Home latest Crime news: ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ 7ವರ್ಷದ ಬಳಿಕ ಪೊಲೀಸರ ಬಲೆಗೆ! ಆರೋಪಿ...

Crime news: ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ 7ವರ್ಷದ ಬಳಿಕ ಪೊಲೀಸರ ಬಲೆಗೆ! ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Crime News: ದಿನಂಪ್ರತಿ ಅದೆಷ್ಟೋ ಅಪರಾಧ(Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಪರಾಧಿಗಳು ಅಪರಾಧ ಮುಚ್ಚಿ ಹಾಕಲು ನಾನಾ ಹರಸಾಹಸ ಪಟ್ಟು ಅದರಲ್ಲಿ ಕೆಲವರು ಸಫಲರಾಗುವುದುಂಟು. ಆದರೆ, ಸತ್ಯ ಎನ್ನುವುದು ಒಂದಲ್ಲ ಒಂದು ದಿನ ಜಗತ್ತಿನ ಮುಂದೆ ಅನಾವರಣ ಆಗುವುದು ಖಚಿತ ಎನ್ನುವುದು ಸುಳ್ಳಲ್ಲ ಎಂಬುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ನಡೆದಿದೆ.

 

ಕೊಲೆ(Murder)ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬರೋಬ್ಬರಿ 7 ವರ್ಷದ ಬಳಿಕ ಪೊಲೀಸರು(Police)ಬಂಧಿಸಿರುವ ಘಟನೆ ಉತ್ತರ ಪ್ರದೇಶದ(Uttar Pradesh )ಚಿತ್ರಕೂಟದಲ್ಲಿ ನಡೆದಿದೆ. ಅಷ್ಟಕ್ಕೂ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ ಅನ್ನೋದೆ ಇಂಟ್ರೆಸ್ಟಿಂಗ್ ಸಂಗತಿ!

 

2016ರ ಮಾರ್ಚ್ ನಲ್ಲಿ ಶಿವಬಾಬು ನಿಶಾದ್(27) ಎಂಬಾತ ತನ್ನ ಸಹಚರರೊಂದಿಗೆ ಸುಭಾಶ್ಚಂದ್ರ(21) ಎಂಬ ಯುವಕನ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದು ಮಾತ್ರವಲ್ಲದೇ, ಕತ್ತು ಹಿಸುಕಿ ಕೊಲೆ ಮಾಡಿ ಆತನ ಶವವನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆದಿದ್ದನಂತೆ. ವಾಸ್ತವವಾಗಿ, ಈ ಕೊಲೆ 2016 ರಲ್ಲಿ ನಡೆದಿದ್ದು, ಈ ಕೊಲೆಯಲ್ಲಿ ನಿಶಾದ್ ಎಂಬ ಆರೋಪಿಯ ಜೊತೆಗೆ ಆತನ ಗೆಳೆಯರು ರವಿ ಡಂಗೂರ್, ಅಭಿಜೀತ್ ಮಿಶ್ರಾ ಎಂಬ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರು.ಈ ವೇಳೆ ಅಪ್ರಾಪ್ತನಾಗಿದ್ದ ಬಾಲಕರು ಜಾಮೀನಿನ ಮೇಲೆ ಹೊರಗೆ ಬಂದಿದ್ದರು.

 

ಆದರೆ ಶಿವಬಾಬು ಮಾತ್ರ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಈ ಕೃತ್ಯ ಎಸಗಿದಾಗ ಆರೋಪಿ ನಿಶಾದ್ಗೆ ಕೇವಲ 20 ವರ್ಷವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಾಕಿ ಉಳಿದಿರುವ ಪ್ರಕರಣದ ತನಿಖೆ ನಡೆಸಿದ ಸಂದರ್ಭ ಆರೋಪಿ ಯುಪಿಯಲ್ಲಿದ್ದಾನೆ ಎಂದು ವಸಾಯಿ ಕ್ರೈಂ ಬ್ರಾಂಚ್‌ಗೆ ಮಾಹಿತಿ ಲಭ್ಯವಾಗಿದೆ. ಇದಾದ ನಂತರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದು, ಆರೋಪಿಯ ಏಳು ವರ್ಷದ ಹಿಂದಿನ ಫೋಟೋ(Photo)ಸಿಕ್ಕಿದ್ದು, ಇದರಲ್ಲಿ ಆತನ ಬಲಗೈ ಮೇಲೆ ತನ್ನ ಹೆಸರಿನ ಹಚ್ಚೆ(Tatoo)ಹಾಗೂ ಕೈಯಲ್ಲಿ ನಕ್ಷತ್ರಗಳನ್ನು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

 

ಇದಾದ ಬಳಿಕ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದ ಸಂದರ್ಭ ಆರೋಪಿಯ ಕೈಯಲ್ಲಿದ್ದ ಅತನ ಹೆಸರಿನ ಹಚ್ಚೆ ತೆಗೆದಿರುವುದು ಬೆಳಕಿಗೆ ಬಂದಿದೆ. ಆದರೆ ಆತನ ಕೈನಲ್ಲಿದ್ದ ಮೂರು ನಕ್ಷತ್ರಗಳು ಹಾಗೆ ಉಳಿದಿತ್ತು. ಇದೇ ನಕ್ಷತ್ರಗಳ ಟ್ಯಾಟೂ ಮೂಲಕ ಪೊಲೀಸರಿಗೆ ಈತನೇ ನಿಜವಾದ ಆರೋಪಿ ಎಂಬುದು ಬಯಲಾಗಿದೆ. ಆರೋಪಿಯನ್ನು ಹಚ್ಚೆ ಮೂಲಕ ಪತ್ತೆ ಹಚ್ಚಿದ ಪೊಲೀಸರು ಆತನ ಬಾಯಿಂದ ಸತ್ಯ ಬಾಯಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.