Gruha Lakshmi Yojana: ಇನ್ಮುಂದೆ ಇವರಿಗೂ ಸಿಗಲಿದೆ ರಾಜ್ಯದ ಎಲ್ಲಾ ‘ಗ್ಯಾರಂಟಿ’ ಭಾಗ್ಯ – ಸರ್ಕಾರದಿಂದ ಮಹತ್ವದ ನಿರ್ಧಾರ !! ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ

Uttar kannada news Congress guarantee uttar kannada district Tibetans also got gruha Lakshmi and gruha Jyoti scheme

Gruha Lakshmi Scheme: ಕಾಂಗ್ರೆಸ್ ನ (Congress)ಈ ಐದು ಗ್ಯಾರೆಂಟಿಗಳ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ.

ಗೃಹಲಕ್ಷ್ಮಿ ಯೋಜನೆಯಡಿ(Gruha Lakshmi Scheme) ಸರ್ಕಾರದಿಂದ ಮಾಸಿಕ 2 ಸಾವಿರ ರೂ. ಹಣವನ್ನು ಪಡೆಯಲು ನೋಂದಣಿ ಮಾಡಿಸಿಕೊಂಡವರ ಖಾತೆಗೆ ಹಣ ಜಮೆಯಾಗುತ್ತಿದೆ. ಇದಲ್ಲದೆ ನೋಂದಣಿ ಮಾಡಿಸುವವರಿಗೆ 12 ರೂ.ಕೂಡ ನೀಡಲಾಗುತ್ತದೆ. ಅಂದರೆ ನೋಂದಣಿಗೆ ಮಾಡುವ ಪ್ರಕ್ರಿಯೆಗೆ 10 ರೂ. ಮತ್ತು ನೋಂದಣಿ ನಂತರ ನೀಡುವ ಪ್ರಿಂಟ್ ಔಟ್ಗೆ 2 ರೂ. ಅನ್ನು ಕೂಡ ಸರ್ಕಾರ ನೀಡುತ್ತಿದೆ.

ಇದೀಗ, ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಸೌಲಭ್ಯ ಪಡೆಯಲು ನಿರಾಶ್ರಿತರಾಗಿ ನೆಲೆಸಿರುವ ಟಿಬೆಟಿಯನ್ನರು ಕೂಡ ಮುಗಿ ಬೀಳುತ್ತಿದ್ದಾರೆ. ಟಿಬೆಟ್‌ ಮಹಿಳೆಯರು ಗ್ರಾಮ ಒನ್‌ ಸೇವಾ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ,317 ಟಿಬೆಟಿಯನ್ನರಿಂದ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 186 ಕುಟುಂಬಗಳು ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. 67 ಅರ್ಜಿಗಳು ತಿರಸ್ಕೃತಗೊಂಡಿವೆ ಎನ್ನಲಾಗಿದೆ. ಬೌದ್ಧ ಬಿಕ್ಕುಗಳನ್ನೊಳಗೊಂಡ ಹಾಗೆ ವಸತಿ ನಿಲಯ ಮಂದಿರಗಳಲ್ಲಿ ವಾಸವಿರುವ ಕೆಲವರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಶಕ್ತಿ ಯೋಜನೆಯಡಿ ಟಿಬೆಟಿಯನ್‌ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದು, ಇದರ ಜೊತೆಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಇ-ಕೆವೈಸಿ(E – KYC)ಮಾಡಿಸಿಕೊಳ್ಳುತ್ತಿದ್ದಾರೆ. ನಂದಿಗಟ್ಟಾ, ಹುನಗುಂದ, ಇಂದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 200 ರಷ್ಟು ಟಿಬೆಟಿಯನ್ನರು ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಣಿ ಮಾಡಿಕೊಂಡಿರುವ ಸಾಧ್ಯತೆಯ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ ಬಂಗೇರ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದ ಹಿನ್ನೆಲೆ ಇನ್ನಿತರ ಕಾರಣಗಳಿಂದ ಕಳೆದ ತಿಂಗಳು ಅಷ್ಟಾಗಿ ನೋಂದಣಿಯಾಗಿರಲಿಲ್ಲವೆಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಡೊಲ್ಮಾ ಸಿರಿಂಗ್‌ ಡೊಗುಲಿಂಗ್‌ ಸೆಟ್ಲಮೆಂಟ್‌ ಚೇರಮನ್‌ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಟಿಬೆಟಿಯನ್‌ ಕ್ಯಾಂಪ್‌ಗಳ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಮಹತ್ವ ಕಾಂಕ್ಷಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಹಿನ್ನೆಲೆ ಟಿಬೇಟಿಯನ್ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿ ಯೋಜನೆ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ: Ration Card Holder: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ- ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಗೂ ಡೆಡ್ ಲೈನ್ ಫಿಕ್ಸ್- ಈ ದಿನದೊಳಗೆ ಮಾಡದಿದ್ದರೆ ನಿಮಗಿಲ್ಲ ‘ಗ್ಯಾರಂಟಿ’

Leave A Reply

Your email address will not be published.