POMIS: ಈ ಯೋಜನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಖಾತೆ ತೆರೆಯಿರಿ !! ಪ್ರತೀ ತಿಂಗಳು 9000 ಪಡೆಯಿರಿ.

POMIS: ದೇಶದಲ್ಲಿ ವಿವಿಧ ಹೂಡಿಕೆ ಯೋಜನೆಗಳಿವೆ. ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಆದಾಯವನ್ನು ಪಡೆಯಲು ಹಲವು ಯೋಜನೆಗಳು ಲಭ್ಯವಿದೆ. ಅದರಲ್ಲೂ ಕೂಡ ಈ ವಿವಿಧ ಉತ್ತಮ ಯೋಜನೆಗಳು ಈಗ ಅಂಚೆ ಕಚೇರಿಗಳಲ್ಲಿ(Post office) ಲಭ್ಯವಾಗುತ್ತಿದ್ದು ಜನರು ಇದರ ಫಲಾನುಭವಿಗಳಾಗಲು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಕೂಡ ಸರ್ಕಾರ ಇದೀಗ ಪರಿಚಿಸಿರುವ ಹೊಸ ಯೋಜನೆಯ ಫಲಾನುಭವಿಗಳು ಜನ ಅಂಚೆಕಛೇರಿಯಲ್ಲಿ ಸಾಲಾಗಿ ನಿಂತಿದ್ದಾರೆ.

ಹೌದು, ನೀವೇನಾದ್ರೂ ಭವಿಷ್ಯದಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ಪೋಸ್ಟ್ ಆಫೀಸ್ ನ ಈ ಹೊಸ ಯೋಜನೆಯಲ್ಲಿ (Post Office Scheme) ಹೂಡಿಕೆ ಮಾಡಲೇಬೇಕು. ವಿಶೇಷ ಅಂದ್ರೆ ಇದ್ರಲ್ಲಿ ಕೇವಲ ಒಬ್ಬರಲ್ಲ, ಗಂಡ ಹೆಂಡತಿ ಇಬ್ಬರೂ ಜಾಯಿಂಟ್ ಅಕೌಂಟ್ ತೆರೆಯಬಹುದು. ನೀವೇನಾದರು ಇದರಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9000ರೂ. ಕ್ಕೂ ಅಧಿಕ ಹಣವನ್ನು ಪಡೆಯಬಹುದು. ಸದ್ಯ ಇದನ್ನು ತಿಳಿದಂತಹ ಜನ ಇದೀಗ ಅಂಚೆಕಛೇರಿ ಎದುರು ಸಾಲುಗಟ್ಟಿದ್ದಾರೆ.ಈ ಯೋಜನೆಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ(POMIS):
ಪೋಸ್ಟ್ ಆಫೀಸ್ (Post Office)ನ ಮಾಸಿಕ ಆದಾಯ ಯೋಜನೆ:
ಹೂಡಿಕೆ ಮಾಡಿ ಭವಿಷ್ಯದಲ್ಲಿ ಹೆಚ್ಚಿನ ಹಣ ಗಳಿಸಲು ಪೋಸ್ಟ್ ಆಫೀಸ್ (Post Office)ನ ಮಾಸಿಕ ಆದಾಯ ಯೋಜನೆ ಬೆಸ್ಟ್ ಆಯ್ಕೆ ಆಗಿದೆ. ಈ ಯೋಜನೆಯಲ್ಲಿ ಒಂಬತ್ತು ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು. ಇನ್ನು ಜಂಟಿ ಖಾತೆ ತೆರೆದರೆ ಪತಿ ಹಾಗೂ ಪತ್ನಿ 15 ಲಕ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ. 5-5 ವರ್ಷಗಳ ಪಾಲಿಸಿ ಇದಾಗಿದ್ದು ಮೆಚುರಿಟಿ ಸಮಯದಲ್ಲಿ ಅಸಲು ಹಾಗೂ ಬಡ್ಡಿ ಸಮೇತ ಕೈತುಂಬ ಹಣ ಗಳಿಸಬಹುದು. ನಿಮ್ಮ ಖಾತೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡುತ್ತಿರೋ ಅಷ್ಟು ಉತ್ತಮವಾಗಿರುವ ಬಡ್ಡಿ ಸಿಗುತ್ತದೆ ಮಾಸಿಕ ಆದಾಯವನ್ನು 7.4% ವಾರ್ಷಿಕ ಬಡ್ಡಿಯಲ್ಲಿ ಪ್ರತಿ ತಿಂಗಳು 9250ರೂ.ಗಳನ್ನು ಪಡೆಯಬಹುದು.

ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಒಬ್ಬ ವ್ಯಕ್ತಿಯಾದರೆ 9 ಲಕ್ಷ ಹಾಗೂ ಪತಿ-ಪತ್ನಿ ಇಬ್ಬರು ಖಾತೆ ಜಂಟಿಯಾಗಿ ತೆರೆಯುವುದಾದರೆ 15 ಲಕ್ಷ ಹೂಡಿಕೆ ಮಾಡಬೇಕು. ಪೋಸ್ಟ್ ಆಫೀಸ್ ಎಂಐಎಸ್ ಯೋಜನೆ (POMIS)ಯ ಅಡಿಯಲ್ಲಿ ಪ್ರಸ್ತುತ 7.4% ಬಡ್ಡಿ ದರವನ್ನು ನೀಡುತ್ತದೆ. ಅಂದರೆ ವರ್ಷಕ್ಕೆ ಒಂದು ಲಕ್ಷದ 1,11,000ರೂ.ಗಳನ್ನು ಬಡ್ಡಿಯಾಗಿ ಪಡೆಯಬಹುದು. ಲೆಕ್ಕಾಚಾರದ ಪ್ರಕಾರ 12 ತಿಂಗಳ ವರೆಗೆ ಈ ಯೋಜನೆಯನ್ನು ವಿಸ್ತರಿಸಿದರೆ ಪ್ರತಿ ತಿಂಗಳು ಬಡ್ಡಿಯಾಗಿ 9250ರೂ.ಗಳನ್ನು ಪಡೆಯಬಹುದು.

ಮಿತಿ ಎಷ್ಟು?
ನೀವು ಸಹ ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಯೋಜನೆಗಳಲ್ಲಿ ನೀವು ರೂ 9 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದು. ಅಂದರೆ ನೀವು ಕೇವಲ 9 ಲಕ್ಷ ರೂ. ಇದಕ್ಕಿಂತ ಹೆಚ್ಚಿನ ಹೂಡಿಕೆಗೆ ಅವಕಾಶವಿಲ್ಲ. ನೀವು ಜಂಟಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು ಕೇವಲ 15 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದು

POMIS ಹೇಗೆ ಕೆಲಸ ಮಾಡುತ್ತದೆ?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಹೂಡಿಕೆಗೆ ಆಯ್ಕೆ ಮಾಡುವುದು ಕನಿಷ್ಠ ದಾಖಲಾತಿಯೊಂದಿಗೆ ಸುಲಭವಾಗಿದೆ. ಆದಾಗ್ಯೂ, ಅದಕ್ಕೂ ಮೊದಲು, ನೀವು ವೈಯಕ್ತಿಕ ಅಥವಾ ಜಂಟಿ ಖಾತೆಯನ್ನು ಹೊಂದಲು ಬಯಸುತ್ತೀರಾ ಎಂದು ನೀವು ನಿರ್ಧರಿಸಬೇಕು. ಅದರಂತೆ, ನೀವು ಮೊತ್ತವನ್ನು ಠೇವಣಿ ಮಾಡಬಹುದು.

ನೀವು 4,50,000 ರೂಪಾಯಿಗಳನ್ನು 5 ವರ್ಷಗಳ POMIS ಅವಧಿಯಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸೋಣ. 6.6% ವಾರ್ಷಿಕ ಬಡ್ಡಿ ದರದಲ್ಲಿ, ನೀವು ಆನ್‌ಲೈನ್‌ನಲ್ಲಿ ಲಭ್ಯವಿರುವ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ರೂ 2,475 ರ ಸ್ಥಿರ ಮಾಸಿಕ ಪಾವತಿಯನ್ನು ಸ್ವೀಕರಿಸಬೇಕು. ಹೂಡಿಕೆಯ ಅವಧಿಯ ಕೊನೆಯಲ್ಲಿ ನೀವು ಠೇವಣಿ ಮಾಡಿದ ಹಣವನ್ನು ಮರಳಿ ಪಡೆಯುತ್ತೀರಿ

ನೀವು ಹಣವನ್ನು 2 ರೀತಿಯಲ್ಲಿ ಹಿಂಪಡೆಯಬಹುದು: ನೇರವಾಗಿ ಪೋಸ್ಟ್ ಆಫೀಸ್‌ನಿಂದ ಅಥವಾ ಇಸಿಎಸ್ ಮೂಲಕ ಉಳಿತಾಯ ಖಾತೆಗೆ ಜಮಾ ಮಾಡಬಹುದು. ನೀವು ಪ್ರತಿ ತಿಂಗಳು ಹಣವನ್ನು ಹಿಂಪಡೆಯಲು ಅನುಮತಿಸಲಾಗಿದೆ. ಆದಾಗ್ಯೂ, ಹೂಡಿಕೆದಾರರು ಅದನ್ನು ಕೆಲವು ತಿಂಗಳುಗಳಲ್ಲಿ ಸಂಗ್ರಹಿಸಲು ಅವಕಾಶ ಮಾಡಿಕೊಡಬಹುದು ಮತ್ತು ನಂತರ ಅದನ್ನು ಹಿಂತೆಗೆದುಕೊಳ್ಳಬಹುದು, ಆದರೆ ಐಡಲ್ ಹಣವು ನಿಮಗೆ ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲವಾದ್ದರಿಂದ ಇದು ಅನುಕೂಲಕರವಾಗಿಲ್ಲ.

Leave A Reply

Your email address will not be published.