Theft Case: 57 ವರ್ಷಗಳ ಹಿಂದೆ ಎಮ್ಮೆ ಕದ್ದ- ಇಂದು ಪೋಲೀಸ್ ಕೈಗೆ ಸಿಕ್ಕಿ ಬಿದ್ದ !! ಅರೇ.. ಏನಿದು ವಿಚಿತ್ರ ಕೇಸ್ ?!!
Police Case: ಇಲ್ಲೊಬ್ಬ ಪುಣ್ಯಾತ್ಮ ಅಂತಿತಾ ಕಳ್ಳನಲ್ಲ. ಎಮ್ಮೆ ಕಳವು ಮಾಡಿ ಸರಿಸುಮಾರು 57 ವರ್ಷದ ಬಳಿಕ ಸಿಕ್ಕಿಬಿದ್ದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ. ವಿಠ್ಠಲ ವಾಗ್ಮೋರೆ ಎಂಬವನು ಕಳ್ಳತನ ಮಾಡಿದಾಗ ಈತನಿಗೆ ವಯಸ್ಸು ಕೇವಲ 20 ವರ್ಷ. ಈಗ 80ನೇ ವಯಸ್ಸಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಾನೆ!
ಹೌದು, ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಟಾಕಳಗಾಂವ್ ಗ್ರಾಮದ ನಿವಾಸಿ ಗಣಪತಿ ವಿಠ್ಠಲ ವಾಗ್ಮೋರೆ ಎಂಬುವ 1965 ಎಪ್ರಿಲ್ 25 ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮುರಳಿಧರ್ ಮಾಣಿಕರಾವ್ ಕುಲಕರ್ಣಿ ಎಂಬುವರ ಎರಡು ಎಮ್ಮೆ ಮತ್ತು ಒಂದು ಎಮ್ಮೆ ಕರುವನ್ನ ಕದ್ದುಕೊಂಡು ಪರಾರಿಯಾಗಿದ್ದ.
ವಿಶೇಷ ಎಂದರೆ ಎಮ್ಮೆ ಕದ್ದ ವಾರದಲ್ಲಿಯೇ ಈತ ಭಾಲ್ಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪೊಲೀಸರು ಈತನನ್ನ ಬಂಧಿಸಿದ್ದರು (Police Case) . ಆಗ ಜಾಮೀನಿನ ಮೇಲೆ ಹೊರ ಬಂದಿದ್ದ. ಆ ನಂತರ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 57 ವರ್ಷದಿಂದ ಪೊಲೀಸರು ಈತನನ್ನ ಹುಡುಕುತ್ತಲೇ ಇದ್ದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕದ್ದುಮುಚ್ಚಿ ಓಡಾಡುತ್ತಿದ್ದ.
ಸದ್ಯ ಸುಮಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ ಗೆ ಹಾಜರಾಗದೆ ಇರುವ LPR ಪ್ರಕರಣ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷದ ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್.ಎಸ್. ತಿಳಿಸಿದ್ದಾರೆ.