Sandalwood News: ನಟ ನಾಗಭೂಷಣ್ ಕಾರು ಭೀಕರ ಅಪಘಾತ- ಸ್ಥಳದಲ್ಲೇ ಒಂದು ಸಾವು

Sandalwood news actor Nagabhushan car accident

Nagabhushan car accident: ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸ್ಯಾಂಡಲ್ ವುಡ್ ನಟ ನಾಗಭೂಷಣ್ ಕಾರು ಅಪಘಾತ (Nagabhushan car accident) ಸಂಭವಿಸಿದ್ದು, ಈ ಅವಘಡದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ನಿನ್ನೆ ತಡರಾತ್ರಿ ಕನಕಪುರ ರಸ್ತೆಯಲ್ಲಿ ವಸಂತಪುರ ರಸ್ತೆಯ ಅಪಾರ್ಟ್ ಮೆಂಟ್ ಬಳಿರಾತ್ರಿ ಊಟ ಮುಗಿಸಿ ವೃದ್ಧ ದಂಪತಿ ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ಸಂದರ್ಭ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ,ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು,ಮೃತ ಮಹಿಳೆಯನ್ನು ಪ್ರೇಮ ಎಂದು ಗುರುತಿಸಲಾಗಿದೆ ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿ ನುಜ್ಜುಗುಜ್ಜಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ,ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ನಟ ನಾಗಭೂಷಣ್ (Nagabhushana) ಅವರ ಕಾರು ಅಪಘಾತಕ್ಕೀಡಾಗಿದ್ದು, ಅಕ್ಟೋಬರ್ 30 ಶನಿವಾರದಂದು ಕೋಣನಕುಂಟೆ ಕ್ರಾಸ್ ಬಳಿ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಗಭೂಷಣ ಅವರು ಪ್ರೇಮ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗ ಮಧ್ಯದಲ್ಲಿ ಪ್ರೇಮಾ ಮೃತಪಟ್ಟಿದ್ದಾರೆ. ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಾ ಮತ್ತು ಕೃಷ್ಣ ದಂಪತಿಯ ಪುತ್ರ ಪಾರ್ಥ ಕೆ. ಅವರು ದೂರು ನೀಡಿದ್ದು, ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು (Accident Case) ಮಾಡಲಾಗಿದೆ.

ಈ ಪ್ರಕರಣದ ಕುರಿತು ನಾಗಭೂಷಣ್ ಹೇಳಿಕೆ ನೀಡಿದ್ದು,
‘ಅಕ್ಟೋಬರ್ 30ರಂದು ಭೇಟಿಯಾಗಲು ಆರ್.ಆರ್ ನಗರಕ್ಕೆ ಹೋಗಿ, ಸ್ನೇಹಿತರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದ ಸಂದರ್ಭ ಜೆ.ಪಿ. ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕೀಯ ಸೆಲ್ಟೋಸ್ ಕಾರ್ ನಂಬರ್ ಕೆಎ-09 ಎಂಜಿ 5335ರ ವಾಹನವನ್ನು ಚಾಲನೆ ಮಾಡಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗಲು ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬ್ರೀಜ್ ಅಪಾರ್ಟ್ಮೆಂಟ್ ಹತ್ತಿರ ರಾತ್ರಿ ಸುಮಾರು 9.45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವ ಸಂದರ್ಭ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಪುಟ್ ಪಾತ್ ಮೇಲಿಂದ ರಸ್ತೆಯ ಕೆಳಗೆ ಇಳಿದು ಬಂದಿದ್ದಾರೆ. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದ ಕುರಿತು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

‘ಪಾದಚಾರಿ ಹೆಂಗಸಿನ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿ ಮಾತಾನಾಡದ ಸ್ಥಿತಿಗೆ ತಲುಪಿದ್ದರು. ಮತ್ತೊಬ್ಬ ಪಾದಚಾರಿ ಗಂಡಸಿಗೆ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ಗಾಯವಾಗಿ ಮಾತಾನಾಡುತ್ತಿದ್ದರು. ನಾನು ಗಾಯಾಳುಗಳನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾದಾಗ ನನ್ನ ಕಾರು ಸ್ಟಾಟ್ ಆಗಲಿಲ್ಲ. ನಾನು ಕಾರಿನಿಂದ ಕೆಳಕ್ಕೆ ಇಳಿದು ಒಂದು ಆಟೋರಿಕ್ಷಾದಲ್ಲಿ ಅಲ್ಲಿದ್ದ ಜನರ ಜೊತೆ ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿರುವ ಅಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ವೈದ್ಯರು ಗಾಯಾಳು ಹೆಂಗಸನ್ನು ಪರೀಕ್ಷಿಸಿ ದಾರಿಯ ಮಧ್ಯದಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ರಾತ್ರಿಯಿಂದ ಪೊಲೀಸರ ಬಂಧನದಲ್ಲಿ ನಟ ನಾಗಭೂಷಣ್‌ನನ್ನು ಸ್ಟೇಷನ್‌ ಬೇಲ್‌ ಆಧಾರದಲ್ಲಿ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಶನಿವಾರ ರಾತ್ರಿ ಕಿಯಾ ಕಾರಿನಲ್ಲಿ ವೇಗವಾಗಿ ಬಂದು ದಂಪತಿಗೆ ಗುದ್ದಿದ್ದು, ಪತ್ನಿ ಮೃತಪಟ್ಟರೆ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಳ ಮಗ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್‌ 279 ಅತಿ ವೇಗದ ಚಾಲನೆ, ಐಪಿಸಿ ಸೆಕ್ಷನ್‌ 337 ನಿರ್ಲಕ್ಷ್ಯತನದ ಚಾಲನೆ ಹಾಗೂ ಸೆಕ್ಷನ್‌ 304ಎ ನಿರ್ಲಕ್ಷ್ಯ ಚಾಲನೆಯಿಂದ ಸಾವು ಕುರಿತ ಪ್ರಕರಣಗಳ ಅಡಿಯಲ್ಲಿ ನಟ ನಾಗಭೂಷಣ್‌ ವಿರುದ್ಧ ದೂರು ದಾಖಲಿಸಲಾಗಿತ್ತು. ರಾತ್ರಿ ಪೂರ್ತಿ ಜೈಲಿನಲ್ಲಿ ಕಳೆದ ನಟ ನಾಗಭೂಷಣ್‌ ಬೆಳಗ್ಗೆ ಸ್ಟೇಷನ್‌ ಬೇಲ್‌ ಆಧಾರದಲ್ಲಿ ಬಂಧನದಿಂದ ಮುಕ್ತಿ ಪಡೆದಿದ್ದಾರೆ.

ಇದನ್ನೂ ಓದಿ: UP Crime News: Uttar Pradesh: ಶಾಲೆಯಿಂದ ಹೋಗುವಾಗ ಒಬ್ಬಳೇ ಒಬ್ಬಳು ಬಾಲಕಿಯನ್ನು ಉಳಿಸಿಕೊಂಡ ಪ್ರಾಂಶುಪಾಲ – ಬಳಿಕ ಈ ನೀಚ ಮಾಡಿದ್ದೇನು ಗೊತ್ತಾ ?!

Leave A Reply

Your email address will not be published.