್​ಗೆ ಹೋಗಬಾರದು ಎಂದು ಉತ್ತರ ಪ್ರದೇಶದ ಧರ್ಮಗುರುವೊಬ್ಬರು ಹೇಳಿಕೆ ನೀಡಿದ್ದು, ಎಲ್ಲೆಡೆ ಚರ್ಚೆ ಶುರುವಾಗಿದೆ. ಹೌದು, ಶುಕ್ರವಾರ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಮುಸ್ಲಿಂ ಧರ್ಮಗುರುವೊಬ್ಬರು ಪುರುಷರು ಉದ್ಯೋಗದಲ್ಲಿರುವ ಬ್ಯೂಟಿ ಪಾರ್ಲರ್‌ಗಳಿಗೆ ಮುಸ್ಲಿಂ ಮಹಿಳೆಯರು ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಪುರುಷರು ಉದ್ಯೋಗದಲ್ಲಿರುವ ಬ್ಯೂಟಿ ಪಾರ್ಲರ್‌ಗಳಲ್ಲಿ ಮುಸ್ಲಿಂ ಮಹಿಳೆಯರು (Muslim Women) ತಮ್ಮ ಮೇಕಪ್ ಮಾಡಿಕೊಳ್ಳುವುದನ್ನು ನಿಷಿದ್ಧ ಮತ್ತು ಕಾನೂನುಬಾಹಿರ ಎಂದು ಮುಫ್ತಿ ಅಸದ್ ಕಾಸ್ಮಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

ಕಳೆದ ತಿಂಗಳು, ಕಾನ್ಪುರದ ಮಹಿಳೆಯೊಬ್ಬರು ಐಬ್ರೋ ಮಾಡಿಸಿದ್ದ ವಿಷಯ ತಿಳಿದ ಪತಿ ಸೌದಿಯಿಂದಲೇ ಫೋನ್ ಮೂಲಕ ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದರು. ಈ ಹಿನ್ನೆಲೆ ಮುಸ್ಲಿಂ ಮಹಿಳೆಯರು ಪುರುಷರು ಉದ್ಯೋಗದಲ್ಲಿರುವ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುವುದನ್ನು ತಡೆಯಿರಿ, ಬದಲಿಗೆ ಮಹಿಳೆಯರು ಮಾತ್ರ ಕೆಲಸ ಮಾಡುವ ಸಲೂನ್‌ಗಳನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

 

ಇದನ್ನು ಓದಿ: Astro Tips: ಸೂರ್ಯ ಮುಳುಗುವಾಗ ಇವುಗಳನ್ನೇನಾದ್ರೂ ಕಂಡಿದ್ದೀರಾ ?! ಹಾಗಿದ್ರೆ ನಿಮ್ಮ ಮನೆಯೊಳಗೆ ಮಹಾಲಕ್ಷ್ಮೀ ಕೂತಿದ್ದಾಳೆ ಎಂದರ್ಥ!!

Leave A Reply