Nanu Nandini fame Vickey: ʼನಾನು ನಂದಿನಿʼ ಫೇಮ್‌ ವಿಕ್ಕಿ ʼಬಿಗ್‌ಬಾಸ್‌ʼ ಮನೆಯಲ್ಲಿ!!!

entertainment news nanu nandini fame vicky in biggboss house twist news

Share the Article

ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಖ್ಯಾತಿಯ ವಿಕ್ರಮ್‌ ಅಲಿಯಾಸ್‌ ವಿಕ್ಕಿ ಅವರು ಬೀಗ್‌ಭಾಸ್‌ ಮನೆಯೊಳಕ್ಕೆ ಹೋಗಿದ್ದಾರೆ. ಹೌದು. ಬಿಗ್‌ಬಾಸ್‌ ಮನೆಯ ಕಾರ್ಯಾಚರಣೆಗಳನ್ನು ಹಾಸ್ಯದ ರೂಪದಲ್ಲಿ ಬೀಗ್‌ ಭಾಸ್‌ ಹೆಸರಿನಲ್ಲಿ ವಿಕ್ಕಿ ಮತ್ತು ಅವರ ತಂಡ ಮಾಡಿದ್ದು, ಕೂಲ್‌ ಕಲರ್ಸ್‌ ಕನ್ನಡ ಎನ್ನುವ ಚಾನೆಲ್‌ ಇಟ್ಟುಕೊಂಡು ಬೀಗ್‌ ಭಾಸ್‌ ಎಂಬುವುದನ್ನು ಮಾಡಿದ್ದಾರೆ. ಬಾಡಿ, ಹಾರ್ಟ್‌ ನೋಡಿ ಲವ್‌ ಮಾಡ್ತೀರೋ ಎಂದು ತನ್ನ ಬಾಯ್‌ಫ್ರೆಂಡ್‌ನಲ್ಲಿ ವಿಕ್ಕಿ ಕೇಳುವುದು, ಇನ್ನೋರ್ವ ಟಾಯ್ಲೆಟ್‌ ಕ್ಲೀನ್‌ ಮಾಡುವಂತೆ ಸ್ಪರ್ಧಿಯಾಗಿರುವ ಬೆಕ್ಕಿಗೆ ಹೇಳುವುದು ಇದೆಲ್ಲ ಸೃಷ್ಟಿ ಮಾಡಿದ್ದಾರೆ.

ಈ ರೀತಿ ಪ್ರಾರಂಭವಾಗುವ ಈ ವೀಡಿಯೋ ಹಾಸ್ಯದ ರೂಪದಲ್ಲಿ ಇರಲಿದೆ. ಟಾಯ್ಲೆಟ್‌ ಕ್ಲೀನಿಂಗ್‌ ಜಗಳ ನಡೆಯುವಾಗ ಬೀಗ್‌ಭಾಸ್‌ ಕಡೆಯಿಂದ ಬುಲಾವ್‌ ಬರುವುದು, ಕನ್‌ಫೆಷನ್‌ ರೂಂನಲ್ಲಿ ಆಗಬಾರದ್ದು ಆಗಿದೆ ಎನ್ನವುದು ಇದೆಲ್ಲ ನೀವು ಈ ವೀಡಿಯೋ ನೋಡಿ ಹಾಸ್ಯದ ನಗೆಗಡಲಲ್ಲಿ ತೇಲಾಡಬಹುದು.

ಒರಿಜಿನಲ್‌ ಬಿಗ್‌ಬಾಸ್‌ನಿಂದ ನಿಮ್ಮದೇ ಬೀಗ್‌ ಭಾಸ್‌ ಚೆನ್ನಾಗಿದೆ ಎಂದು ಹಲವು ಮಂದಿ ಶ್ಲಾಘನೆ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್‌ ಕುಮಾರ್‌ ಅವರ ಘೋಸ್ಟ್‌ ಚಿತ್ರದ ಪ್ರಮೋಷನ್‌ಗಾಗಿ ವಿಕ್ಕಿ ಮತ್ತು ಅವರ ತಂಡವನ್ನು ವಿಭಿನ್ನ ರೂಪದಲ್ಲಿ ಚಿತ್ರತಂಡ ಬಳಸಿಕೊಂಡಿತ್ತು.

 

View this post on Instagram

 

A post shared by Vicky Pedia (@vickypedia_007)

Leave A Reply