Home National Sringeri: ವಿಷ ಕುಡಿದು 19ರ ಹುಡುಗಿ ಆತ್ಮಹತ್ಯೆ !! ಕಾರಣವೇನು ?!

Sringeri: ವಿಷ ಕುಡಿದು 19ರ ಹುಡುಗಿ ಆತ್ಮಹತ್ಯೆ !! ಕಾರಣವೇನು ?!

Sringeri

Hindu neighbor gifts plot of land

Hindu neighbour gifts land to Muslim journalist

Sringeri: ಜೀವನದಲ್ಲಿ ಹೊಸ ಕನಸುಗಳನ್ನು ಕಾಣುತ್ತ, ಬದುಕು ನಿರ್ಮಿಸುವ ಸಮಯದಲ್ಲಿ, ಯುವತಿಯೊಬ್ಬಳು, ಗೌರಿ ಗಣೇಶ ಹಬ್ಬಕ್ಕೆಂದು ಮನೆಗೆ ಹೋದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆ (Girl Suicide) ಮಾಡಿಕೊಂಡಿದ್ದಾಳೆ.

ಹೌದು, ಶೃಂಗೇರಿ (Sringeri)ಪದವಿ ಕಾಲೇಜಿನಲ್ಲಿ ಬಿಕಾಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಸುರಕ್ಷಾ ಎಂಬವಳು ಪಟ್ಟಣದ ಸಚ್ಚಿದಾ ನಂದಪುರದ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿದ್ದುಕೊಂಡು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆ ಗೌರಿ ಗಣೇಶ ಹಬ್ಬಕ್ಕೆಂದು ಮನೆಗೆ ಹೋದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ವಿಷ ಸೇವಿಸಿದ ವಿಷಯ ತಿಳಿದ ಕೂಡಲೇ ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಯನ್ನು ಚಿಕಿತ್ಸೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರಕ್ಷಾ ಮೃತಪಟ್ಟಿದ್ದಾಳೆ.

ಶೃಂಗೇರಿ ತಾಲೂಕಿನ ಬೇಗಾರು ಪಂಚಾಯಿತಿ ವ್ಯಾಪ್ತಿಯ ಬೇಗಾರಿನಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: ಆತ ‘ಅದಕ್ಕೆ’ ಕರೆದ, ನಾನು ‘ನೋ’ ಎಂದೆ – ನಂತರ ಆದದ್ದೇ ಬೇರೆ !! ಅಚ್ಚರಿ ಹೇಳಿಕೆ ನೀಡಿದ ಖ್ಯಾತ ನಟಿ