Home Karnataka State Politics Updates Lulu mall Flag issue: ಲೂಲು ಮಾಲ್’ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ವಿಚಾರ- ಸುಳ್ಳು ಸುದ್ದಿ ಹರಡಿದರಾ...

Lulu mall Flag issue: ಲೂಲು ಮಾಲ್’ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ವಿಚಾರ- ಸುಳ್ಳು ಸುದ್ದಿ ಹರಡಿದರಾ ಬಿಜೆಪಿ ಕಾರ್ಯಕರ್ತೆ ಶಕುಂತಲಾ ?!

Lulu mall Flag issue

Hindu neighbor gifts plot of land

Hindu neighbour gifts land to Muslim journalist

Lulu mall Flag issue: ಬಿಜೆಪಿಯ ಮಾಧ್ಯಮ ವಿಭಾಗದ ಕಾರ್ಯಕರ್ತೆ ಶಕುಂತಲಾ ನಟರಾಜ್‌ (Shakuntala Nataraj) ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬವನ್ನು ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟ್‌ ಹಾಕಿದ್ದರು. ಈ ಪ್ರಕರಣದಲ್ಲಿ ಶಕುಂತಲಾ ನಟರಾಜ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು.

ಇದೀಗ ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಪಾಕಿಸ್ತಾನಕ್ಕಿಂತ ಸಣ್ಣ ಗಾತ್ರದಲ್ಲಿ ಮತ್ತು ಕೆಳಗೆ ಹಾಕಲಾಗಿದೆ ಎಂದು ಫೇಕ್‌ ಫೋಟೊ ಹಾಕಿ ದಾರಿ ತಪ್ಪಿಸಿದ್ದ ವಿಚಾರದಲ್ಲಿ ಆಕೆಯ ಮೇಲೆ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರ ಧ್ವಜಕ್ಕೆ ಅಪಮಾನ (Lulu mall Flag issue) ಮಾಡಲಾಗಿದೆ ಎಂದು ಟ್ವಿಟರ್ ನಲ್ಲಿ ಫೇಕ್ ಪೊಸ್ಟ್ ಹಂಚಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ತುಮಕೂರಿನ (Tumkur News) ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರೇ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಲುಲು ಶಾಪಿಂಗ್‌ ಮಾಲ್‌ನಲ್ಲಿ ʻʻಭಾರತದ ಬಾವುಟಕ್ಕಿಂತ ಬೇರೆ ಯಾವುದೇ ದೇಶದ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ನವರಿಗೆ.? @ಡಿ.ಕೆ. ಶಿವಕುಮಾರ್‌ #ಬಾಯ್ಕಾಟ್ ಲುಲುಮಾಲ್‌’ ಎಂದು ಪೋಸ್ಟ್ ಹಂಚಿಕೊಂಡಿದ್ದರು ಶಕುಂತಲಾ. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಫ್ಯಾಕ್ಟ್‌ ಚೆಕ್‌ ವೇಳೆ ಬಯಲಾಗಿದೆ. ಹೀಗಾಗಿ ಪೊಲೀಸರು ಶಕುಂತಲಾ ನಟರಾಜ್‌ ಮೇಲೆ ಕೇಸು ದಾಖಲಿಸಿದ್ದಾರೆ.

ವಾಸ್ತವವಾಗಿ ವಿಶ್ವಕಪ್‌ ಕ್ರಿಕೆಟ್‌ ಹಿನ್ನೆಲೆಯಲ್ಲಿ ಪ್ರತಿನಿಧಿಸುವ ಎಲ್ಲ ತಂಡಗಳ ದೇಶಗಳ ಬಾವುಟವನ್ನು ಒಂದೇ ಗಾತ್ರದಲ್ಲಿ ಹಾಕಲಾಗಿತ್ತು. ಆದರೆ, ಅವುಗಳನ್ನು ಬೇರೆ ಬೇರೆ ಕೋನದಲ್ಲಿ ಫೋಟೊ ತೆಗೆದು ಭಾರತದ ಧ್ವಜ ಪಾಕಿಸ್ತಾನಕ್ಕಿಂತ ಸಣ್ಣದಾಗಿದೆ ಎಂಬಂತೆ ಬಿಂಬಿಸಲಾಗಿದೆ. ಇಲ್ಲವೇ ಉದ್ದೇಶಪೂರ್ವಕವಾಗಿ ಎಡಿಟ್‌ ಮಾಡಿ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆಂಬ ಆರೋಪದಡಿ ಐಪಿಸಿ 153 (ಬಿ) ಅಡಿಯಲ್ಲಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಬರುವಂತೆ ಶಕುಂತಲಾ ಅವರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಇಲ್ಲಿ 210 ರೂ ಗಳನ್ನು ಕಟ್ಟಿರಿ, ತಿಂಗಳಾಂತ್ಯಕ್ಕೆ 5,000 ಪಿಂಚಣಿ ಪಡೆದು ಆನಂದಿಸಿರಿ !! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್