PF ಖಾತೆದಾರರೇ ನಿಮಗಿದೋ ಭರ್ಜರಿ ಸಿಹಿ ಸುದ್ದಿ; ನಿಮ್ಮ ಖಾತೆಗೆ ಸೇರಲಿದೆ ಇಷ್ಟು ಹಣ! ಸರಕಾರದಿಂದ ಬಂದಿದೆ ಅಧಿಕೃತ ಆದೇಶ!!!
EPFO: ಕೇಂದ್ರ ಸರಕಾರ ಸರಕಾರಿ ನೌಕರರಿಗೆ ಇನ್ನೊಂದು ಭರ್ಜರಿ ಗಿಫ್ಟ್ ನೀಡಿದ್ದು, 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ(EPFO) ಅಡಿಯಲ್ಲಿ ಠೇವಣಿಗಳ ಮೇಲೆ 8.15% ಬಡ್ಡಿಯನ್ನು ನೀಡಿದ್ದು, ಇದರಿಂದ ಕೇಂದ್ರ ಸರಕಾರಿ ನೌಕರರ ಭವಿಷ್ಯ ಭದ್ರವಾಗಲಿದೆ. ಸೋಮವಾರ EPFO ತನ್ನ ಅಧಿಕೃತ ಆದೇಶದಲ್ಲಿ ಈ ಸುದ್ದಿಯನ್ನು ತಿಳಿಸಿದೆ.
ಸರಕಾರ ಬಡ್ಡಿ ಪಾವತಿ ದಿನಾಂಕವನ್ನು ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಆದರೆ ಸರಕಾರ ಇದನ್ನು ಕೂಡಾ ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎಂದು ವರದಿಯಾಗಿದ್ದು, ಉದ್ಯೋಗಿಯ ಖಾತೆಗೆ ಸರಕಾರವು ಇಪಿಎಫ್ ಬಡ್ಡಿಯನ್ನು ಜಮಾ ಮಾಡಿದಾಗ ದೊಡ್ಡ ಮೊತ್ತ ಸಿಗಲಿದೆ ಎಂದು ಹೇಳಲಾಗಿದೆ.
ಪರಿಶೀಲಿಸುವ ರೀತಿ;
ಎಸ್ಎಂಎಸ್ ಕಳುಹಿಸುವ ಮೂಲಕ
ಉಮಾಂಗ್ ಅಪ್ಲಿಕೇಶನ್ ಮೂಲಕ
ಇಪಿಎಫ್ಒ ವೆಬ್ಸೈಟ್ ಮೂಲಕ
ಮಿಸ್ಡ್ ಕಾಲ್ ನೀಡುವ ಮೂಲಕ
ಎಸ್ಎಂಎಸ್ : ಪಿಎಫ್ ಬ್ಯಾಲೆನ್ಸ್ ಅನ್ನು ಎಸ್ಎಂಎಸ್ ಮೂಲಕ ಪರಿಶೀಲಿಸಲು, ಇಪಿಎಫ್ಒದಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 7738299899 ಗೆ ಎಸ್ಎಂಎಸ್ ಕಳುಹಿಸಬೇಕು. EPFO UAN LAN ಎಂದು ಟೈಪ್ ಮಾಡಿದರೆ ಸಾಕು. ಇಲ್ಲಿ ಎಲ್ಎಎನ್ ಎಂದು ಭಾಷೆ.
ಉಮಂಗ್ ಆ್ಯಪ್: PF ಚಂದಾದಾರರು ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ, ಎಲ್ಲೂ ಹೋಗದೆ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
EPFO ವೆಬ್ಸೈಟ್ : ನೀವು EPFO ನ ಅಧಿಕೃತ ವೆಬ್ಸೈಟ್ಗೆ (epfindia.gov.in) ಭೇಟಿ ನೀಡುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು.
ಮಿಸ್ಡ್ ಕಾಲ್ : ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಖಾತೆದಾರರ ಮೊಬೈಲ್ ಸಂಖ್ಯೆಯನ್ನು ಇಪಿಎಫ್ಒದಲ್ಲಿ ನೋಂದಾಯಿಸಿಕೊಳ್ಳಬೇಕು. ಪಿಎಫ್ ಚಂದಾದಾರರು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಖಾತೆಯ ಮಾಹಿತಿಯನ್ನು ನಿಮ್ಮ ಮೊಬೈಲ್ಗೆ SMS ಮೂಲಕ ಕಳುಹಿಸಲಾಗುತ್ತದೆ.