Home Health Fish Oil: ದೇಹಕ್ಕೆ ‘ಒಮೆಗಾ 3 ಫ್ಯಾಟಿ ಆಮ್ಲ’ವನ್ನು ಕೊಡುವುದು ಮೀನೋ ಅಥವಾ ಮೀನಿನ ಎಣ್ಣೆಯೋ?.....

Fish Oil: ದೇಹಕ್ಕೆ ‘ಒಮೆಗಾ 3 ಫ್ಯಾಟಿ ಆಮ್ಲ’ವನ್ನು ಕೊಡುವುದು ಮೀನೋ ಅಥವಾ ಮೀನಿನ ಎಣ್ಣೆಯೋ?.. ಏನು ಹೇಳುತ್ತೆ ಸೈನ್ಸ್?

Fish Oil

Hindu neighbor gifts plot of land

Hindu neighbour gifts land to Muslim journalist

Fish oil: ಮೀನು (Eating Fish)ಸೇವಿಸುವ ಹೆಚ್ಚಿನ ಮಂದಿಗೆ ಒಮೆಗಾ 3 ಫ್ಯಾಟಿ ಆಸಿಡ್ ಪಡೆಯಲು ಯಾವುದು ಉತ್ತಮ ಎಂಬ ಗೊಂದಲ ಕಾಡದಿರದು. ಮೀನು ಮತ್ತು ಮೀನಿನ ಎಣ್ಣೆಯು (Fish Oil)ಒಮೆಗಾ 3 ಫ್ಯಾಟಿ ಆಮ್ಲದ ಆಗರವಾಗಿದೆ.

ಮೀನು ಅಥವಾ ಮೀನಿನ ಎಣ್ಣೆ ಒಮೆಗಾ 3 ಫ್ಯಾಟಿ ಆಮ್ಲವಿದ್ದು, ಯಾವುದು ಹೆಚ್ಚು ಪ್ರಯೋಜನಕಾರಿ(Useful)ಎಂಬುದನ್ನು ಅಧ್ಯಯನವೊಂದು ಮಾಹಿತಿ ನೀಡಿದೆ. ವ್ಯಕ್ತಿಯ ಆರೋಗ್ಯ ನಿರ್ವಹಣೆಯಲ್ಲಿ ಆಮ್ಲದ ಪಾತ್ರ ಮಹತ್ತರವಾಗಿದ್ದು, ಮೀನು ಹಾಗೂ ಮೀನಿನ ಎಣ್ಣೆಗಳು ಒಮೆಗಾ 3 ಫ್ಯಾಟಿ ಆಯಸಿಡ್ ಹೊಂದಿದ್ದು, ಇದು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ.

ಮೀನಿನ ಎಣ್ಣೆ ಅಂಶವೂ ಮೀನಿನ ಎಣ್ಣೆಯನ್ನು ಸೇವಿಸುವುದಲ್ಲಿ ಮೀನನ್ನು ಸೇವಿಸದ ಜನರಿಗೆ ಹೆಚ್ಚಿನ ಜನರಲ್ಲಿ ಕಾಣಬಹುದು ಎಂಬುದನ್ನು ಪ್ರಾಥಮಿಕ ಅಧ್ಯಯನ ವರದಿ ಮಾಡಿದೆ. ಅದೇ ರೀತಿ ಮತ್ತೊಂದು ಅಧ್ಯಯನದಲ್ಲಿ ಮೀನಿನ ಎಣ್ಣೆ ಮಾತ್ರೆಗಳು ಮೀನು ಸೇವಿಸಿದಷ್ಟೇ ಪ್ರಯೋಜನಕಾರಿ ಫಲಿತಾಂಶವನ್ನು ಒದಗಿಸುತ್ತದೆ. ಮೀನು ಕೇವಲ ಒಮೆಗಾ ಫ್ಯಾಟಿ ಆಯಸಿಡ್ ಮಾತ್ರ ಒಳಗೊಂಡಿರುವುದಿಲ್ಲ. ಇದರ ಜೊತೆಗೆ ಪ್ರೊಟೀನ್, ವಿಟಮಿನ್ ಎ, ವಿಟಮಿನ್ ಡಿ, ಐಯೋಡಿನ್ ಮತ್ತು ಸೆಲೆನಿಯಂ ಕೂಡ ಇರುತ್ತದೆ. ಈ ಎಲ್ಲಾ ಅಂಶಗಳು ಒಟ್ಟಾರೆ ದೇಹಕ್ಕೆ ಕೊಡುಗೆಯನ್ನು ನೀಡುತ್ತದೆ.

