Bharat: ಇನ್ನು ಸರ್ಕಾರಿ ದಾಖಲೆಗಳಲೆಲ್ಲಾ ಅಧಿಕೃತವಾಗಿ ‘ಭಾರತ’ ಹೆಸರು ?! ಸರ್ಕಾರ ಕೊಡ್ತು ಬಿಗ್ ಅಪ್ಡೇಟ್
National news Bharat is no longer a new name in official central government documents
Bharat: ಆಂಗ್ಲರ “ಇಂಡಿಯಾ’ (India)ಎಂಬ ಹೆಸರನ್ನು “ಭಾರತ’(Bharat) ಆಗಿ ಬದಲಾವಣೆ ಮಾಡಲಾಗುತ್ತದೆ ಎಂಬ ವಾದ-ಪ್ರತಿವಾದಗಳ ನಡುವೆಯೇ ಸರ್ಕಾರ ಹೊಸ ವಿಚಾರವನ್ನು ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಅಧಿಕೃತ ದಾಖಲೆಗಳಲ್ಲಿ “ಭಾರತ’ ಎಂಬ ಹೆಸರೇ ಮುದ್ರಿತವಾಗಲಿದೆ.
ಮುಂದಿನ ಸಂಸತ್ ವಿಶೇಷ ಅಧಿವೇಶನದ ವೇಳೆ ದೇಶದ ಹೆಸರನ್ನು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ರಿಪಬ್ಲಿಕ್ ಆಫ್ ಇಂಡಿಯಾ ಎನ್ನುವ ಹೆಸರಿನ ಬದಲು ರಿಪಬ್ಲಿಕ್ ಆಫ್ ಭಾರತ ಎನ್ನುವ ಹೆಸರನ್ನು ಇಡಲು ಸರ್ಕಾರ ತೀರ್ಮಾನ ಮಾಡಿದೆ. ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಹೊಸ ನಿರ್ಣಯವನ್ನು ತರುವ ಸಾಧ್ಯತೆ ಹೆಚ್ಚಿದೆ.
ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸಲಾಗುತ್ತದೆ ಎಂಬ ಸುದ್ದಿಗಳ ನಡುವೆಯೇ, ಯೋಜನೆಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಹ್ವಾನಗಳು ಹಾಗೂ ಇತರ ಅಧಿಕೃತ ದಾಖಲೆಗಳಲ್ಲಿ ಶೀಘ್ರ ‘ಭಾರತ್’ ಎಂಬ ಹೆಸರು ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಅಧಿಕೃತ ದಾಖಲೆಗಳಲ್ಲಿ “ಭಾರತ’ ಎಂಬ ಹೆಸರನ್ನು ಬಳಕೆ ಮಾಡುವುದರಿಂದ ಕಾನೂನ್ಮಾಕವಾಗಿ ಯಾವುದೇ ಸಮಸ್ಯೆ ಎದುರಾಗದು. “ಇಂಡಿಯಾ’, “ಭಾರತ’ ಎಂಬ ಹೆಸರುಗಳು ಈಗಾಗಲೇ ಬಳಕೆಯಲ್ಲಿದೆ. ಪಾಸ್‌ಪೋರ್ಟ್‌ನಲ್ಲಿ “ರಿಪಬ್ಲಿಕ್ ಆಫ್ ಇಂಡಿಯಾ’ ಮತ್ತು “ಭಾರತ್ ಸರಕಾರ್’ ಎಂದು ಹಿಂದಿಯಲ್ಲಿ ಮುದ್ರಿತವಾಗಲಿದೆ. ಆದರೆ ಇದಕ್ಕೆ ಯಾವುದೇ ರೀತಿಯ ದಿನಾಂಕ ನಿಗದಿ ಮಾಡಿಲ್ಲ. ಹೀಗಿರುವ ಸಂದರ್ಭ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಅಂಶಗಳನ್ನು ಉಲ್ಲಂಘಿಸುವ ವಿಚಾರ ಉದ್ಭವ ಎದುರಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಹೆಸರು ಬದಲಾವಣೆಯ ಗೊಂದಲ ಹೆಚ್ಚಾಗುತ್ತಿರುವ ನಡುವೆ, ವಿಶ್ವಸಂಸ್ಥೆ ಅಚ್ಚರಿಯ ಪ್ರತಿಕ್ರಿಯೆ ನೀಡಿದೆ. ಭಾರತ ಸರಕಾರದ ವತಿಯಿಂದ ಹೆಸರು ಬದಲಾವಣೆಗೆ ಮನವಿ ಸಲ್ಲಿಕೆ ಆಗಿದ್ದಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೋ ಗುಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಅದನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: BJP:ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ- ಮಾಸ್ ಲೀಡರ್ ಯಡಿಯೂರಪ್ಪ ಕೊಟ್ರು ಹೊಸ ಬಿಗ್ ಅಪ್ಡೇಟ್!