ದಂಪತಿಗಳೇ, ಈ ಅಶ್ವಗಂಧದ ಪ್ರಯೋಜನ ತಿಳಿದುಕೊಂಡರೆ ನಿಜಕ್ಕೂ ಬೆರಗಾಗ್ತೀರ!!!
Ashwagandha: ಅಶ್ವಗಂಧದ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುವ ಕಾರಣ ಇದೊಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೇ ಹೋಲುವ ಕಾರಣ ಆಯುರ್ವೇದ ಇದಕ್ಕೆ ಅಶ್ವದ ಗಂಧ ಅಥವಾ ಅಶ್ವಗಂಧ (Ashwagandha) ಎಂಬ ಹೆಸರನ್ನು ನೀಡಿದೆ.
ಅಶ್ವಗಂಧ ಗಿಡಮೂಲಿಕೆ ಬಳಸಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಬನ್ನಿ ಅಶ್ವಗಂಧ ಉಪಯೋಗದ ಪೂರ್ಣ ಮಾಹಿತಿ ತಿಳಿಯೋಣ.
ಮುಖ್ಯವಾಗಿ ಅಶ್ವಗಂಧ ಹಾರ್ಮೋನ್ ಅನ್ನು ಸಮತೋಲನದಲ್ಲಿಡುತ್ತದೆ. ದಂಪತಿಗಳಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಅವರು ಉತ್ತಮ ಲೈಂಗಿಕ ಜೀವನವನ್ನು ಹೊಂದಬಹುದು. ಅಶ್ವಗಂಧದ ಸೇವನೆಯಿಂದ ಪುರುಷರಲ್ಲಿ ಚೈತನ್ಯ, ಪೌರುಷ ಮತ್ತು ಹುರುಪು ಹೆಚ್ಚುತ್ತದೆ.
ಅಶ್ವಗಂಧ ನರಗಳನ್ನು ಸಡಿಲಿಸುವ ಮೂಲಕ ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಸರಾಗವಾಗಿ ಚಲಿಸುವಂತೆ ಮಾಡುವ ಮೂಲಕ ಸುಖಕರ ನಿದ್ದೆಯನ್ನು ಮಾಡಬಹುದು. ಒಂದು ವೇಳೆ ರಾತ್ರಿ ಮಲಗಿದ ಬಳಿಕ ಬೇಗನೇ ನಿದ್ದೆ ಬಾರದೇ ಇರುವ ತೊಂದರೆ ಇದ್ದರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಚಿಕ್ಕ ಚಮಚ ಅಶ್ವಗಂಧದ ಪುಡಿಯನ್ನು ಬೆರೆಸಿ ಕುಡಿದು ಮಲಗುವ ಮೂಲಕ ಶೀಘ್ರವೇ ನಿದ್ದೆ ಆವರಿಸುತ್ತದೆ.
ಇನ್ನು ಖಿನ್ನತೆ ಇರುವ ವ್ಯಕ್ತಿಗಳು ಅಶ್ವಗಂಧವನ್ನು ನಿಯಮಿತವಾಗಿ ಸೇವಿಸುವ ಮೂಲಕ ಶೀಘ್ರವೇ ಈ ಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಮನಸ್ಸನ್ನು ನಿರಾಳಗೊಳಿಸುವ ಮೂಲಕ ದೇಹದ ಆರೋಗ್ಯವನ್ನೂ ಸುಸ್ಥಿತಿಯಲ್ಲಿಡಲು ಅಶ್ವಗಂಧ ನೆರವಾಗುತ್ತದೆ. ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಶ್ವಗಂಧವು ಹಾರ್ಮೋನ್ ವ್ಯವಸ್ಥೆ, ಹೃದಯ, ಶ್ವಾಸಕೋಶ ಮತ್ತು ದೇಹದ ಕೇಂದ್ರ ನರಮಂಡಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಅಶ್ವಗಂಧವು ಅದ್ಭುತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದ್ದು ನೂರಾರು ವರ್ಷಗಳಿಂದ ಅಶ್ವಗಂಧವನ್ನು ಇದೇ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ.
ಅಶ್ವಗಂಧದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಅತಿಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ ಹಾಗೂ ಇವು ಗಾಯಗಳಾದರೆ ಶೀಘ್ರವೇ ನಿವಾರಿಸಲು ಮತ್ತು ಸೋಂಕು ಉಂಟಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ.
ಅದಲ್ಲದೆ ಗಾಯಗಳಾದರೆ, ಹುಣ್ಣು, ಬೊಬ್ಬೆ,ಚರ್ಮದ ಉರಿತ ಮೊದಲಾದವು ಎದುರಾದರೆ ಅಶ್ವಗಂಧದ ಎಲೆಗಳನ್ನು ಅರೆದು ಹಚ್ಚಬಹುದಾಗಿದೆ.
