Basil Plant: ತುಳಸಿ ಗಿಡದ ಪಕ್ಕ ಇದನ್ನು ಇಟ್ಟು ಪೂಜಿಸಿ, ಧನಲಕ್ಷಿಯನ್ನು ಒಳಗೆ ಕರೆಯಿರಿ !!

Astrology news vastu tips Put this things under basil plant to become rich

Basil Plant : ಹಿಂದೂ ಧರ್ಮದಲ್ಲಿ ತುಳಸಿ ಗಿಡವು (Tulsi plant) ಎಲ್ಲಕ್ಕಿಂತ ಪವಿತ್ರವಾದದ್ದು. ವೃಂದಾ ಎಂದೂ ಕರೆಯಲ್ಪಡುವ ಈ ತುಳಸಿಯನ್ನು ಸ್ವರ್ಗದ ಹೆಬ್ಬಾಗಿಲು ಅಥವಾ ದೇವರ ವಾಸಸ್ಥಾನವಾದ ವೈಕುಂಠ ಎಂದು ಹಿಂದೂಗಳು ನಂಬುತ್ತಾರೆ. ತುಳಸಿ ಸಸ್ಯದ (Basil Plant) ವಿವಿಧ ಭಾಗಗಳನ್ನು ದೇವತೆಗಳ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ತುಳಸಿಯನ್ನು ಲಕ್ಷ್ಮಿ ದೇವಿಯ ಭೌತಿಕ ಅವತಾರವೆಂದು ನಂಬಲಾಗಿದೆ.

ಅಂದಹಾಗೆ, ಹಿಂದೂ ಪುರಾಣಗಳ ಪ್ರಕಾರ, ಶನಿವಾರ ಸಂಜೆ ತುಳಸಿ ಗಿಡದ ಕೆಳಗೆ ಇದನ್ನು ಇಟ್ಟು ಪೂಜೆ ಮಾಡಿದ್ರೆ, ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತೆ ಎನ್ನಲಾಗಿದೆ. ಹೌದು, ಹಿಂದೂ ಪುರಾಣಗಳ ಪ್ರಕಾರ ಶನಿವಾರ ಸಂಜೆ ತುಳಸಿ ಗಿಡದ ಕೆಳಗೆ ಶಾಲಿಗ್ರಾಮ ಕಲ್ಲನ್ನು ಇಡಬೇಕು. ಈ ರೀತಿಯ ಕಲ್ಲುಗಳು ಈಗ ಆನ್‌ಲೈನ್ ಇ-ಕಾಮರ್ಸ್ ಸೈಟ್‌ಗಳಲ್ಲಿಯೂ ಲಭ್ಯವಿದೆ.

ಗಂಡಕ ಶಿಲೆಗಳನ್ನು ಸಾಲಿಗ್ರಾಮ ಎಂದು ಕರೆಯುತ್ತಾರೆ. ಈ ಕಲ್ಲು ಭಗವಾನ್ ವಿಷ್ಣುವಿನ ಮೂರ್ತರೂಪವೆಂದು ಪರಿಗಣಿಸಲಾಗಿದೆ. ತಿರುಮಲದಲ್ಲಿರುವ ಶ್ರೀವಾರಿ ಮೂಲ ವಿರಟ್ಟನ್ನು ಗಂಡಕ ಶಿಲೆ ಎಂದೂ ಹೇಳಲಾಗುತ್ತದೆ. ತುಳಸಿಯೊಂದಿಗೆ ಸಾಲಿಗ್ರಾಮವನ್ನು ಇಟ್ಟಿರುವ ಮನೆಯಲ್ಲಿ ಹಣದ ಕೊರತೆಯಿಲ್ಲ ಎಂದು ಪುರಾಣಗಳು ಹೇಳುತ್ತವೆ.

ತುಳಸಿ ಗಿಡದ ಕೆಳಗೆ ಗಂಡಕ ಶಿಲೆ (ಸಾಲಿಗ್ರಾಮ) ಇಡುವುದರಿಂದ ಬಡತನ ದೂರವಾಗುವುದರ ಜೊತೆಗೆ ಮನೆಯಲ್ಲಿ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗಿದೆ. ನವ ದಂಪತಿಗಳು ಈ ರೀತಿ ಮಾಡಿದರೆ ಅವರ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತದೆ. ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ಇದಲ್ಲದೆ, ತುಳಸಿ ಜನರಿಗೆ ವಾಸ್ತು ದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಸಸ್ಯದ ಉಪಸ್ಥಿತಿಯು ನಕಾರಾತ್ಮಕ ಶಕ್ತಿಗಳನ್ನು (negative energy) ನಿರ್ಮೂಲನೆ ಮಾಡಲು ಅಥವಾ ದುಷ್ಟಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಗಿಡವನ್ನು ನೆಟ್ಟರೆ ಮನೆಯಲ್ಲಿ ಸದಾ ನೆಮ್ಮದಿ – ಸಂತೋಷ (happiness) ಮನೆ ಮಾಡಿರುತ್ತದೆ.

ಇದನ್ನೂ ಓದಿ: WhatsApp: 74 ಲಕ್ಷ ಭಾರತೀಯರ ವಾಟ್ಸಪ್ ಖಾತೆ ಬ್ಯಾನ್ !! ನಿಮ್ಮ ಅಕೌಂಟ್ ಕೂಡ ಉಂಟಾ ?!

Leave A Reply

Your email address will not be published.