Home News Snake Bite: ಹಾವು ಕಡಿದ್ರೂ 2 ದಿನ ಆರೋಗ್ಯವಾಗಿದ್ದ ಮಹಿಳೆ 3ನೇ ದಿನಕ್ಕೆ ಸಾವು –...

Snake Bite: ಹಾವು ಕಡಿದ್ರೂ 2 ದಿನ ಆರೋಗ್ಯವಾಗಿದ್ದ ಮಹಿಳೆ 3ನೇ ದಿನಕ್ಕೆ ಸಾವು – ಇದೆಂತಾ ವಿಚಿತ್ರ ಹಾವು ಮಾರ್ರೆ ?!

Snake Bite

Hindu neighbor gifts plot of land

Hindu neighbour gifts land to Muslim journalist

Snake Bite: ಚಿಕ್ಕಮಗಳೂರು ತಾಲೂಕಿನ ಅಂಡುವಾನೆ ಗ್ರಾಮದಲ್ಲಿ ಹಾವು ಕಚ್ಚಿದ (Snake Bite)ಎರಡು ದಿನ ಆರೋಗ್ಯವಾಗಿದ್ದ ಮಹಿಳೆ ಮೂರನೇ ದಿನ ಮೃತಪಟ್ಟ(Death)ವಿಚಿತ್ರ ಘಟನೆ ವರದಿಯಾಗಿದೆ.

ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಅಂಡವಾನೆಯ ಸುಜಾತ ಎಂಬ ಮಹಿಳೆ ತಮ್ಮ ಮನೆಯ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಸಂದರ್ಭ ವಿಷಪೂರಿತ ಹಾವೊಂದು(Snake)ಕಚ್ಚಿದ್ದು ಕೂಡಲೇ ಚಿಕ್ಕಮಗಳೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾರೆ.

ಬುಧವಾರ ಚಿಕಿತ್ಸೆ ಪಡೆದು ವಾಪಾಸ್ ಮನೆಗೆ ಮರಳಿದ ಮಹಿಳೆ ಚಿಕಿತ್ಸೆ ಎರಡು ದಿನಗಳವರೆಗೆ ಆರೋಗ್ಯವಾಗಿಯೇ ಇದ್ದರು ಎನ್ನಲಾಗಿದೆ. ಆಸ್ಪತ್ರೆಗೆ ಹೋದಾಗಲೂ ಬಿಪಿ, ಶುಗರ್ ಎಲ್ಲವೂ ನಾರ್ಮಲ್ ಆಗಿಯೇ ಇತ್ತು. ಆದರೆ ಗುರುವಾರ ರಾತ್ರಿ ಏಕಾಏಕಿ ಸುಸ್ತು ಕಂಡುಬಂದಿದೆ. ಮುಂಜಾನೆ ವೇಳೆಗೆ ಸುಜಾತ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ಮತ್ತೆ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ, ತಕ್ಷಣವೇ ಆಕೆಯನ್ನು ಪಟ್ಟಣದ ಆಸ್ಪತ್ರೆಗೆ ಕರೆತಂದಿದ್ದು, ಅಷ್ಟರಲ್ಲಿ ಸುಜಾತ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಾವು ಕಡಿತದಿಂದ ಮಡದಿ ಮೃತಪಟ್ಟಿದ್ದಾಳೆ ಎಂದು ಪತಿ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Shakti Scheme Allowed ID Card: ಫ್ರೀ ಬಸ್ಸಲ್ಲಿ ಓಡಾಡೋ ಮಹಿಳೆಯರೇ, ಇನ್ಮುಂದೆ ಹೀಗೂ ಉಚಿತ ಪ್ರಯಾಣ ಮಾಡಬಹುದು !! ಸರ್ಕಾರದ ಹೊಸ ಆದೇಶ