Bigg boss-10: ಬಿಗ್ ಬಾಸ್ ಸೀಸನ್-10ರ ಕಂಟೆಸ್ಟೆಂಟ್ಸ್ ಲಿಸ್ಟ್ ವೈರಲ್ ?! ಭಾರೀ ಕುತೂಹಲ ಕೆರಳಿಸಿದ ಈ ಸಲದ ಸ್ಪರ್ಧಿಗಳು
Entertainment Bigg Boss Kannada season 10 contestant list viral
Bigg boss kannada 10: ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 10) ದಿನಗಣನೆ ಶುರುವಾಗಿದೆ. ಈಗಾಗಲೇ ತೆಲುಗಿನ ಬಿಗ್ ಬಾಸ್‌ಗೆ ಚಾಲನೆ ಸಿಕ್ಕಿರುವ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯೊಂದು ವೈರಲ್ ಆಗಿದೆ.
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 10 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಕನ್ನಡಿಗರೂ ಕಾರ್ಯಕ್ರಮದ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಬಾರಿಯೂ ಮೊದಲು OTT ಸೀಸನ್ ನಂತರ ಟಿವಿ ಶೋನ 10 ನೇ ಸೀಸನ್ ಪ್ರಾರಂಭವಾಗಲಿದೆ ಎನ್ನಲಾಗಿದೆ. ಅದರಂತೆ ಒಟಿಟಿ ಸೀಸನ್-2 ಸೆಪ್ಟೆಂಬರ್ 30ರಂದು ಆರಂಭವಾಗಲಿದೆ ಎನ್ನಲಾಗಿದೆ. ಹಾಗಿದ್ರೆ ಯಾರೆಲ್ಲಾ ಈ ಸಲದ ಕಂಟೆಸ್ಟೆಂಟ್ಸ್ ಗೊತ್ತಾ. ಇಲ್ಲಿದೆ ನೋಡಿ ಪಟ್ಟಿ.
ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ, ಎಕ್ಸ್‌ಕ್ಯೂಸ್ ಮಿ ಸಿನಿಮಾ ಖ್ಯಾತಿಯ ಸುನೀಲ್ ರಾವ್, ನಾಗಿಣಿ 2 ಧಾರಾವಾಹಿಯ ಜೋಡಿ ನಿನಾದ್ ಹರಿತ್ಸ ಮತ್ತು ನಮ್ರತಾ ಗೌಡ, ದಿವಂಗತ ಬುಲೆಟ್ ಹಾಸ್ಯ ನಟ ಪ್ರಕಾಶ್ ಅವರ ಪುತ್ರ ರಕ್ಷಕ್, ರ‍್ಯಾಪರ್ ಸಿಂಗರ್ ಇಶಾನಿ, ಹುಚ್ಚು ಸಿನಿಮಾ ನಟಿ ರೇಖಾ, ನಟಿ ಆಶಾ ಭಟ್ ಮತ್ತು ರೀಲ್‌ಗಳಲ್ಲಿ ಖ್ಯಾತಿ ಪಡೆದಿರುವ ಭೂಮಿಕಾ ಬಸವರಾಜ್ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮೇಘಾ ಶೆಟ್ಟಿ: ಟಿವಿ ಲೋಕದ ಸ್ಟಾರ್ ನಟಿ ಮೇಘಾ ಶೆಟ್ಟಿ (Megha Shetty) ಅವರು ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಈಗಾಗಲೇ ‘ದಿಲ್ ಪಸಂದ್’ ಮತ್ತು ‘ತ್ರಿಬಲ್ ರೈಡಿಂಗ್’ (Triple Riding) ಚಿತ್ರಗಳು ರಿಲೀಸ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೇಘಾ ಕೂಡ ದೊಡ್ಮನೆಗೆ ಬರುತ್ತಾರೆ ಎಂದು ಚರ್ಚೆಯಾಗುತ್ತಿದೆ.
ನಿನಾದ್ ಹರಿತ್ಸ ಮತ್ತು ನಮ್ರತಾ ಗೌಡ: ‘ನಾಗಿಣಿ 2’ (Nagini 2) ಸೀರಿಯಲ್‌ನ ಜೋಡಿ ನಿನಾದ್ ಹರಿತ್ಸ (Ninaad Harithsa) ಮತ್ತು ನಮ್ರತಾ ಗೌಡ (Namratha Gowda) ಇಬ್ಬರ ಹೆಸರು ಕೂಡ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ನಮ್ರತಾ, ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ ಕಲಾವಿದೆ. ಕಿರುತೆರೆಯಲ್ಲಿ ಸಿಕ್ಕ ಬ್ರೇಕ್, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ಸಿಗಲಿಲ್ಲ. ಇನ್ನೂ ನಟನೆ ಮತ್ತು ಗಾಯನದ ಮೂಲಕ ನಿನಾದ್ ಗಮನ ಸೆಳೆದಿದ್ದಾರೆ.
