Mohan bhagwat: ಮೀಸಲಾತಿ ಬಗ್ಗೆ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪೋಟಕ ಹೇಳಿಕೆ, ದಲಿತ ಮೀಸಲಾತಿ ಕುರಿತು RSS ನಿಲುವು ಬಹಿರಂಗ !

RSS chief Mohan Bhagwat says reservations should continue as long as there is discrimination in society

Mohan bhagwat: ನೇರ ಮಾತಿಗೆ ಹೆಸರಾದ, ಒಂದಷ್ಟು ಪ್ರಗತಿಪರ ಚಿಂತನೆಗಳನ್ನು ಆಗಾಗ ಹೊರಹಾಕುತ್ತಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್(Mohan bhagwat) ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಮೀಸಲಾತಿಯ ಬಗ್ಗೆ ಅವರು ನೀಡಿರುವ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

ಅವರು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭ ಭಾರತಕ್ಕೆ ಸ್ವಾತಂತ್ರ್ಯ ಬಂದ 1947 ರ ನಂತರ ಭಾರತದ ಬೇರ್ಪಟ್ಟವರ ಮನಸ್ಥಿತಿಯ ಬಗ್ಗೆ ಈಗ ಮಾತನಾಡಿದ್ದಾರೆ. ಅವತ್ತು ಸ್ವಾತಂತ್ರ ನಂತರ ಭಾರತದಿಂದ ಬೇರ್ಪಟ್ಟವರು, ತಾವು ಆಗ ತಪ್ಪು ಮಾಡಿದ್ದೇವೆ ಎಂದು ಈಗ ಭಾವಿಸುತ್ತಿದ್ದಾರೆ. ಹಾಗಾಗಿ ನಮ್ಮ ಇಂದಿನ ಸಮಾಜ ವೃದ್ಧರಾಗುವಷ್ಟರಲ್ಲಿ ನಮ್ಮ ಅಖಂಡ ಭಾರತದ ಕನಸು ನನಸಾಗಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಮೋಹನ್ ಭಾಗವತ್ ಮೀಸಲಾತಿ ಬಗ್ಗೆ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

” ನಾವು ನಮ್ಮದೇ ಸಹಜೀವಿಗಳನ್ನು ಹಿಂದೆ ಇರಿಸಿದ್ದೇವೆ. ನಾವು ಅವರ ಬಗ್ಗೆ ಕಾಳಜಿಯನ್ನೇ ವಹಿಸುತ್ತಿಲ್ಲ. ಸುಮಾರು 2,000 ವರ್ಷದವರೆಗೆ ಇನ್ನೂ ಈ ಪ್ರಕ್ರಿಯೆ ಮುಂದುವರೆದಿದೆ. ಹಾಗಾಗಿ ನಮ್ಮ ಸಮಾಜದಲ್ಲಿ ಈಗ ಇರುವ ಅಸಮಾನತೆಯನ್ನು ತೊಲಗಿಸುವವರೆಗೆ ಮತ್ತು ಈಗಿರುವ ಅಸಮಾನತೆಗೆ ಒಳಗಾದವರ ಪುನಶ್ಚೇತನಕ್ಕಾಗಿ ನಾವು ವಿಶೇಷ ಪರಿಹಾರ ನೀಡಬೇಕಾಗಿದೆ. ಈ ಪರಿಹಾರದ ಒಂದು ಭಾಗವೇ ಈ ಮೀಸಲಾತಿ. ಆದುದರಿಂದ ನಮ್ಮ ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು” ಎನ್ನುವ ಸ್ಫೋಟಕ ಹೇಳಿಕೆ ನೀಡಿದ್ದಾರೆ ಮೋಹನ್ ಭಾಗವತ್.ಅಷ್ಟೇ ಅಲ್ಲದೆ, ಸಂವಿಧಾನದಲ್ಲಿ ಮೀಸಲಾತಿಗೆ ಆರ್ ಎಸ್ ಎಸ್ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅವರು ಘೋಷಿಸಿದ್ದಾರೆ.

ತಮ್ಮ ಭಾಷಣದ ಸಂದರ್ಭ ಅಲ್ಲಿದ್ದ ವಿದ್ಯಾರ್ಥಿಯೊಬ್ಬ ಭಾಗವತ್ ಅವರಿಗೆ ಪ್ರಶ್ನೆ ಒಂದನ್ನು ಹಾಕಿದ್ದ. ಭಾರತದ ಅಖಂಡ ಭಾರತ ಕನಸು ಯಾವಾಗ ಸಹಕಾರಗೊಳ್ಳಬಹುದು ಎನ್ನುವ ಆತನ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್ ರವರು ನಿಖರವಾಗಿ ಏನನ್ನು ಹೇಳಲು ಸಾಧ್ಯವಿಲ್ಲ ಆದರೆ ನೀವು ವಯಸ್ಸಾಗುವ ಕಾಲದಲ್ಲಿ ಅದು ಸಾಕಾರಗೊಳ್ಳಲಿದೆ ಎಂದಿದ್ದಾರೆ. ಅಂದರೆ ಮುಂದಿನ 40 ರಿಂದ 50 ವರ್ಷದ ಒಳಗೆ ಅಖಂಡ ಭಾರತದ ಕಲ್ಪನೆ ಸಾಕಾರವಾಗುತ್ತೆ ಎನ್ನುವ ವಿಷಯವನ್ನು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Hit and Run Case: ‘ಕಾಮಿಡಿ ಸ್ಟಾರ್’ ಚಂದ್ರಪ್ರಭಾ ಕಾರು ಅಪಘಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ! ಅಪಘಾತ ನೋಡಿದ ಆಟೋ ಚಾಲಕ ಹೇಳಿದ್ದೇನು ?

Leave A Reply

Your email address will not be published.