White Hair Home Remedies: ಈ ಕಪ್ಪು ಕಾಳನ್ನು ದಾಸವಾಳದೊಂದಿಗೆ ಬೆರೆಸಿ ಹಚ್ಚಿ- ಬಿಳಿ ಕೂದಲು ಕಪ್ಪಾಗೋದು ಮಾತ್ರವಲ್ಲ, ಮುಂದೆಂದೂ ಬಿಳಿ ಕೂದಲೇ ಬರೋದಿಲ್ಲ
Lifestyle hair care tips home remedies for reduce white hair using hibiscus
Home Remedies for White Hair: ಕೂದಲು ಕಪ್ಪಗೆ ಕಾಣಬೇಕು ಎಂದು ಬಹುತೇಕರ ಹಂಬಲ. ಅದಕ್ಕಾಗಿ ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿ ಸೋತು ಹೋಗುತ್ತಾರೆ. ಆದರೆ ನಿಮ್ಮ ಸುತ್ತಲಿನ ಪ್ರಕೃತಿಯಲ್ಲೇ ದೊರಕುವ ಕೆಲ ವಸ್ತುಗಳು ಕೂದಲನ್ನು ಕಪ್ಪಾಗಿಸಲು ಸಹಾಯಕವಾಗಿವೆ. ಹೌದು, ದಾಸವಾಳದ ಜೊತೆ ಈ ಕಪ್ಪು ಕಾಳನ್ನು ಅರೆದು ನೆತ್ತಿಗೆ ಹಚ್ಚಿದರೆ ಎಷ್ಟೇ ಬಿಳುಪಾದ ಕೂದಲು ಸಹ ಬುಡದಿಂದಲೇ ಕಪ್ಪಾಗುತ್ತೆ(Home Remedies for White Hair).
ಮುಖ್ಯವಾಗಿ ದಾಸವಾಳ ಮತ್ತು ಕಪ್ಪು ಎಳ್ಳು ಒಟ್ಟಿಗೆ ಕೂದಲಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇವು ಕೂದಲನ್ನು ಬೇರುಗಳಿಂದ ಪೋಷಿಸುತ್ತವೆ, ಇದಲ್ಲದೆ, ಕೂದಲು ಉದುರುವಿಕೆಯನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕಾಗಿ ದಾಸವಾಳದ ಹೂವು ಮತ್ತು ಕಪ್ಪು ಎಳ್ಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ಕೂದಲಿಗೆ ಹಚ್ಚಿದಲ್ಲಿ, ಈ ಎಣ್ಣೆಯು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. ಇದಲ್ಲದೇ ದಾಸವಾಳ ಮತ್ತು ಕಪ್ಪು ಎಳ್ಳಿನಿಂದ ತಯಾರಿಸಿದ ಈ ಎಣ್ಣೆಯು ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಕಪ್ಪು ಎಳ್ಳು ಮೆಗ್ನೀಸಿಯಮ್, ಪ್ರೊಟೀನ್, ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್ ಮತ್ತು ಫೈಬರ್ನಂತಹ ಗುಣಗಳನ್ನು ಹೊಂದಿದ್ದು ಅದು ಕೂದಲನ್ನು ಒಳಗಿನಿಂದ ಪೋಷಿಸುತ್ತದೆ ಮತ್ತು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಇನ್ನು ದಾಸವಾಳವು ವಿಟಮಿನ್ ಸಿ ಮತ್ತು ಎ ಹಾಗೂ ಕಬ್ಬಿಣಾಂಶವನ್ನು ಹೊಂದಿರುತ್ತದೆ. ದಾಸವಾಳ ಮತ್ತು ಕಪ್ಪು ಎಳ್ಳು ಎರಡೂ ಒಟ್ಟಾಗಿ ಮಾಲಿನ್ಯದಿಂದ ಉಂಟಾಗುವ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ ಮತ್ತು ಕೂದಲಿನ ಬಣ್ಣವನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಅಡುಗೆ ಮನೆ ಕ್ಲೀನ್ ಮಾಡಿ ಮಾಡಿ ಸಾಕಾಗಿದೆಯಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ, ಫಳ ಫಳ ಹೊಳೆಯುವಂತೆ ಮಾಡಿ