Home latest Davanagere: ‘ಬಸ್ಸಿಗೆ ಕಲ್ಲುಹೊಡೆಯಿರಿ, ನಿಮ್ಮ ಸೌಲಭ್ಯಗಳನ್ನು ಪಡೆಯಿರಿ’ – ಪ್ರಚೋದನಾತ್ಮಕ ಹೇಳಿಕೆ ನೀಡಿದ ಖ್ಯಾತ ಸ್ವಾಮೀಜಿ...

Davanagere: ‘ಬಸ್ಸಿಗೆ ಕಲ್ಲುಹೊಡೆಯಿರಿ, ನಿಮ್ಮ ಸೌಲಭ್ಯಗಳನ್ನು ಪಡೆಯಿರಿ’ – ಪ್ರಚೋದನಾತ್ಮಕ ಹೇಳಿಕೆ ನೀಡಿದ ಖ್ಯಾತ ಸ್ವಾಮೀಜಿ !!

Hadapada appannashree

Hindu neighbor gifts plot of land

Hindu neighbour gifts land to Muslim journalist

Hadapada appannashree: ಸ್ವಾಮಿಗಳು ಅಥವಾ ಮಠದ ಮಠದಿಪತಿಗಳು ಎಂದರೆ ಸಮಾಜವನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯುವಂತ, ಜನರಿಗೆ ಸದ್ಬುದ್ಧಿಯನ್ನು ನೀಡಿ ಉತ್ತಮ ಮಾರ್ಗದಲ್ಲಿ ಮುನ್ನಡೆಯುವಂತೆ ಮಾಡುವರು. ಆದರೆ ಇಲ್ಲೊಬ್ಬರು ಸ್ವಾಮಿಗಳು ಸರ್ಕಾರಿ ಬಸ್ಸುಗಲಿಗೆ ಕಲ್ಲು ಹೊಡೆಯಿರಿ, ನಿಮ್ಮ ಸೌಲಭ್ಯಗಳನ್ನು ಪಡೆಯಿರಿ ಎಂಬ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಹೌದು, ದಾವಣಗೆರೆಯ(Davanagere) ಅನ್ನದಾನಿ ಬಸವಪ್ರಿಯ ಹಡಪದ ಅಪ್ಪಣ್ಣಶ್ರೀಗಳು(Hadapada appannashree) ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಅಂದಹಾಗೆ ನಗರದ ಶಿವಯೋಗಿ ಮಂದಿರದಲ್ಲಿ ಹಡಪದ ಅಪ್ಪಣ್ಣಶ್ರೀ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ‘ಬಸ್ಸಿಗೆ ಕಲ್ಲು ಹೊಡೆಯಬೇಕು ಆಗ ಮಾತ್ರ ಸೌಲಭ್ಯಗಳು ಸಿಗುತ್ತವೆ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮೀಸಲಾತಿ ಕುರಿತು ಮಾತನಾಡಿದ ಅವರು ಲಿಂಗಾಯತ ಹಡಪದ ಅಂತ ಇದ್ದರೆ ಮೀಸಲಾತಿ 3ಬಿ ಯಲ್ಲಿ ಸಿಗುತ್ತದೆ. ಹಿಂದೂ ಹಡಪದ ಅಂತ ಇದ್ದರೆ ಮೀಸಲಾತಿ 2ಎ ನಲ್ಲಿ ಸಿಗುತ್ತದೆ. ಆದರೆ ನಮ್ಮ ದಾಖಲಾತಿಗಳು ಲಿಂಗಾಯತ ಹಡಪದ ಎಂದೆ ಇವೆ. ಹೀಗಾಗಿ ಹಡಪದ ಸಮಾಜ ಮೀಸಲಾತಿಯಿಂದ ವಂಚಿತವಾಗಿದ ಎಂದರು. ಇದಕ್ಕಾಗಿ ನಾವೆಲ್ಲರೂ ಹೋರಾಟ ಮಾಡಬೇಕು, ಎಲ್ಲರೂ ಸಂಘಟಿತರಾಗಬೇಕು ಎಂದು ದಾವಣಗೆರೆಯಲ್ಲಿ ಅಪ್ಪಣ್ಣ ಶ್ರೀ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ, ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ 10 ವರ್ಷದ ಬಾಲಕ ದಾರುಣ ಸಾವು!!!