Gruha Lakshmi yojana: ಮಹಿಳೆಯರೇ ‘ಗೃಹಲಕ್ಷ್ಮೀ’ ಗೆ ಬಂತು ಹೊಸ ರೂಲ್ಸ್ – 3ನೇ ಕಂತಿನ ಹಣ ಬೇಕಂದ್ರೆ ಈ ಕೆಲಸ ಕಡ್ಡಾಯ !!

Karnataka news Congress guarantee gruhalakshmi scheme new rules 3rd installment money update

Gruha Lakshmi yojana: ಕಾಂಗ್ರೆಸ್ ಸರ್ಕಾರವು, ಆಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆ(Gruha Lakshmi yojana ) ಹಣವನ್ನು ರಾಜ್ಯದ(Karnataka Government) ಮಹಿಳೆಯರಿಗೆ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ತಲಾ ಎರಡು ಸಾವಿರ ರೂಪಾಯಿಯಂತೆ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಯನ್ನು ಈಗಾಗಲೇ ಯಜಮಾನಿಯರ ಖಾತೆಗೆ ಸರ್ಕಾರವು ಹಣ ಜಮಾ ಮಾಡಿದೆ. ಇನ್ನು ಕೆಲವರ ಖಾತೆಗೆ ಹಣ ಜಮಾ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕೆಲವು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಸದ್ಯ ಗೃಹ ಲಕ್ಷ್ಮೀ ಹಣ ಸಿಗದ ಮಹಿಳೆಯರು ಈ ಮಾಹಿತಿ ತಿಳಿಯಿರಿ. ಹೌದು, ಮೂರನೇ ಕಂತಿನ ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಹಣವನ್ನು ನೇರವಾಗಿ ಟ್ರಾನ್ಸ್ಫರ್ (Direct Transfer) ಮಾಡುವಂತಹ ಆದೇಶವನ್ನು ಕೂಡ ನೀಡಲಾಗಿದೆ. ಈ ಯೋಜನೆ ಅಡಿಯಲಿ ಮೊದಲ ಎರಡು ಕಂತುಗಳನ್ನು ಸರ್ಕಾರದಿಂದ ಟ್ರಾನ್ಸರ್ ಮಾಡಲಾಗಿದ್ದು ಮೂರನೇ ಕಂತಿನ ಹಣವನ್ನು ಮುಂದಿನ ತಿಂಗಳು ಪಡೆಯುವುದಕ್ಕಿಂತ ಮುಂಚೆ ಈ ಕೆಲಸವನ್ನು ಮಾಡಲೇಬೇಕು ಎನ್ನುವುದಾಗಿ ಗ್ರಹಿಣಿಯರಿಗೆ ತಿಳಿಸಲಾಗಿದೆ.

ಮುಖ್ಯವಾಗಿ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿಗೆ ಹೋಗಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ(Bank passbook) ಹಾಗೂ ಅರ್ಜಿ ಸ್ವೀಕೃತಿ ಪತ್ರದ ಜೆರಾಕ್ಸ್ ಅನ್ನು ನೀಡಬೇಕಾಗಿರುತ್ತದೆ. ಈ ನಾಲ್ಕು ಪ್ರಮುಖ ದಾಖಲೆಗಳನ್ನು ನೀಡುವ ಮೂಲಕ ಮೂರನೇ ಕಂತಿನ ಹಣವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಅದಲ್ಲದೆ ಈ ಹಿಂದಿನ ಎರಡು ಕಂತುಗಳು ಬಂದಿಲ್ಲ ಎಂದಾದರೆ ಅದು ಯಾಕೆ ಬಂದಿಲ್ಲ ಎನ್ನುವಂತಹ ಮಾಹಿತಿಗಳು ಕೂಡ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್- ಹೊಸ ನಿಯಮದಂತೆ ಮೂಲ ವೇತನದಲ್ಲಿ ಭಾರೀ ಏರಿಕೆ !!

Leave A Reply

Your email address will not be published.