Water Bottle Technology: ಪ್ಲಾಸ್ಟಿಕ್​ ಬಾಟಲ್ ಗೆ ಗೇಟ್ ಪಾಸ್! ಶೀಘ್ರದಲ್ಲಿ ಎಂಟ್ರಿಕೊಡಲಿದೆ ಹೊಸ ಮಾಡೆಲ್ ವಾಟರ್ ಬಾಟಲ್ !!

National news DFRL MYSORE DEVELOPS BIODEGRADABLE WATER BOTTLE TECHNOLOGY IN MYSORE

Water Bottle Technology: ಪ್ಲಾಸ್ಟಿಕ್ ಈಗ ಪ್ರಪಂಚವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದ್ದು, ಇದರ ಬಳಕೆಯಿಂದ ಪರಿಸರದಲ್ಲಿ ಮಾಲಿನ್ಯದ ಜೊತೆಗೆ ಸಮಸ್ಯೆಗಳು ಉಂಟಾಗುತ್ತಿವೆ. ಅದರಲ್ಲೂ ನೀರಿನ ಬಾಟಲಿಗಳನ್ನು ತಯಾರಿಸಲು ಬಳಸುವ ವಸ್ತುವು ಪಾಲಿಮರ್ ಆಗಿದೆ. ಪಾಲಿಮರ್ ಎಂದರೆ ಕಾರ್ಬನ್, ಆಮ್ಲಜನಕ, ಹೈಡ್ರೋಜನ್ ಮತ್ತು ಕ್ಲೋರೈಡ್‌ನಿಂದ ಮಾಡಲ್ಪಟ್ಟಿರುತ್ತದೆ. ಈ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ನಾವು ಪ್ರತಿಯೊಂದು ಕಡೆ ಈಗ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸಿದ ನಂತರ ಎಲ್ಲೆಂದರಲ್ಲಿ ಎಸೆಯುತ್ತೇವೆ. ಆದರೆ ಬಿಸಾಡಿದ ಈ ಬಾಟಲ್​ಗಳು ವರ್ಷಾನುಗಟ್ಟಲೆ ಕರಗದೆ ಹಾಗೆ ಉಳಿದುಕೊಂಡು ಬಿಡುತ್ತವೆ. ಈ ಮೂಲಕ ಪರಿಸರದಲ್ಲಿ​ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮೈಸೂರಿನ DFRL-DRDO ವಿಜ್ಞಾನಿಗಳು ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್ ಟೆಕ್ನಾಲಜಿಯನ್ನು (Water Bottle Technology) ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನವನ್ನು ಸಿರಿಧಾನ್ಯ ಸಮಾವೇಶದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಟೆಕ್ನಾಲಜಿ ಪ್ಲಾಸ್ಟಿಕ್ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತದೆ ಎಂಬ ಬಗ್ಗೆ ಸಂಶೋಧಕ ವಿಜ್ಞಾನಿ ಡಾ. ಜಾನ್ ಸಿ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಭಾರತ ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್​ನ್ನು ಬ್ಯಾನ್ ಮಾಡಿದೆ. ಏಕೆಂದರೆ ಕಸ ವಿಲೇವಾರಿ ಮಾಡದಿರುವುದು, ಆದರೆ ಈ ಸಮಸ್ಯೆಗೆ ಪರಿಹಾರವಾಗಿ ಜೈವಿಕ ವಿಘಟನೆಯ ಕ್ರಿಯೆಗೆ ಸಹಕಾರಿಯಾಗುವ ಅಂಶವಾದ ಪೊವ್ಲಿ ಲ್ಯಾಕ್ಟೋಯಿಕ್ ಆಮ್ಲದಿಂದ ಬಾಟಲ್​ನ್ನು ತಯಾರು ಮಾಡಿದ್ದೀವಿ. ಇದು ವಾತಾವರಣದಲ್ಲಿ ಕರುಗುತ್ತದೆ. ಈ ಮೂಲಕ ಪರಿಸರಕ್ಕೆ ಸಹಾಯವು ಆಗಲಿದೆ ಎಂದು ಡಾ. ಜಾನ್​ ಸಿ ಹೇಳಿದ್ದಾರೆ.

ಕಬ್ಬು ಹಾಗೂ ಇನ್ನಿತರ ಪದಾರ್ಥಗಳನ್ನು ಸಂಸ್ಕರಿಸಿ ಅದರ ಮೂಲಕ ನಾವು ತಯಾರಿಸುತ್ತೇವೆ. ತಯಾರು ಮಾಡುವ ವೇಳೆಯಲ್ಲಿ ನಾನಾ ಸಮಸ್ಯೆಗಳು ಎದುರಿಸಿದ್ದೇವೆ. ಜತೆಗೆ ಕೆಲವು ಉದ್ಯಮಿಗಳ ಸಹಾಯದಿಂದ ಅದನ್ನು ಉತ್ಪಾದಿಸಲು ಸಹಕರಿಯಾಯಿತು. ಇಂಜೆಕ್ಷನ್ ಮೌಲ್ಡ್ ಟೆಕ್ನಾಲಜಿ ಮೂಲಕ ನಾವು ಬಾಟಲಿಗಳನ್ನು ತಯಾರಿಸಿದ್ದೇವೆ. ಈಗ ಇದು ಸಂಪೂರ್ಣವಾಗಿ ಸಿದ್ಧವಾಗಿದ್ದು, ನಾವು ಇ-ಟೆಕ್ನಾಲಜಿಯನ್ನು ಉದ್ಯಮಿಗಳಿಗೆ ಕೊಡುತ್ತೇವೆ. ಅವರು ಇವುಗಳನ್ನು ತಯಾರು ಮಾಡಿ ಸಾರ್ವಜನಿಕರಿಗೆ ತಲುಪಿಸುತ್ತಾರೆ.

ನಾವು ಇದರ ಬಗ್ಗೆ ಶಿಕ್ಷಣವನ್ನು ಫುಡ್ ಅಂಡ್ ವಾಟರ್ ಪ್ರಾಡಕ್ಟ್ಸ್ ಮುಖಾಂತರ ತಿಳಿಸಿದ್ದು, ವಸ್ತುಗಳು ಸಿದ್ಧವಾಗಿವೆ. ಇದು ವಾತಾವರಣಕ್ಕೂ ಬಹಳ ಒಳ್ಳೆಯದು. ವಿಜ್ಞಾನಿ ಡಾ. ಜಾನ್ ಸಿ ಅವರ ಪ್ರಕಾರ ಈ ತಂತ್ರಜ್ಞಾನ ಈಗಷ್ಟೇ ತಯಾರಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮುಖ್ಯವಾಗಿ ಇದರಿಂದ ಪ್ಲಾಸ್ಟಿಕ್ ಸಮಸ್ಯೆ ಪರಿಹಾರ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.

ಇದನ್ನೂ ಓದಿ: ಬರ್ತಿದೆ ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಕಾಯಿಲೆ !! ಕೋಟಿಗಟ್ಟಲೆ ಜನರ ಜೀವಕ್ಕೆ ಕಾದಿದೆ ಕುತ್ತು !!

Leave A Reply

Your email address will not be published.