Home News Gold Smuggling: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 67 ಲಕ್ಷ ಮೌಲ್ಯದ ಚಿನ್ನ ವಶ – ಸಾಗಿಸಲು...

Gold Smuggling: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 67 ಲಕ್ಷ ಮೌಲ್ಯದ ಚಿನ್ನ ವಶ – ಸಾಗಿಸಲು ಈ ಖತರ್ನಾಕ್ ಕಳ್ಳಿಯರು ಮಾಡಿದ ಪ್ಲಾನ್ ಕಂಡು ಅಧಿಕಾರಿಗಳೇ ಶಾಕ್ !!

Gold Smuggling
Image source Credit: tv 9

Hindu neighbor gifts plot of land

Hindu neighbour gifts land to Muslim journalist

Gold Smuggling By Women: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport Bengaluru) ಕಸ್ಟಮ್ಸ್ ಅಧಿಕಾರಿಗಳು ವಿದೇಶದಿಂದ ಅಕ್ರಮವಾಗಿ ಗೋಲ್ಡ್ ಸ್ಮಗ್ಲಿಂಗ್(Gold Smuggling) ಮಾಡುತ್ತಿದ್ದ ಮೂವರು ಮಹಿಳೆಯರನ್ನು (Gold Smuggling By Women)ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

# ಭಾರತೀಯ ಮೂಲದ ಮಹಿಳೆಯೊಬ್ಬರು ಕ್ವಾಲಲಂಪುರದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದು, ತಮ್ಮ ಬ್ಲೌಸ್ನಲ್ಲಿ 300.95 ಗ್ರಾಂ ಚಿನ್ನದ ಪೇಸ್ಟ್ ಅಂಟಿಸಿಕೊಂಡಿದ್ದರು. ಈ ಮಹಿಳೆಯಿಂದ ಕಸ್ಟಮ್ ಅಧಿಕಾರಿಗಳು ಸುಮಾರು 17.9 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

# ಕುವೈತ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಭಾರತೀಯ ಮೂಲದ ಮಹಿಳೆಯೊಬ್ಬಳು ಚಿನ್ನವನ್ನು ಸಣ್ಣ ಸಣ್ಣದಾಗಿ ತುಂಡು ಮಾಡಿ, ಗೋಡಂಬಿ, ಬಾದಾಮಿ, ಪಿಸ್ತಾವನ್ನು ಒಳಗೊಂಡಿದ್ದ ಡ್ರೈ ಫ್ರೂಟ್ಸ್ ಪ್ಯಾಕೆಟ್ನಲ್ಲಿ ಸೇರಿಸಿಕೊಂಡಿದ್ದರು. ಮಹಿಳೆಯ ತಪಾಸಣೆಯ ವೇಳೆ ಡ್ರೈ ಫ್ರೂಟ್ಸ್‌ ಪ್ಯಾಕೇಟ್ನಲ್ಲಿ ಚಿನ್ನದ ಸಣ್ಣ ಸಣ್ಣ ತುಂಡು ಕಂಡುಬಂದಿದ್ದು, ಈ ಮಹಿಳೆಯಿಂದ 15.26 ಲಕ್ಷ ರೂ. ಮೌಲ್ಯದ ಚಿನ್ನ ವಶ ಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ, 1.49 ಲಕ್ಷ ರೂ. ಮೌಲ್ಯದ ಐ ಪೋನ್‌ 14 ಪ್ರೋ ಮ್ಯಾಕ್‌ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

# ಮಲೇಷ್ಯಾ ಮೂಲದ ಮಹಿಳೆ ಗುದದ್ವಾರದಲ್ಲಿ ನಾಲ್ಕು ಕ್ಯಾಪ್ಸೂಲ್‌ಗಳಲ್ಲಿ ಒಟ್ಟು 578.27 ಗ್ರಾಂ ಚಿನ್ನವನ್ನು ಅಡಗಿಸಿದ್ದಳು.ವೈದ್ಯರ ನೆರವಿನಿಂದ ಮಹಿಳೆಯ ಗುದದ್ವಾರದಲ್ಲಿದ್ದ ಸುಮಾರು 34.4 ಲಕ್ಷ ರೂ. ಮೌಲ್ಯದ ಚಿನ್ನವನ್ನು ಹೊರತೆಗೆದು ಮಹಿಳೆಯನ್ನು ಬಂಧಿಸಿ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 67 ಲಕ್ಷ 57 ಸಾವಿರದ 923 ರೂ ಮೌಲ್ಯದ 1 ಕೆಜಿ 133 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

 

ಇದನ್ನು ಓದಿ: Ghaziabad : ‘ಜೈ ಶ್ರೀರಾಮ್’ ಎಂದ ವಿದ್ಯಾರ್ಥಿಗೆ ಕಾಲೇಜಿಂದ ಗೇಟ್ ಪಾಸ್- ಕೆಲವೇ ನಿಮಿಷಗಳಲ್ಲಿ ಕಾಲೇಜ್ ವೆಬ್ ಸೈಟ್’ನಲೆಲ್ಲಾ ರಾರಾಜಿಸಿದವು ‘ಜೈ ಶ್ರೀರಾಮ್’ ಬರಹಗಳು !!