Mahisha Dasara: ಸರ್ಕಾರದಿಂದಲೇ ‘ಮಹಿಷಾ ದಸರಾ’ ಆಚರಣೆ ?! ಸಿಎಂ ಸಿದ್ದು ಕೊಟ್ರು ಬಿಗ್ ಅಪ್ಡೇಟ್
CM Siddaramaiah clarification about Mysuru Dasara 2023 says no mahisha Dasara from govt
Mahisha Dasara: ಕರ್ನಾಟಕ ರಾಜ್ಯವು ಇದೀಗ ನಾಡ ಹಬ್ಬದ ದಸರವನ್ನು ಆಚರಿಸಲು ಸಜ್ಜಾಗುತ್ತಿದೆ. ಮೈಸೂರು ದೀಪಾಲಂಕೃತಗಳಿಂದ ಸಿಂಗಾರಗೊಂಡು ವಿಜೃಂಭಿಸುತ್ತಿದೆ. ಆದರೆ ಈ ನಡುವೆ ‘ಮಹಿಷ ದಸರಾ'(Mahisha dasara) ಬಹಳಷ್ಟು ಚರ್ಚೆಯಾಗುತ್ತಿದೆ. ಅಲ್ಲದೆ ರಾಜಕೀಯ ಸ್ವರೂಪಗಳನ್ನು ಪಡೆದುಕೊಂಡು ತೀವ್ರವಾದಂತಹ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿ ಆಗುತ್ತಿದೆ. ಅಲ್ಲದೆ ಸರ್ಕಾರವೇ ಇದನ್ನು ಆಚರಿಸಲು ಮುಂದಾಗಿದೆಯಾ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಆದರೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಹೌದು, ಮಹಿಷ ದಸರಾ ಆಚರಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ನಾವು ಹಿಂದೆಯೂ ಮಹಿಷ ದಸರಾ ಮಾಡಿಲ್ಲ ಈಗಲೂ ಸರ್ಕಾರದ ವತಿಯಿಂದ ಮಹಿಷ ದಸರಾ ನಡೆಸುವುದಿಲ್ಲ ಎಂದು ಮೈಸೂರಿನಲ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಈ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ಹಣ ಸಿಗೋದು ಬಹುತೇಕ ಡೌಟ್ !! ಅಚ್ಚರಿಯ ಕಾರಣ ಬಿಚ್ಚಿಟ್ಟ ಸಚಿವೆ ಹೆಬ್ಬಾಳ್ಕರ್
ಅಂದಹಾಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ, ಯಾರೋ ಒಂದಿಷ್ಟು ಮಂದಿ ಹಿಂದಿನಿಂದಾನೂ ಮಹಿಷಾ ದಸರಾವನ್ನು ಮಾಡುತ್ತಿದ್ದಾರೆ. ಆದರೆ ಚಾಮುಂಡಿ ಬೆಟ್ಟದಲ್ಲಿ ಯಾವತ್ತು ಮಾಡಿಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತವೇ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇತ್ತಿಚೆಗಷ್ಟೇ ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಕೂಡ ಹೌಹಾರಿದ್ದರು. ಒಂದು ರೌಂಡ್ ಮೈಸೂರು ತಿರುಗಿ ನೋಡಿ, ಮಹಿಷಾಸುರನನ್ನು ಪೂಜಿಸುತ್ತಿದ್ದವರು, ಈಗ ಚಾಮುಂಡಿಯನ್ನು ಪೂಜಿಸುತ್ತಿದ್ದಾರೆ ಎಂದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಸ್ಪಷ್ಟಪಡಿಸಿದ್ದಾರೆ.