Home News ಉಡುಪಿ Udupi Family Murder Case: ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಇಂದು...

Udupi Family Murder Case: ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು, ಸ್ಥಳದಲ್ಲಿ ಬಿಗಿ ಬಂದೋಬಸ್ತು!!!

Udupi Family Murder Case

Hindu neighbor gifts plot of land

Hindu neighbour gifts land to Muslim journalist

Udupi Family Murder Case: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ( Udupi Family Murder Case)ಸಂಬಂಧ ಪಟ್ಟಂತೆ ಆರೋಪಿ ಪ್ರವೀಣ್‌ ಅರುಣ್‌ ಚೌಗಲೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್‌ ಚೌಗಲೆ ಬೆಳಗಾವಿಯ ಕುಡಚಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಮೂರು ದಿನಗಳ ಬಳಿಕ ಈತನ ಮೊಬೈಲ್‌ ಆನ್‌ ಆಗಿದ್ದು, ಇದರಿಂದ ಪೊಲೀಸರಿಗೆ ಕೂಡಲೇ ಆತನನ್ನು ಬಂಧಿಸಲಾಗಿದೆ.

ಟೆಕ್ನಿಕಲ್‌ ಸಾಕ್ಷಿಗಳ ಮೂಲಕ ಈತನನ್ನು ಬಂಧಿಸಲಾಗಿದೆ. ಉಡುಪಿ ಪೊಲೀಸರು ಬೆಳಗಾವಿ ಪೊಲೀಸರ ಸಹಾಯದಿಂದ ಖೆಡ್ಡಾಕ್ಕೆ ಬೀಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಮಧ್ಯಾಹ್ನದ ವೇಳೆಗೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಇದನ್ನೂ ಓದಿ: ಉಡುಪಿ: ನಾಲ್ವರ ಹತ್ಯೆ ಪ್ರಕರಣ; ಪ್ರಮುಖ ಸಾಕ್ಷಿಯಾಗಲಿರುವ ಗಾಯಾಳು ಹಾಜಿರಾ ಆಸ್ಪತ್ರೆಯಿಂದ ಬಿಡುಗಡೆ!!

ಪ್ರವೀಣ್‌ ಅರುಣ್‌ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನೆಲೆಯ ಕಾರಣ ನ್ಯಾಯಾಲಯದ ಬಳಿ ಹೆಚ್ಚಿನ ಪೊಲೀಸ್‌ ಭದ್ರತೆಗೆ ಸಿದ್ಧತೆ ಮಾಡಲಾಗಿದೆ. ಉಡುಪಿ ಡಿವೈಎಸ್‌ಪಿ ದಿನಕರ ನೇತೃತ್ವದ ತಂಡ ನ್ಯಾಯಾಲಯದ ಮುಂದೆ ಹೆಚ್ಚಿನ ಭದ್ರತೆಗೆ ಪೊಲೀಸ್‌ ಇಲಾಖೆ ವ್ಯವಸ್ಥೆ ಮಾಡಿದೆ.

3 ಇನ್ಸ್‌ಪೆಕ್ಟರ್‌, 150 ಕಾನ್ಸ್‌ಟೇಬಲ್‌, 25 ಎಎಸೈ, 5 ಪಿಎಸೈ, 3 ಕೆಎಸ್‌ಆರ್‌ಪಿ , 6 ಡಿಎಆರ್‌ ತುಕಡಿಯ ಬಂದೋಬಸ್ತ್‌ ಮಾಡಲಾಗಿದೆ.

ಇದನ್ನೂ ಓದಿ: ಉಡುಪಿ: ನೇಜಾರು 15 ನಿಮಿಷದಲ್ಲಿ ನಾಲ್ವರ ಕೊಲೆ ಮಾಡಿದ ಆರೋಪಿ ಬಂಧನ : ಕೊಲೆಗೆ ಇದೇ ಕಾರಣವೇ ?