ಇಶಾನಿ: ಪ್ರತಿ ಸೀಸನ್‌ನಲ್ಲೂ ಸಿಂಗರ್‌ಗಳಿಗೆ ಬಿಗ್ ಬಾಸ್ ಟೀಂ ಗಾಳ ಹಾಕುತ್ತಾರೆ. ಅದರಂತೆ ಈ ಬಾರಿ ರ‍್ಯಾಪರ್-ಸಿಂಗರ್ ಇಶಾನಿ (Eshani) ಕೂಡ ಬರುತ್ತಾರೆ ಎಂದು ಹೇಳಲಾಗುತ್ತಿದೆ.
ಡ್ರೋನ್ ಪ್ರತಾಪ್: ಕಳೆದ ವರ್ಷ ಡ್ರೋನ್ ಪ್ರತಾಪ್ (Drone Prathap) ಅವರು ಬಿಗ್ ಬಾಸ್‌ಗೆ(Bigg Boss Kannada) ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬರಲಿಲ್ಲ. ಈ ಬಾರಿ ಕೂಡ ದೊಡ್ಮನೆಗೆ ಬರುವ ಅವಕಾಶ ಸಿಕ್ಕಿದೆ. ಒಪ್ಪಿ ಮನೆಗೆ ಬರುತ್ತಾರಾ ಕಾಯಬೇಕಿದೆ.
ಶಿಲ್ಪಾ ಗೌಡ, ಭೂಮಿಕಾ ಬಸವರಾಜ್, ಬಿಂದು ಗೌಡ: ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಧನುಶ್ರೀ, ಸೋನು ಗೌಡಗೆ ಕಳೆದ ಬಾರಿ ಅವಕಾಶ ನೀಡಿದ್ದರು. ಈ ಬಾರಿ ಶಿಲ್ಪಾ ಗೌಡ(Shilpa Gowda), ಭೂಮಿಕಾ ಬಸವರಾಜ್(Bhumika Basavaraj), ಬಿಂದು ಗೌಡ ಬರಲಿದ್ದಾರೆ ಎನ್ನಲಾಗುತ್ತಿದೆ. ಶೋ ಶುರುವಾಗುವ ಸಮಯದಲ್ಲಿ ಅಧಿಕೃತ ಮಾಹಿತಿ ಸಿಗಲಿದೆ.
ರಕ್ಷಕ್: ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ (Rakshak Bullet Prakash) ಅವರು ‘ಗುರು ಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈಗ ದೊಡ್ಮನೆಗೆ ಕಾಲಿಡುತ್ತಾರೆ ಎಂದು ರಕ್ಷಕ್ ಸುದ್ದಿಯಲ್ಲಿದ್ದಾರೆ.
ಸುನಿಲ್ ರಾವ್: ಸುನೀಲ್ ರಾವ್ (Sunil Rao) ಎಂದಾಕ್ಷಣ ಮೊದಲು ನೆನಪಾಗೋದು ರಮ್ಯಾ(Ramya), ಅಜಯ್ ರಾವ್ ಜೊತೆಗಿನ ಎಕ್ಸ್‌ಕ್ಯೂಸ್ ಮಿ (Excuse Me) ಸಿನಿಮಾ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರು ಚಿತ್ರರಂಗದಲ್ಲಿ ನಾಯಕನಾಗಿ ನಿಲ್ಲಲು ಸುನೀಲ್ ರಾವ್‌ಗೆ ಅದೃಷ್ಟ ಒಲಿಯಲಿಲ್ಲ. ಈಗ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸುತ್ತಾ, ಉದ್ಯಮಿಯಾಗಿ ಸುನೀಲ್ ಗುರುತಿಸಿಕೊಳ್ತಿದ್ದಾರೆ.
ಒಟ್ಟಿನಲ್ಲಿ ಇದೇನೆ ಇರಲಿ ಅದೇನೇ ಇರಲಿ, ಆಡಿಷನ್ ನಡೆದು ಶೋ ಆರಂಭವಾದ ನಂತರ ದೊಡ್ಮನೆಗೆ ಯಾರು ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.