Diabetes: ಜನರೆ ಎಚ್ಚರ.. ಸಕ್ಕರೆಯಿಂದ ಮಾತ್ರವಲ್ಲ ಉಪ್ಪು ತಿಂದರೂ ಶುಗರ್ ಬರುತ್ತೆ!!
Diabetes: ಜಗತ್ತು ಮುಂದುವರೆದಷ್ಟು ಅನೇಕ ರೋಗರು ರುಜಿನಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಅದರಲ್ಲೂ ಕೂಡ ಸಕ್ಕರೆ ಕಾಯಿಲೆ ಅಥವಾ ಮಧುಮೇಹ(Diabetes) ಎಂಬುದು ಪ್ರತಿಯೊಬ್ಬರಿಗೂ ಭಯ ತರಿಸಿದೆ. ಅದರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂದರೆ ಮೊದಲು ವಯಸ್ಸಾದ ಮುದುಕು, ಮುದಕಿಯರಿಗೆ ಮಾತ್ರ ಈ ರೋಗ ಬರುತ್ತಿತ್ತು. ಆದರಿಂದು ಯುವಜನತೆಗಲ್ಲದೆ ಚಿಕ್ಕ ಚಿಕ್ಕ ಮಕ್ಕಳಿಗೂ ಶುಗರ್ ವಕ್ಕರಿಸುತ್ತಿದೆ. ಆದರೀಗ ಮತ್ತೊಂದು ಆಘಾತಕಾರಿ ವಿಚಾರ ಹೊರಬಿದ್ದಿದ್ದು, ಸಕ್ಕರೆ, ಸಿಹಿ ತಿಂದರೆ ಮಾತ್ರವಲ್ಲ ಉಪ್ಪು ತಿಂದರೂ ಕೂಡ ಶುಗರ್ ಬರುತ್ತೆ ಎಂದು ಅಧ್ಯಯನವೊಂದು ಹೇಳಿದೆ.
ಹೌದು, ಹಲವರು ಸಿಹಿ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಹಲವರ ನಂಬಿಕೆ ಯಾಗಿತ್ತು. ಆದರೆ ಅದಕ್ಕೆ ಎಲ್ಲಾ ವಿಜ್ಞಾನಿಗಳು, ಆರೋಗ್ಯ ತಜ್ಞರು ಸಿಹಿ ತಿಂದರೆ ಸಕ್ಕರೆ ಕಾಯಿಲೆ ಬರುವುದಿಲ್ಲ ಆದರೆ ಸಕ್ಕರೆ ಕಾಯಿಲೆ ಬಂದ ನಂತರ ಸಿಹಿ ತಿನ್ನಬಾರದು ಎಂದಿದ್ದರು. ಆದರೂ ಕೂಡ ಹಲವರು ಹಿರಿಯರು ಸಿಹಿ ತಿನ್ನಲು ಅಂಜುತ್ತಿದ್ದರು. ಆದರೆ ಈಗ ಸಕ್ಕರೆ ಮಾತ್ರವಲ್ಲ ಉಪ್ಪು ತಿಂದರೂ ಕೂಡ ಶುಗರ್ ಬರುತ್ತದೆ ಎಂದು ಆಘಾತಕಾರಿ ವಿಚಾರವೊಂದನ್ನು ಅಧ್ಯಯನವೊಂದು ಕಂಡುಹಿಡಿದಿದೆ.
ಅಂದಹಾಗೆ ಟುಲೇನ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇರಿಸುವವರಿಗೆ ಟೈಪ್-2 ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ. ಜನರು ಸಾಮಾನ್ಯವಾಗಿ ಎಷ್ಟು ಉಪ್ಪು ಸೇವಿಸುತ್ತಾರೆ ಎಂಬುದನ್ನು ಪರೀಕ್ಷಿಸಲು ಇಂಗ್ಲೆಂಡ್ನಿಂದ 4,00,000 ಜನರ ಮೇಲೆ ಸಮೀಕ್ಷೆಯನ್ನು ನಡೆಸಲಾಯಿತು. ಸುಮಾರು 12 ವರ್ಷಗಳ ಕಾಲ ಅಧ್ಯಯನದಲ್ಲಿ ಭಾಗವಹಿಸಿದವರ ಅನುಸರಣೆಯಲ್ಲಿ 13,000 ಕ್ಕೂ ಹೆಚ್ಚು ಜನರು ಟೈಪ್ 2 ಮಧುಮೇಹವನ್ನು ಹೊಂದುತ್ತಾರೆ. ಪದೇ, ಪದೇ ಉಪ್ಪು ಬಳಸುವವರು 13%, 20% ಮತ್ತು 39% ರಷ್ಟು ಜನರು ಟೈಪ್-2 ಮಧುಮೇಹವನ್ನು ಹೊಂದುವ ಸಾಧ್ಯತೆ ಹೆಚ್ಚಂತೆ !!
ಇನ ಉಪ್ಪು ಕಾರಣ ಎಂಬುವುದಕ್ಕೆ ಯಾವುದೇ ನಿಖರವಾದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆದರೆ ಸಾಮಾನ್ಯವಾಗಿ ಸೇವಿಸುವುದಕ್ಕಿಂತಲೂ ಹೆಚ್ಚು ಉಪ್ಪನ್ನು ಆಹಾರದೊಂದಿಗೆ ಸೇವಿಸುವುದು ಮಧುಮೇಹಕ್ಕೆ ಕಾರಣವಿರಬಹುದು. ಇದರಿಂದಾಗಿ ಬೊಜ್ಜು ಹೆಚ್ಚಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಹೀಗಾಗಿ ಇನ್ಮುಂದೆ ಸೇವಿಸುವಾಗ ಸಕ್ಕರೆಯಂತೆ ಉಪ್ಪು ಕೂಡ ಮಿತವಾಗಿದ್ದರೆ ಒಳ್ಳೆಯದು.
ಇದನ್ನು ಓದಿ: Ration Card Updates: ರೇಷನ್ ಕಾರ್ಡ್’ಗೆ ಅರ್ಜಿ ಹಾಕಿದವರಿಗೆ ಮಹತ್ವದ ಮಾಹಿತಿ – ಹೊಸ ಕಾರ್ಡ್ ಪಡೆಯಲು ಹೀಗೆ ಮಾಡಿ !!