Vikram-Pragyan: ಚಂದ್ರನ ಮೇಲೆ ಲ್ಯಾಂಡ್ ಆಗುವಾಗ ವಿಕ್ರಮ್ ಲ್ಯಾಂಡರ್ ಏನು ಮಾಡಿತ್ತು ಗೊತ್ತಾ ?!! ಅಬ್ಬಬ್ಬಾ.. ಬಯಲಾಯ್ತು ಭಯಾನಕ ಸತ್ಯ

Vikram-Pragyan: ಭಾರತೀಯರ ಹಲವು ವರ್ಷಗಳ ಕನಸು ಚಂದ್ರಯಾನ-3 ಅಂದುಕೊಂಡಂತೆ ನನಸಾಗಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಮಾಡಿದೆ. ವಿಕ್ರಮ್ ಲ್ಯಾಂಡರ್(Vikram lander) ಹಾಗೂ ಪ್ರಗ್ಯಾನ್ ರೋವರ್ (Pragyan rover) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಸಾಕಷ್ಟು ಮಾಹಿತಿ ಒದಗಿಸಿವೆ. ಇದೀಗ ವಿಕ್ರಮ್ ಲ್ಯಾಂಡರ್(Vikram-Pragyan) ಹಾಗೂ ಪ್ರಗ್ಯಾನ್ ರೋವರ್ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವಾಗ ವಿಕ್ರಮ್ ಲ್ಯಾಂಡರ್ ಏನು ಮಾಡಿತ್ತು ಗೊತ್ತಾ ?!! ಅಬ್ಬಬ್ಬಾ.. ಬಯಲಾಯ್ತು ಭಯಾನಕ ಸತ್ಯ !

ಆ. 23ರಂದು ಸಂಜೆ 6 ಗಂಟೆಗೆ ಸರಿಯಾಗಿ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆಯಿತು. ಇದಾದ ಮಾರನೇ ದಿನವೇ ಲ್ಯಾಂಡರ್​ ಒಳಗಿದ್ದ ಪ್ರಗ್ಯಾನ್​ ರೋವರ್​ ಚಂದ್ರನ ಮೇಲ್ಮೈಗೆ ಬಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ನಂತರ 14 ದಿನಗಳ ಕಾಲ ಪ್ರಜ್ಞಾನ್ ರೋವರ್ ಭೂಮಿಗೆ ನಿರಂತರವಾಗಿ ಅನೇಕ ಮಾಹಿತಿಗಳನ್ನು ರವಾನಿಸಿತು. ಅಂದರೆ ಚಂದ್ರನ ಒಂದು ದಿನ ಭೂಮಿಯ 14 ದಿನಗಳಿಗೆ ಸಮ. ಹೀಗಾಗಿ ನಂತರ ಚಂದ್ರನಲ್ಲಿ ಕತ್ತಲಾಗುವುದರಿಂದ ಈ 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್​ ರೋವರ್​ ಮತ್ತು ವಿಕ್ರಮ್​ ಲ್ಯಾಂಡರ್​ ಸದ್ಯ ವಿಶ್ರಾಂತಿಗೆ ಜಾರಿಸಲಾಯಿತು.

ಮುಂದೆ ಚಂದ್ರನಲ್ಲಿ ಬೆಳಕಾದಾಗ ಮತ್ತೆ ಇವು ಕಾರ್ಯರಂಭ ಮಾಡುತ್ತವೆ ಎಂಬ ಇಸ್ರೋ ಭರವಸೆ ನೆರವೇರಲಿಲ್ಲ. ಈ ಹಿನ್ನೆಲೆಯಲ್ಲಿ ಇಸ್ರೋಗೆ ಕೊಂಚ ನಿರಾಸೆಯುಂಟಾಯಿತು. ಭಾರತ ಚಂದ್ರಯಾನ-3ರ (Chandrayan-3) ಯಶಸ್ಸನ್ನು ಸಂಭ್ರಮಿಸಿದ ಬೆನ್ನಲ್ಲೇ ಚಂದ್ರನಲ್ಲಿ ರಾತ್ರಿಯಾದ ಕಾರಣ ವಿಕ್ರಮ್ ಲ್ಯಾಂಡರ್ (Vikram lander) ಮತ್ತು ಪ್ರಗ್ಯಾನ್ ರೋವರ್’ ಗಳನ್ನು (Pragyan rover) ನಿದ್ರೆಗೆ ಜಾರಿಸಲಾಗಿತ್ತು. ನಂತರ ಅದನ್ನು ಎಬ್ಬಿಸುವ ಮಹತ್ಕಾರ್ಯಕ್ಕೆ ಇಸ್ರೋ ಮುಂದಾಗಿದ್ದೂ ಆಯಿತು.

ಸದ್ಯ ಚಂದ್ರಯಾನ-3 ಯೋಜನೆಯ ವೇಳೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಸಮಯದಲ್ಲಿ ಅಂದಾಜು 2.06 ಟನ್‌ಗಳಷ್ಟು ಚಂದ್ರನ ಮಣ್ಣು ಅಥವಾ ಧೂಳನ್ನು ಎಬ್ಬಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರಿಂದಾಗಿ ವಿಕ್ರಮ್‌ ಲ್ಯಾಂಡರ್‌ ಇದ್ದ ವಲಯದಲ್ಲಿ ದೊಡ್ಡ ಮಟ್ಟದ ಪ್ರಕಾಶಮಾನವಾದ ಪ್ರಭಾವಲಯ ನಿರ್ಮಾಣವಾಗಿತ್ತು.

