7th Pay Commission: ಸರಕಾರಿ ನೌಕರರಿಗೆ ಹೊಡೆಯಿತು ಲಾಟ್ರಿ! 4% ಡಿಎ ಹೆಚ್ಚಳಕ್ಕೆ ಕೇಂದ್ರ ಅನುಮೋದನೆ!!

7th Pay Commission 4% DA hike approved for government employees

7th Pay Commission DA Hike: ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿಗೆ ಕೇಂದ್ರ ಸರಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಡಿಎ ಮತ್ತು ಡಿಆರ್‌ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ(7th Pay Commission) ಅನುಮೋದನೆ ದೊರಕಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಮತ್ತು ಡಿಆರ್ ಶೇ.4ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಈ ಡಿಎ ಹೆಚ್ಚಳವು ಜುಲೈ 1,2023 ರಿಂದ ಜಾರಿಗೆ ಬರಲಿದ್ದು, ಕೇಂದ್ರ ಸರಕಾರಿ ನೌಕರರು ಜುಲೈ ಮತ್ತು ಅಕ್ಟೋಬರ್‌ ನಡುವಿ ಅವಧಿಯಲ್ಲಿ ಬಾಕಿಯಿರುವ ನವೆಂಬರ್‌ ತಿಂಗಳಿನಿಂದ ವರ್ಧಿತ ವೇತನ ಪಡೆಯಲು ಅರ್ಹರಾಗಿರುತ್ತಾರೆ.

ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಶೇ.ನಾಲ್ಕರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಲು ಕೇಂದ್ರ ಗ್ರೀನ್‌ ಸಿಗ್ನಲ್‌ ನೀಡಿದೆ ಎಂದು ಮೂಲಗಳಿಂದ ಮಾಹಿತಿ ಇದೆ.

ಸರಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ.ಗಳಿಗೆ ನಿಗದಿಯಾಗಿದ್ದರೆ, ಅವರು ಪ್ರಸ್ತುತ ಶೇಕಡಾ 42 ರಷ್ಟು DA ಹೆಚ್ಚುವರಿ ಮಾಸಿಕ ಆದಾಯ 7,560 ರೂ. ಪಡೆಯುತ್ತಿದ್ದು, 46 ಪ್ರತಿಶತ ಡಿಎಯಲ್ಲಿ, ಅವರ ಮಾಸಿಕ ವೇತನ ಹೆಚ್ಚಳವು ರೂ 8,280 ಕ್ಕೆ ಏರಿಕೆಯಾಗುತ್ತದೆ. ಏತನ್ಮಧ್ಯೆ, ಗರಿಷ್ಠ ಮೂಲ ವೇತನ ರೂ 56,900 ಹೊಂದಿರುವ ವ್ಯಕ್ತಿಗಳು ಪ್ರಸ್ತುತ 42 ಪ್ರತಿಶತ DA ಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಅವರು ಪ್ರಸ್ತುತ ತಮ್ಮ ಮಾಸಿಕ ಗಳಿಕೆಯ ಭಾಗವಾಗಿ ರೂ 23,898 ಪಡೆಯುತ್ತಾರೆ.

ಇದನ್ನೂ ಓದಿ: NIA ತನಿಖೆಯಲ್ಲಿ ಸ್ಫೋಟಕ ಮಾಹಿತಿ; ಕದ್ರಿ ದೇವಸ್ಥಾನ ಮಾತ್ರವಲ್ಲ, ಈ ಖ್ಯಾತ ದೇವಸ್ಥಾನ ಕೂಡಾ ಉಗ್ರರ ಟಾರ್ಗೆಟ್‌ ಆಗಿತ್ತು!!! ಶಾಕಿಂಗ್‌ ಮಾಹಿತಿ

Leave A Reply

Your email address will not be published.