Rajastan: ಪೋಷಕರೇ ಎಚ್ಚರ, ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ 10 ವರ್ಷದ ಬಾಲಕ ದಾರುಣ ಸಾವು!!!

national news boy dies after nect gets entangled in rope in rajastan latest news

Rajastan: ಪೋಷಕರೇ ಎಚ್ಚರ! ಮಕ್ಕಳನ್ನು ಅವರ ಪಾಡಿಗೆ ಆಟ ಆಡಲು ಹೋದರೆ ಈ ರೀತಿಯ ದುರ್ಘಟನೆಯೊಂದು ನಡೆದಿದೆ. ಹಾಗಾಗಿ ಪೋಷಕರೇ ಇಂತಹ ಘಟನೆಗಳಿಗೆ ಅವಕಾಶ ಕೊಡದೆ ಮಕ್ಕಳ ಕಡೆ ಗಮನಹರಿಸಿ. ವಿಷಯ ಏನಂದರೆ, ಹತ್ತು ವರ್ಷದ ಬಾಲಕನೋರ್ವ ಜೋಕಾಲಿ ಆಡುವಾಗ ಹಗ್ಗ ಕೊರಳಿಗೆ ಸುತ್ತಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ರಾಜಸ್ಥಾನದ(Rajastan) ಬರಾನ್‌ ಜಿಲ್ಲೆಯಲ್ಲಿ ನಡೆದಿದೆ.

ನಿತ್ಯ ಜೋಕಾಲಿ ಆಡುತ್ತಿದ್ದ ಬಾಲಕ. ಅಂದು ತನ್ನ ಮನೆಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಗ್ಗ ಸುರುಳಿ ಸುತ್ತಿಕೊಳ್ಳುತ್ತಾ ಬಾಲಕನ ಕುತ್ತಿಗೆಯನ್ನೂ ಕೂಡಾ ಸುತ್ತುವರಿದಿತ್ತು. ಕೂಡಲೇ ಬಾಲಕ ವಾಂತಿ ಮಾಡಿ, ಪ್ರಜ್ಞಾಹೀನ ಸ್ಥಿತಿಗೆ ಬಂದಿದ್ದ.

ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದು, ಆದಿಲ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಪರಿಶೀಲಿಸಿದಾದ ಬಾಲಕ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ:  ಹೆಂಡತಿಗಾಗಿ ಲಕ್ಷಗಟ್ಟಲೆ ಸಾಲ ಮಾಡಿ ಓದಿಸಿದ ಕೂಲಿ ಕಾರ್ಮಿಕ ಗಂಡ; ಕೊನೆಗೆ ಹೆಂಡತಿ ಮಾಡಿದ್ದೇನು ಗೊತ್ತೇ?

Leave A Reply

Your email address will not be published.