Soujanya Case: ಸೌಜನ್ಯ ಹೋರಾಟಕ್ಕೆ ಮುಸ್ಲಿಂ ನಾಯಕರ ಸಾಥ್- ಬೆಂಗಳೂರು ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯಗೆ ಮರು ತನಿಖೆಗೆ ಆಗ್ರಹ

Bengaluru conference with Muslim leaders for demands CM Siddaramaiah re-investigation of soujanya case

Soujanya Case: ಉಜಿರೆ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ (Soujanya Case) ಸಂಬಂಧ ರಾಜ್ಯಾದ್ಯಂತ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಸೌಜನ್ಯ ಹೋರಾಟದ ಕಿಚ್ಚು ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು,ಎಲ್ಲೆಡೆ ಮುಗ್ಧ ಹೆಣ್ಣು ಮಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆನ್ನುವ ನಿಟ್ಟಿನಲ್ಲಿ ಹಲವು ಸಂಘಟನೆಗಳು ಹೋರಾಟದತ್ತ ಧುಮ್ಮಿಕ್ಕುತ್ತಿವೆ.

ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಮತ್ತು ಗೌಡ ಸಂಘ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಜ್ಜೆಗೆ ಹೆಜ್ಜೆ ಹಾಕಿ ಅವರ ಎಡ ಬಲಗಳಲ್ಲಿ ನಿಂತು ಮುಂದೆ ಪಕ್ಕದ ತಾಲೂಕಿನ ಕೆಲವು ಉತ್ಸಾಹಿ ಒಕ್ಕಲಿಗ ಸಂಘಗಳು ತಮ್ಮ ಕೈಲಾದ ಹೋರಾಟಗಳನ್ನು ರೂಪಿಸಿವೆ. ಇತರ ಹೋರಾಟಗಳಿಗೆ ಜನಬೆಂಬಲ ಕ್ರೋಡಿಕರಿಸುವಲ್ಲಿ ತಮ್ಮ ಪ್ರಯತ್ನ ಮಾಡುತ್ತಿವೆ. ಇದರ ಜೊತೆಗೆ ಜಾತಿ, ಧರ್ಮದ ಗೋಡೆ ಒಡೆದು ಸಮಾನತೆಯ ಮಂತ್ರದ ಜೊತೆಗೆ ಇಸ್ಲಾಂ ಸಮುದಾಯದವರು ಕೂಡ ಈ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ಇದೀಗ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸೌಜನ್ಯ ಪರ ಹೋರಾಟದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಮುಸ್ಲಿಂ ಹೋರಾಟಗಾರರು ಕೂಡ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬೆಂಬಲ ನೀಡುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಹರಿದು ಬಂದ ಜನಸ್ತೋಮದ ನಡುವೆ ಉಜಿರೆಯಲ್ಲಿ ಮುಸ್ಲಿಂ ವಿದ್ವಾಂಸರೋರ್ವರು ಸೌಜನ್ಯ ಹತ್ಯೆ ಕುರಿತಂತೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಎಸ್.ಎಸ್. ಎಫ್ ನ ಬೃಹತ್ ಸಮ್ಮೇಳನ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಎಲ್ಲ ಮಂತ್ರಿಗಳ ಸಮ್ಮುಖದಲ್ಲಿ ಪಕ್ಷಗಳ ಜತೆ ಸೌಜನ್ಯಳಿಗೆ ನ್ಯಾಯ ಒದಗಿಸಲು ಕೋರಿ ಮನವಿ ಸಲ್ಲಿಸಲಾಗುತ್ತದೆ. ಮುಗ್ಧ ಹೆಣ್ಣು ಮಗಳ ಕೊಲೆಗೆ ಕಾರಣರಾದ ಆರೋಪಿಗಳು ಅದೆಷ್ಟೇ ಬಲಿಷ್ಠ ವ್ಯಕ್ತಿಯಾಗಿರಲಿ ಅವರ ತಪ್ಪಿಗೆ ತಕ್ಕ ಕಠಿಣ ಶಿಕ್ಷೆ ಆಗಲೇಬೇಕು. ನಾವು ಯಾರ ಆಮಿಷಕ್ಕೂ ಒಳಗಾಗದೆ, ಯಾರ ಓಲೈಕೆಗೂ ಬಲಿಯಾಗದೆ ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಹೋರಾಡಲಿರುವ ಕುರಿತು ಮುಸ್ಲಿಂ ವಿದ್ವಾಂಸ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸೌಜನ್ಯಳಿಗೆ ನ್ಯಾಯ ಕೊಡಿಸದೆ ವಿರಮಿಸುವುದಿಲ್ಲ ಎಂದು ಹೋರಾಟದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಇತ್ತೀಚೆಗಷ್ಟೇ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಪರ ಬೃಹತ್ ಪ್ರತಿಭಟನಾ ಸಭೆಯಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನೊಳಗೊಂಡಂತೆ ಸಾಮಾಜಿಕ ಹೋರಾಟಗಾರ್ತಿ, ಸೌಜನ್ಯ ಹೋರಾಟದ ಅಧ್ಯಕ್ಷೆ ಪ್ರಸನ್ನ ರವಿ, ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಇನ್ನಿತರರು ಸೌಜನ್ಯಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯಲು ಉದ್ದೇಶಿಸಿರುವ ಬೃಹತ್ ಎಸ್ ಎಸ್ ಎಫ್ ಸಮ್ಮೇಳನದಲ್ಲಿ ಸೌಜನ್ಯಳಿಗೆ ನ್ಯಾಯ ಒದಗಿಸಲಿ ಒತ್ತಾಯ ಮಾಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿರುವ ಈ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದವರು ಕೂಡ ಸೌಜನ್ಯಾ ಪ್ರಕರಣದ ನ್ಯಾಯಕ್ಕೆ ದ್ವನಿ ಎತ್ತಿ ತಮ್ಮ ಬೆಂಬಲ ನೀಡಲಿದ್ದಾರೆ. ಮುಖ್ಯಮಂತ್ರಿಗಳನ್ನು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Gruha Lakshmi Yojana: ಇನ್ಮುಂದೆ ಇವರಿಗೂ ಸಿಗಲಿದೆ ರಾಜ್ಯದ ಎಲ್ಲಾ ‘ಗ್ಯಾರಂಟಿ’ ಭಾಗ್ಯ – ಸರ್ಕಾರದಿಂದ ಮಹತ್ವದ ನಿರ್ಧಾರ !! ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ

Leave A Reply

Your email address will not be published.