Esha Gupta: ಆತ ‘ಅದಕ್ಕೆ’ ಕರೆದ, ನಾನು ‘ನೋ’ ಎಂದೆ – ನಂತರ ಆದದ್ದೇ ಬೇರೆ !! ಅಚ್ಚರಿ ಹೇಳಿಕೆ ನೀಡಿದ ಖ್ಯಾತ ನಟಿ

Bollywood news entertainment actress esha gupta shares her casting couch experience

Esha Gupta: ಸತತ ಸಿದ್ಧತೆಯೊಂದಿಗೆ 2007ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಆಗಿದ್ದ ಇಶಾ ಗುಪ್ತಾ(Esha Gupta), ಮಾಡೆಲಿಂಗ್‌ ಮೂಲಕ 2012ರಲ್ಲಿ ಜನ್ನತ್‌ 2 ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದವರು. ಆದರೆ ಬಾಲಿವುಡ್‌ನಲ್ಲಿ ಹೆಸರು ಮಾಡಿದವರು, ಒಂದಲ್ಲ ಒಂದು ಕರಾಳ ಅನುಭವಕ್ಕೆ ಒಳಗಾಗಿರುವುದು, ಆಗಾಗ ಬೆಳಕಿಗೆ ಬರುತ್ತದೆ.

ಇಶಾ ಗುಪ್ತಾ ಅವರು ಜನ್ನತ್‌ 2 ಚಿತ್ರದ ಬಳಿಕ, ರಾಜ್‌ 3ಡಿ, ಗೋರಿ ತೇರೆ ಪ್ಯಾರ್‌ ಮೇ, ಹಮ್‌ಶಕಲ್ಸ್‌, ಬೇಬಿ, ರುಸ್ತುಮ್‌, ಟೋಟಲ್‌ ಧಮಾಲ್‌, ಪಲ್ಟಾನ್‌, ಬಾದ್‌ಶಾಹೋ ಸೇರಿದಂತೆ ಇನ್ನೂ ಕೆಲ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.

ಸದ್ಯ 37 ವರ್ಷದ ಇಶಾ ಗುಪ್ತಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು, ಏಕ್‌ ಬದ್ನಾಮ್‌.. ಆಶ್ರಮ್‌ ಸೀಸನ್‌-3 ಅಲ್ಲಿ. ಬಾಬಿ ಡಿಯೋಲ್‌ಗೆ ಎದುರಾಗಿ ಅವರು ನಟಿಸಿದ್ದರು. ಹಾಗಂತ ಇಶಾ ಗುಪ್ತಾ ಎಲ್ಲೂ ಮರೆಯಾಗಿಲ್ಲ. ಸಿನಿಮಾದಲ್ಲಿ ಬಂದ ಅವಕಾಶಗಳಲ್ಲಿ ನಟಿಸುತ್ತಾ, ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಹಾಕುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

ಇದೀಗ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಜೀವನದಲ್ಲಿ ಎದುರಿಸಿದ ಆಘಾತಕಾರಿ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ. ಹೌದು, ಹೊರಾಂಗಣ ಚಿತ್ರೀಕರಣದ ವೇಳೆ ಈ ಘಟನೆ ಆಗಿತ್ತು ಎಂದಿದ್ದಾರೆ.

ಇಶಾ ಗುಪ್ತಾಗೆ ಒಮ್ಮೆ ಅಲ್ಲ, ಎರಡು ಬಾರಿ ಕಾಸ್ಟಿಂಗ್‌ ಕೌಚ್‌ ಅನುಭವವಾಗಿದೆಯಂತೆ. ಎರಡೂ ಬಾರಿಯೂ ಹೇಗೋ ತಪ್ಪಿಸಿಕೊಂಡಿದ್ದೇನೆ ಎಂದು ನಿರಾಳರಾಗಿದ್ದಾರೆ. ಅವರ ಹೇಳಿದ ಪ್ರಕಾರ, ಮೊದಲ ಘಟನೆಯಲ್ಲಿ ಚಿತ್ರವೊಂದು ಹೆಚ್ಚೂ ಕಡಿಮೆ ಅರ್ಧಪಾಲು ಶೂಟಿಂಗ್‌ ಮುಗಿಸಿತ್ತು. ಈ ಹಂತದಲ್ಲಿ ಚಿತ್ರ ನಿರ್ಮಾಣ ಮಾಡಿದ ವ್ಯಕ್ತಿ ನನ್ನೊಂದಿಗೆ ಸೆಕ್ಸ್‌ ಬಯಕೆ ವ್ಯಕ್ತಪಡಿಸಿದ್ದ ಎಂದು ಇಶಾ ಹೇಳಿದ್ದಾರೆ. ನಾನು ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದೆ. ಈ ಹಂತದಲ್ಲಿ ಬಂದ ಚಿತ್ರದ ಸಹ ನಿರ್ಮಾಪಕ, ನಿರ್ದೇಶಕರಿಗೆ ನಾನು ಚಿತ್ರದಲ್ಲಿ ಇರೋದು ಇಷ್ಟವಿಲ್ಲ ಎಂದಿದ್ದ. ಅದಾದ ಮೇಲೆ ಸೆಟ್‌ನಲ್ಲಿದ್ದು ನಾನೇನು ಮಾಡಲಿ. ಕೆಲವೊಂದು ನಿರ್ಮಾಪಕರು ಇದೇ ಕಾರಣಕ್ಕಾಗಿ ನನಗೆ ಸಿನಿಮಾ ಆಫರ್‌ ಮಾಡುತ್ತಿರಲಿಲ್ಲ ಎಂದಿದ್ದಾರೆ.