ಒಮೆಗಾ 3 ಫ್ಯಾಟಿ ಆಮ್ಲಗಳು ಬಹು ಅಪರ್ಯಾಪ್ತ ವಿಧದ ಕೊಬ್ಬಿನ ಆಮ್ಲಗಳಾಗಿದ್ದು, ಇದನ್ನು ನಮ್ಮ ದೇಹ ಉತ್ಪಾದಿಸುವುದಿಲ್ಲ.ಮಿದುಳಿನ ಆರೋಗ್ಯವನ್ನು ಹೆಚ್ಚಿಸಿ, ಅಸ್ಥಿ ಸಂಧಿವಾತದ ಲಕ್ಷಣಗಳನ್ನು ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ, ಆಹಾರದಿಂದ ನಾವು ಈ ಆಮ್ಲ ಪಡೆಯುವುದು ಅನಿವಾರ್ಯ. ಇನ್ನು ಈ ಒಮೆಗಾ 3 ಫ್ಯಾಟಿ ಆಯಸಿಡ್ನಲ್ಲಿ ಮೂರು ವಿಧಗಳಿವೆ. ಮೊದಲನೆಯದು ಅಲ್ಫಾ ಲಿನೊಲೆಕ್ ಆಯಸಿಡ್ (ALA). ಇದು ಹಸಿರು ಎಲೆಗಳ ತರಕಾರಿ, ವಾಲ್ನಟ್, ಫ್ಲೆಕ್ಸ್ ಸೀಡ್ ಮತ್ತು ಚಿಯಾ ಸೀಡ್ (ಕಾಮ ಕಸ್ತೂರಿ ಬೀಜ)ದಲ್ಲಿ ಸೇರಿಕೊಂಡಿದೆ.

ಐಕೋಸಾಪೆಂಟೇನೊಯಿಕ್ ಆಮ್ಲ (EPA) ಎರಡನೆಯದ್ದು, ಅದೇ ರೀತಿ, ಮೂರನೆಯದು ಡೊಕೊಸಾಹೆಕ್ಸೆನೊಯಿಕ್ ಆಮ್ಲ ಈ ಎರಡು ಅಮ್ಲಗಳು ಸಮುದ್ರ ಆಹಾರ, ಮೊಟ್ಟೆ ಮತ್ತು ಹಾಲಿನಲ್ಲಿ ದೊರೆಯುತ್ತದೆ. ಈ ಆಮ್ಲಗಳು ಕೋಶಗಳ ಸರಿಯಾದ ರಚನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹೃದಯ, ಶ್ವಾಸಕೋಶ, ರಕ್ತ ನಾಳ ಮತ್ತು ಇಮ್ಯೂನ್ ವ್ಯವಸ್ಥೆಯಲ್ಲಿ ಇದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: Solar Pumpset: ರೈತರಿಗೆ ಖುಷಿ ಸುದ್ದಿ- ಸೋಲಾರ್ ಪಂಪ್‌ಸೆಟ್‌ಗಾಗಿ ಅರ್ಜಿ ಆಹ್ವಾನ – ಸಿಗೋ ಸಹಾಯಧನ ಎಷ್ಟು, ಅರ್ಜಿ ಸಲ್ಲಿಸುವುದು ಎಲ್ಲಿ ?