Viral News:ಲಿಪ್ ಟು ಲಿಪ್ ಕಿಸ್ ಕೊಡ್ತೀರಾ? ಕಿವುಡುತನ ಬರುತ್ತೆ, ಇಲ್ಲಿದೆ ಘಟನೆ ವಿವರ!!!

Share the Article

Lip Kiss: ದಿನಂಪ್ರತಿ ಅದೆಷ್ಟೋ ವಿಚಿತ್ರ ಮತ್ತು ನಿಗೂಢ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಗಮನಕ್ಕೆ ಬಾರದೆ ಹೋಗಬಹುದು. ಆದ್ರೆ,ಕೆಲ ವಿಚಾರಗಳಲ್ಲಿ ನಾವು ಸಣ್ಣ ನಿರ್ಲಕ್ಷ್ಯ ತೋರಿದರು ಕೂಡ ದೊಡ್ಡ ಅಚಾತುರ್ಯ ಸಂಭವಿಸಿದರೂ ಅಚ್ಚರಿಯಿಲ್ಲ. ಪ್ರೇಮಿಗಳೇ ಗಮನಿಸಿ, ಈ ವಿಚಾರ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!!ಲಿಪ್‌ಕಿಸ್‌(Lip Kiss)ಮಾಡೋ ಮುನ್ನ ಇರಲಿ ಎಚ್ಚರ.. ಯಾಕೆ ಅಂತೀರಾ? ಇಲ್ಲೊಬ್ಬ ಯುವಕ ಲಿಪ್ ಕಿಸ್ ಕೊಟ್ಟು ಕಿವುಡನಾಗಿದ್ದಾನೆ (Deaf)ಎಂದಾಗ ನಿಮಗೂ ಅಚ್ಚರಿಯಾಗಿರಬಹುದು.

 

ಚೀನಾದ (China) ಯುವಕನೊಬ್ಬ ತನ್ನ ಗೆಳತಿಗೆ 10 ನಿಮಿಷಗಳ ಕಾಲ ನಿರಂತರವಾಗಿ ಚುಂಬಿಸಿದ ಪರಿಣಾಮ ಕಿವಿ ಕಳೆದುಕೊಂಡ ಘಟನೆ ನಡೆದಿದೆಯಂತೆ.ಯುವಕ ತನ್ನ ಗೆಳತಿಗೆ ಸಿಹಿಮುತ್ತು ಕೊಟ್ಟ ನಂತರ ಕಿವಿಯಲ್ಲಿ ನೋವು ಆರಂಭವಾಗಿದೆ. ಆಗಸ್ಟ್ 22 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

 

ಅಷ್ಟಕ್ಕೂ ಹೀಗೆ ಆಗಲು ಕಾರಣವೇನು?

ಜೋಡಿಯೊಂದು ಚುಂಬಿಸುತ್ತಿದ್ದ ಸಂದರ್ಭ ವ್ಯಕ್ತಿಗೆ ಇದ್ದಕ್ಕಿದ್ದಂತೆ ಕಿವಿಯಲ್ಲಿ ಭಯಾನಕ ನೋವು ಕಾಣಿಸಿಕೊಂಡಿದಂತೆ. ಹೀಗಾಗಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು(Doctor)ಕಿವಿಯಲ್ಲಿ ರಂಧ್ರವಾಗಿರುವುದಾಗಿ(Hole)ತಿಳಿಸಿದ್ದು, ಆತ ಸಂಪೂರ್ಣವಾಗಿ ಗುಣಮುಖನಾಗಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದಿದ್ದಾರಂತೆ.ಭಾವೋದ್ರಿಕ್ತ ಚುಂಬನವು ಕಿವಿಯೊಳಗೆ ಗಾಳಿಯ ಒತ್ತಡವನ್ನು ಉಂಟುಮಾಡುವ ಪರಿಣಾಮ ತಮಟೆಗಳಿಗೆ ಹಾನಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.ಉತ್ಸಾಹಭರಿತ ಚುಂಬನ ಕಿವಿಯಲ್ಲಿನ ರಂಧ್ರಕ್ಕೆ ಕಾರಣವಾಗಿರುವ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave A Reply