ಅಶ್ವಗಂಧದ ನಿಯಮಿತ ಸೇವನೆಯಿಂದ ವಯಸ್ಸಾದಂತೆ ಮರೆಗುಳಿತನ ಹಾಗೂ ಇತರ ತೊಂದರೆಗಳು ಆದಷ್ಟೂ ತಡವಾಗಿಸಬಹುದು ಹಾಗೂ ನಿಧಾನಗೊಳಿಸಬಹುದು. ಅಲ್ಲದೇ ಉತ್ತಮ ಮಾನಸಿಕ ಆರೋಗ್ಯವನ್ನು ವೃದ್ದಾಪ್ಯದಲ್ಲಿಯೂ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.
ಅಶ್ವಗಂಧ ಅಜೀರ್ಣದ ಹಲವು ತೊಂದರೆಗಳನ್ನು ನಿವಾರಿಸುತ್ತದೆ. ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಸುಲಭವಾಗಿಸುವ ಮೂಲಕ ವಿವಿಧ ಅಜೀರ್ಣ ಸಂಬಂಧಿ ರೋಗಗಳಿಂದ ಕಾಪಾಡುತ್ತದೆ.
ಇನ್ನು ಥೈರಾಯ್ಡ್ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹೈಪೋಥೈರಾಯ್ಡಿಸಮ್ ಅನ್ನು ನಿರ್ವಹಿಸುತ್ತದೆ. ಅಲ್ಲದೇ ಇನ್ಸುಲಿನ್ ಉತ್ಪಾದನೆ ಮತ್ತು ಸಕ್ಕರೆಯ ವಿಭಜನೆಯನ್ನು ಉತ್ತೇಜಿಸುವ ಮೂಲಕ ಟೈಪ್ 2 ಡಯಾಬಿಟಿಸ್ ಜನರಿಗೆ ಸಹಾಯ ಮಾಡುತ್ತದೆ.
ಅಶ್ವಗಂಧವು ಸ್ತನ, ಶ್ವಾಸಕೋಶ, ಮೆದುಳು, ಕರುಳಿನ ಮತ್ತು ಅಂಡಾಶಯದ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಹೊಸ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ
ಆರೋಗ್ಯಕರ ತೂಕ ನಷ್ಟಕ್ಕೆ ಅಗತ್ಯವಾದ ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಮಧ್ಯರಾತ್ರಿಯ ಕಡುಬಯಕೆಗಳು ಮತ್ತು ತೂಕ ಹೆಚ್ಚಾಗುವುದನ್ನು ತಡೆಯುವ ಉತ್ತಮ ಗುಣಮಟ್ಟದ ನಿದ್ರೆಯನ್ನು ಒದಗಿಸುತ್ತದೆ.
ಅಶ್ವಗಂಧದ ನಿಯಮಿತ ಸೇವನೆಯು ಮಾನಸಿಕ ಆರೋಗ್ಯ, ಮೆದುಳಿನ ಸಾಮರ್ಥ್ಯ, ಜ್ಞಾಪಕ ಶಕ್ತಿ ಮತ್ತು ಆಲೋಚನಾ ಶಕ್ತಿಯನ್ನು ಸುಧಾರಿಸುತ್ತದೆ.
ಅಶ್ವಗಂಧವು ಸ್ವಾಭಾವಿಕವಾಗಿ ಹೊಟ್ಟೆಯ ಒಳಪದರಕ್ಕೆ ಹಾನಿಯಾಗುವುದರಿಂದ ಉಂಟಾಗುವ ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತದೆ. ಇದು ಹೊಟ್ಟೆಯ ಹುಣ್ಣು ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಅಶ್ವಗಂಧವು ಹೊಟ್ಟೆಯಲ್ಲಿ ಆಮ್ಲದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಆಮ್ಲೀಯತೆಗೆ ಸಹಾಯ ಮಾಡುತ್ತದೆ.
ಕಬ್ಬಿಣದ ಕೊರತೆ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಂತಹ ಮಹಿಳೆಯರಿಗೆ ರಕ್ತಹೀನತೆಯ ಚಿಕಿತ್ಸೆಯಿಂದ ಅಶ್ವಗಂಧಾರಿಷ್ಟ ಪ್ರಯೋಜನವನ್ನು ನೀಡುತ್ತದೆ.
ಅಶ್ವಗಂಧವನ್ನು ಹಾಲಿನೊಂದಿಗೆ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ, ಏಕೆಂದರೆ ಇವೆರಡನ್ನೂ ಪುನರುಜ್ಜೀವನಕಾರಕವೆಂದು ಪರಿಗಣಿಸಲಾಗುತ್ತದೆ. ಅಶ್ವಗಂಧ ಸೇವನೆಗೆ ಸುರಕ್ಷಿತವಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡರೆ, ಅದು ಪ್ರಯೋಜನಕ್ಕಿಂತ ಹೆಚ್ಚು ಹಾನಿ ಉಂಟುಮಾಡುತ್ತದೆ. ಅಶ್ವಗಂಧದ ಅಡ್ಡಪರಿಣಾಮಗಳು ಸೇರಿದಂತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಇದು ಬಳಸಲು ಸುರಕ್ಷಿತವಾಗಿದ್ದರೂ, ದೊಡ್ಡ ಪ್ರಮಾಣದಲ್ಲಿ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಅತಿಯಾದರೆ ಅಮೃತವು ವಿಷ ಎನ್ನುವುದು ನೆನಪಿನಲ್ಲಿರಲಿ.