MLA Harish Poonja: ಮುಖ್ಯಮಂತ್ರಿಯನ್ನು ಕಲೆಕ್ಷನ್ ಮಾಸ್ಟರ್ ಎಂದ ಹರೀಶ್ ಪೂಂಜ : ಶಾಸಕರ ಮೇಲೆ FIR ದಾಖಲು

Mangalore news Case filed on Belthangady MLA Harish Poonja over Post against CM Siddaramaiah stating as Collection Minister latest news

Share the Article

MLA Harish Poonja: ಬೆಳ್ತಂಗಡಿ(Belthangady) ಬಿಜೆಪಿ ಶಾಸಕ ಹರೀಶ ಪೂಂಜ(MLA Harish Poonja) ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್( FIR)ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಬಿಜೆಪಿ ಶಾಸಕ ಹರೀಶ ಪೂಂಜ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಹಿನ್ನಲೆ FIR ದಾಖಲಾಗಿದೆ.

ಹರೀಶ್ ಪೂಂಜ ಅವರು “ಕಲೆಕ್ಷನ್ ಮಾಸ್ಟರ್ (ಸಿಎಂ) ಆಫ್ ಕರ್ನಾಟಕ” ಎಂದು ಬರೆದು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಬೆಂಗಳೂರಿನ ಸಿಎಂ ನಿವಾಸದ ಫೋಟೊ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಹರೀಶ್ ಪೂಂಜ ವಿರುದ್ಧ ಕಾಂಗ್ರೆಸ್‌ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.ರಾಜ್ಯದ ಮುಖ್ಯಮಂತ್ರಿ ಅವರನ್ನು ಹರೀಶ್ ಪೂಂಜಾ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಅನುಸಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

ಇದನ್ನು ಓದಿ: FD Rule Change: ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಈ ರೀತಿ ಮಾಡಿದ್ರೆ 1 ಕೋಟಿ ಹಣ ನಿಮ್ಮ ಖಾತೆ ಸೇರುತ್ತೆ !!

Leave A Reply