Gruhalakshmi Scheme :ಈ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ಹಣ ಸಿಗೋದು ಬಹುತೇಕ ಡೌಟ್ !! ಅಚ್ಚರಿಯ ಕಾರಣ ಬಿಚ್ಚಿಟ್ಟ ಸಚಿವೆ ಹೆಬ್ಬಾಳ್ಕರ್

Karnataka news gruhalakshmi scheme update it is difficult to change name in ration Card

Gruhalakshmi Scheme : ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಗೆ ನೋಂದಣಿಯಾಗಬೇಕಾದರೆ ಪಡಿತರ ಚೀಟಿಯು ಮನೆಯ ಯಾಜಮಾನಿಯ ಹೆಸರು ಮೊದಲು ಇರಬೇಕೆಂದು ಕಡ್ಡಾಯ ಮಾಡಲಾಗಿದೆ. ಈ ಕಾರಣದಿಂದಾಗಿ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಶೇ.30ರಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ.

ಈ ಕಾರಣದಿಂದ ಪಡಿತರ ಚೀಟಿದಾರರು ತಮ್ಮ ಪತಿಯ ಹೆಸರಿನಲ್ಲಿದ್ದ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ(ಪತ್ನಿ) ಹೆಸರನ್ನು ಮೊದಲನೇದಾಗಿ ಇರುವಂತೆ ಸೇವಾ ಕೇಂದ್ರದಲ್ಲಿ ಬದಲಾಯಿಸಿಕೊಂಡು ನೋಂದಣಿ ಮಾಡಿಸಲು ಕರ್ನಾಟಕ ಒನ್‌ಗೆ ಹೋದಾಗ ಒಂದು ವಾರ ಕಳೆದು ಬನ್ನಿ ಎಂದು ಹೇಳಿದವರು ಕಳೆದ 2 ತಿಂಗಳಿಂದ ಅಲೆದಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇದನ್ನೂ ಓದಿ: Mahisha Dasara: ಸರ್ಕಾರದಿಂದಲೇ ‘ಮಹಿಷಾ ದಸರಾ’ ಆಚರಣೆ ?! ಸಿಎಂ ಸಿದ್ದು ಕೊಟ್ರು ಬಿಗ್ ಅಪ್ಡೇಟ್

ಕೆಲವರಿಗೆ ಮೇಸೆಜ್ ಬಂದಿದೆ. ಆದರೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಬ್ಯಾಂಕ್ ಖಾತೆಗೆ ಬಂದಿದ್ದರೂ ಹಣ ಡ್ರಾ ಮಾಡಿಕೊಳ್ಳಲು ಹಲವಾರು ಅಡೆತಡೆಗಳು ಹೀಗೆ ಸಾರ್ವಜನಿಕರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಬಹಳಷ್ಟು ಮಹಿಳೆಯರಿಗೆ ಇನ್ನೂ ಮೊದಲನೇ ಕಂತು ಹಣ ಬಂದಿಲ್ಲ, ಎರಡನೇ ಕಂತು ಮೇಸೆಜ್ ಬಂದಿದ್ದರೂ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿಲ್ಲ.

ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವುದಿಲ್ಲ, ನೋಂದಣಿ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಸ್ವಷ್ಟಪಡಿಸಿದ್ದಾರೆ.

ಆದರೆ ಈ ಬಗ್ಗೆ ಹಲವಾರು ಭಾರಿ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಬಗೆಗಿನ ನಂಬಿಕೆ ಹುಸಿಯಾಗಿದೆ.

ಇದನ್ನೂ ಓದಿ: ರೇಷನ್ ಕಾರ್ಡ್ ಇರುವವರೆ ಇತ್ತ ಗಮನಿಸಿ- ಆಹಾರ ಇಲಾಖೆಯಿಂದ ಬಂತೊಂದು ಮುಖ್ಯ ಮಾಹಿತಿ

Leave A Reply

Your email address will not be published.