ಶಿವಶಕ್ತಿ ಪಾಯಿಂಟ್‌ನಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವಾಗ ಎದ್ದಿರುವ ಧೂಳಿನ ಮೋಡವು ಸುಮಾರು 108.4 ಚದರ ಮೀಟರ್‌ ಪ್ರದೇಶದ್ಲಿ ಹರಡಿತ್ತು ಎಂದು ಇಸ್ರೋ ತಿಳಿಸಿದೆ. ಈ ಪ್ರಕಾಶಮಾನವಾದ ಪ್ರಭಾವಲಯ ಲ್ಯಾಂಡರ್ ಸುತ್ತಲೂ ಪ್ರಕಾಶಮಾನವಾದ ತೇಪೆಯಂತೆ ಕಾಣಿಸಿಕೊಂಡಿರುವ ದಾಖಲೆಯನ್ನು ಇಸ್ರೋ ಹಂಚಿಕೊಂಡಿದೆ. ವಿಕ್ರಮ್ ಹೆಸರಿನ ಲ್ಯಾಂಡರ್ ಮಾಡ್ಯೂಲ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಶಿವ ಶಕ್ತಿ ಪಾಯಿಂಟ್‌ ಮುಟ್ಟಿತ್ತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ಹಾಗೂ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎನ್ನುವ ಕೀರ್ತಿಗೆ ಭಾರತ ಭಾಜನವಾಯಿತು.

ಇಳಿಯುವ ಪ್ರಕ್ರಿಯೆ ಆರಂಭವಾದಂತೆ, ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಅದ್ಭುತವಾದ ‘ಎಜೆಕ್ಟಾ ಹಾಲೋ’ ಅನ್ನು ನಿರ್ಮಾಣ ಮಾಡಿತು. ಈ ವಿದ್ಯಮಾನವನ್ನು ಇಸ್ರೋದ ಒಂದು ಭಾಗವಾದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿಗಳು ಸೆರೆಹಿಡಿದು ವಿಶ್ಲೇಷಿಸಿದ್ದಾರೆ. ಅವರ ಸಂಶೋಧನೆಗಳ ಪ್ರಕಾರ, ಸುಮಾರು 2.06 ಟನ್‌ಗಳಷ್ಟು ಚಂದ್ರನ ಎಪಿರೆಗೋಲಿತ್ (ಚಂದ್ರನ ಧೂಳು) ನಿರ್ಮಾಣವಾಗಿದ್ದು, ಇದು ಲ್ಯಾಂಡಿಂಗ್ ಸೈಟ್‌ನ ಸುತ್ತಲಿನ 108.4 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಕವಾಗಿ ಬಿದ್ದಿತ್ತು.

ಚಂದ್ರಯಾನ-2 ಆರ್ಬಿಟರ್‌ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾದಿಂದ (OHRC) ಲ್ಯಾಂಡಿಂಗ್ ಪೂರ್ವ ಮತ್ತು ನಂತರದ ಹೆಚ್ಚಿನ ರೆಸಲ್ಯೂಶನ್ ಚಿತ್ರಣವನ್ನು ವಿಜ್ಞಾನಿಗಳು ಹೋಲಿಕೆ ಮಾಡಿ ನೋಡಿದ್ದಾರೆ. ಲ್ಯಾಂಡಿಂಗ್ ಈವೆಂಟ್‌ಗೆ ಗಂಟೆಗಳ ಮೊದಲು ಮತ್ತು ನಂತರ ಚಿತ್ರಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ಇದು ಈ ‘ಎಜೆಕ್ಟಾ ಹಾಲೋ’ ಲ್ಯಾಂಡರ್ ಅನ್ನು ಸುತ್ತುವರೆದಿರುವ ಅನಿಯಮಿತ ಪ್ರಕಾಶಮಾನವಾದ ಪ್ಯಾಚ್‌ನಂತೆ ಗೋಚರಿಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್‌ ಲ್ಯಾಂಡಿಂಗ್‌ ಸಾಧಿಸುವುದು, ಚಂದ್ರನ ಮೇಲೆ ರೋವರ್‌ನ ಚಲನಶೀಲತೆಯನ್ನು ಪ್ರದರ್ಶಿಸುವುದು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಮಿಷನ್ ಉದ್ದೇಶಗಳಾಗಿದ್ದವು.

ಎಜೆಕ್ಟಾ ಹಾಲೋ’ ವಿದ್ಯಮಾನದ ವಿವರವಾದ ವಿಶ್ಲೇಷಣೆಯನ್ನು ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. “OHRC ಚಿತ್ರಣವನ್ನು ಬಳಸಿಕೊಂಡು ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಸುತ್ತಲೂ ಚಂದ್ರನ ಮೇಲ್ಮೈಯಲ್ಲಿ ಎಜೆಕ್ಟಾ ಹಾಲೋ ಗುಣಲಕ್ಷಣಗಳು” ಎಂಬ ಶೀರ್ಷಿಕೆಯ ಅಧ್ಯಯನವು ಚಂದ್ರನ ಮೇಲ್ಮೈಯಲ್ಲಿ ಚಂದ್ರನ ಇಳಿಯುವಿಕೆಯ ಪ್ರಭಾವದ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ನೀಡಿದೆ.

 

ಇದನ್ನು ಓದಿ: Dakshina kannada: ಉಜಿರೆ ಶಾಲೆಯ ಬಳಿ ವೇಗವಾಗಿ ಧಾವಿಸಿ ಬಂದ ಬೈಕ್ ! ಅಮ್ಮನ ಎದುರಲ್ಲೇ ಬೈಕ್ ಅಡಿಗೆ ಬಿದ್ದು ಸಾವನ್ನಪ್ಪಿದ 3 ನೇ ಕ್ಲಾಸ್ ವಿದ್ಯಾರ್ಥಿನಿ !

Leave A Reply

Your email address will not be published.