Home Karnataka State Politics Updates DV Sadananda Gowda: ಯಡಿಯೂರಪ್ಪನವರು ಸುಳ್ಳು ಹೇಳಿದ್ದಾರೆ, ದೊಡ್ಡ ರಾಜಕಾರಣಿ ಹೀಗನ್ನಬಾರದು- ಅರೆ.. ಹೀಗ್ಯಾಕಂದ್ರು ಸದಾನಂದಗೌಡ್ರು!!

DV Sadananda Gowda: ಯಡಿಯೂರಪ್ಪನವರು ಸುಳ್ಳು ಹೇಳಿದ್ದಾರೆ, ದೊಡ್ಡ ರಾಜಕಾರಣಿ ಹೀಗನ್ನಬಾರದು- ಅರೆ.. ಹೀಗ್ಯಾಕಂದ್ರು ಸದಾನಂದಗೌಡ್ರು!!

DV Sadananda Gowda
Image source Credit: Tv 9 Kannada

Hindu neighbor gifts plot of land

Hindu neighbour gifts land to Muslim journalist

DV Sadananda Gowda: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಬಿಜೆಪಿ ಟಿಕೆಟ್ (BJP Ticket) ಸಿಗುವ ಕುರಿತಂತೆ ಪಕ್ಷದ ಹಲವು ಹಿರಿಯ ಮುಖಂಡರದಲ್ಲಿ ಗೊಂದಲ ಎದುರಾಗಿತ್ತು. ಮಾಜಿ ಸಿಎಂ ಸದಾನಂದ ಗೌಡ (DV Sadananda Gowda) ಅವರು ಈ ಕುರಿತು ಅಸಮಾಧಾನ ಹೊರ ಹಾಕಿದ್ದರು. ಈ ನಡುವೆ, ಸದಾನಂದ ಗೌಡರು, ಚುನಾವಣಾ ರಾಜಕೀಯಕ್ಕೆ (Electoral Politics) ನಿವೃತ್ತಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಘಟಕದಿಂದ ಚುನಾವಣೆಗೆ (Assembly Election)ಸ್ಪರ್ಧೆ ಮಾಡದಂತೆ ಪಕ್ಷದ ನನಗೆ ಯಾವುದೇ ಸೂಚನೆ ನೀಡಿಲ್ಲ ಎಂಬುದಾಗಿ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಬಲ್ಲೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡರು ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಯಡಿಯೂರಪ್ಪ(B. S. Yediyurappa) ಅವರು ಹಿರಿಯ ರಾಜಕಾರಣಿಯಾಗಿದ್ದು, ಅವರು ಈ ರೀತಿಯ ಸುಳ್ಳು ಹೇಳುವುದು ಒಳ್ಳೆಯದಲ್ಲ. ನನಗೆ ಯಾವುದೇ ರೀತಿಯ ಸೂಚನೆಯಾಗಲಿ ಇಲ್ಲವೇ ಸಂದೇಶವಾಗಲಿ ಪಕ್ಷದ ಕೇಂದ್ರ ಘಟಕದಿಂದ ಬಂದಿಲ್ಲ. ವರಿಷ್ಠರ ಜತೆ ಈ ಸಂಬಂಧ ಚರ್ಚೆಯನ್ನೂ ಕೂಡ ನಡೆಸಿಲ್ಲ ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಒತ್ತಡ ಇಲ್ಲ ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. ನಾನು ಆಂಜನೇಯನ ರೀತಿ ಎದೆ ಬಗೆದು ತೋರಿಸಲು ಆಗುವುದಿಲ್ಲ. ಸತ್ಯವನ್ನೇ ಹೇಳಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಅಂತ 2019ರಲ್ಲೇ ಹೇಳಿಕೊಂಡಿದ್ದೆ. ಆಗ ಪಕ್ಷ ಮತ್ತು ಸಂಘ ಇದೊಂದು ಬಾರಿ ಸ್ಪರ್ಧೆ ಮಾಡಲು ಸೂಚಿಸಿದ್ದರು. ಇದುವರೆಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ರಾಜಕೀಯ ನಿವೃತ್ತಿಯ ನಿಲುವಿನ ಬಗ್ಗೆ ನನ್ನ ಮನೆಯವರಿಗೆ ಬಿಟ್ಟು, ಬೇರೆ ಯಾರ ಬಳಿಯೂ ಚರ್ಚೆ ಮಾಡಿ ತೀರ್ಮಾನ ಮಾಡಿಲ್ಲ ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಬಿಜೆಪಿಯ ಹಿರಿಯ ನಾಯಕರಾಗಿ ಏಕಾಏಕಿ ಈ ರೀತಿ ಹೇಳಬಾರದಿತ್ತು. ಬಹುಶಃ ಯಡಿಯೂರಪ್ಪನವರಿಗೆ ಈ ಹಿಂದೆ ಸುಮ್ಮನೆ ಕುಳಿತುಕೊಳ್ಳಿ, ಇಲ್ಲದಿದ್ದರೆ ಜಾಗೃತೆ ಎಂದು ಪಕ್ಷ ಹೇಳಿರಬಹುದು. ಚುನಾವಣಾ ರಾಜಕಾರಣದಿಂದ ಅವರನ್ನು ದೂರ ಮಾಡಿದ್ದಕ್ಕೆ ನನಗೂ ಇದೇ ರೀತಿ ಮಾಡಿರಬಹುದು ಎಂದು ಭಾವಿಸಿ ಹೇಳಿಕೆ ನೀಡಿರಬಹುದು ಎಂದು ಟಕ್ಕರ್ ನೀಡಿದ್ದಾರೆ.

 

ಇದನ್ನು ಓದಿ: Beauty Tips: ಮುಖದ ಅಂದವನ್ನೇ ಹಾಳು ಮಾಡೋ ‘ಬ್ಲಾಕ್ ಹೆಡ್’ ನಿಂದ ರೋಸಿಹೋಗಿದ್ದೀರಾ ?! ಹೀಗೆ ಮಾಡಿ, ಚಂದವಾಗಿ ಕಾಣಿರಿ