ನಿರ್ಮಾಪಕರ ಜೊತೆ ದೇಹ ಸಂಪರ್ಕ ಮಾಡಲು ಇಷ್ಟವಿಲ್ಲ ಎಂದಾದಲ್ಲಿ, ಅವರನ್ನು ಸಿನಿಮಾ ಹೀರೋಯಿನ್‌ ಆಗಿ ಯಾಕೆ ನಾವು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದನ್ನೂ ನಾನು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ಇಶಾ ಹೇಳಿದ್ದಾರೆ.

ಅದಲ್ಲದೆ ಇನ್ನೊಮ್ಮೆ ಹೊರಾಂಗಣ ಚಿತ್ರೀಕರಣದ ವೇಳೆ ನನ್ನ ಕೋಣೆಯ ಬಾಗಿಲನ್ನು ವ್ಯಕ್ತಿ ಒಬ್ಬ ನಿರಂತರವಾಗಿ ಬಡಿಯುತ್ತಿದ್ದ. ಈ ವೇಳೆ ನನ್ನ ಮೇಕಪ್‌ ಆರ್ಟಿಸ್ಟ್‌ಗೆ ನನ್ನ ರೂಮ್‌ನಲ್ಲಿಯೇ ಮಲಗಿಕೊಳ್ಳುವಂತೆ ಹೇಳಿದ್ದೆ ಎಂದು ಇಶಾ ತಿಳಿಸಿದ್ದಾರೆ. ಆಗ ಇಬ್ಬರು ವ್ಯಕ್ತಿಗಳು ನನ್ನನ್ನು ಕಾಸ್ಟಿಂಗ್‌ ಕೌಚ್ ಟ್ರ್ಯಾಪ್‌ಗೆ ಹಾಕಲು ಬಯಸಿದ್ದರು. ಹೊರಾಂಗಣ ಚಿತ್ರೀಕರಣದ ವೇಳೆ ನಾನು ಅವರ ಕಾಸ್ಟಿಂಗ್‌ ಕೌಚ್‌ ಟ್ರ್ಯಾಪ್‌ಗೆ ಬೀಳಬಹುದು ಎಂದು ಆತ ಅಂದುಕೊಂಡಿದ್ದ. ಆದರೆ, ನಾನು ಸ್ಮಾರ್ಟ್‌ ಆಗಿದ್ದೆ. ಹೊರಾಂಗಣ ಚಿತ್ರೀಕರಣದ ವೇಳೆಯಲ್ಲೂ ಎಚ್ಚರಿಕೆ ವಹಿಸಿದ್ದೆ ಎಂದಿದ್ದಾರೆ.

ಮುಖ್ಯವಾಗಿ ಹೊರಾಂಗಣ ಚಿತ್ರೀಕರಣ ಇರುವಾಗ ನಾನು ಒಬ್ಬಳೇ ಮಲಗಿಕೊಳ್ಳೋದಿಲ್ಲ ಎಂದು ಅವರಿಗೆ ತಿಳಿಸಿದ್ದೆ. ಇದಕ್ಕಾಗಿ ಅವರ ಎದುರೇ ನನ್ನ ಮೇಕಪ್‌ ಆರ್ಟಿಸ್ಟ್‌ಅನ್ನು ಕರೆದು ಅವರೊಂದಿಗೆ ನನ್ನ ರೂಮ್‌ನಲ್ಲಿ ಮಲಗಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: KPSCಯಿಂದ ಅಧಿಸೂಚನೆ! 230 ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ!

Leave A Reply

Your email address will not be published.