Mangalore: ಪ್ಲಾಟ್ ಫಾರಂಗಳ ನಿರ್ಮಾಣ ಕಾಮಗಾರಿ, ರೈಲು ಸಂಚಾರದಲ್ಲಿ ಬದಲಾವಣೆ ಇಲ್ಲ-ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟಣೆ

Mangalore news Construction work of platforms no change in train timings Announcement of Southern Railway Palakkad Division

Mangalore : ಮಂಗಳೂರು(Mangalore) ಸೆಂಟ್ರಲ್ ರೈಲು ನಿಲ್ದಾಣದ ಹೆಚ್ಚುವರಿ 4 ಮತ್ತು 5ನೇ ಪ್ಲಾಟ್ ಫಾರಂಗಳ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಮಾಡಲಾಗಿದ್ದ ಬದಲಾವಣೆಯಲ್ಲಿ ಹಿಂಪಡೆಯಾಗಿದ್ದು, ಈ ಹಿಂದಿನಂತೆ ರೈಲುಗಳು ಸಂಚರಿಸಲಿವೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.

 

ನಂಬರ್ 07486 ಕಬಕ ಪುತ್ತೂರು ಮಂಗಳೂರು ಸೆಂಟ್ರಲ್ ರೈಲು ಸೆಪ್ಟೆಂಬರ್ 8ರಂದು ಹಾಗೂ ನಂಬರ್ 06485 ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ರೈಲು , ನಂಬರ್ 10107 ಮಡಗಾಂವ್‌ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್‌ ರೈಲು,ನಂಬರ್ 10108 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ಮೆಮು ರೈಲು,ನಂಬರ್ 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್ ಜಂಕ್ಷನ್ ಪರಶುರಾಮ ಎಕ್ಸ್‌ಪ್ರೆಸ್‌ ರೈಲು ,16610 ಮಂಗಳೂರು ಸೆಂಟ್ರಲ್- ಕೋಝಿಕೋಡ್ ಎಕ್ಸ್‌ಪ್ರೆಸ್ ರೈಲು, ನಂಬರ್ 22638 ಮಂಗಳೂರು – ಸೆಂಟ್ರಲ್ – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದು ಹಾಗೂ ಸಮಯ ಬದಲಾವಣೆ ಮಾಡಲಾಗಿತ್ತು.

ಇದೀಗ ಆ ಬದಲಾವಣೆಯನ್ನು ಹಿಂಪಡೆಯಾಗಿದ್ದು, ಈ ಹಿಂದಿನಂತೆ ರೈಲುಗಳು ಸಂಚರಿಸಲಿವೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ONGC ನಲ್ಲಿ ಭರ್ಜರಿ ಉದ್ಯೋಗಾವಕಾಶ!10th /12th / ITI / ಡಿಪ್ಲೊಮ ಪಾಸಾದವರಿಂದ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಗೆ ಸೆ.20 ಕೊನೆಯ ದಿನಾಂಕ!!

Leave A Reply

Your email address will not be published.