ಲೋಕ ಚುನಾವಣೆಯಲ್ಲಿ ಮೋದಿ ಎದುರಿಸಲು ಸಿಕ್ತು ಮತ್ತೊಂದು ಅಸ್ತ್ರ! ಏನಾ ಮಹಾಸ್ತ್ರ ಗೊತ್ತಾ?

National political news Another weapon to face Narendra Modi in the lok sabha election

Narendra Modi: ಮುಂಬೈನಲ್ಲಿ ಆಗಸ್ಟ್ ತಿಂಗಳಾಂತ್ಯದಲ್ಲಿ ನಡೆಯಲಿರುವ ಲೋಕ ಸಭಾ ಚುನಾವಣೆಗಾಗಿ ರಚಿತವಾದ INDIA ಮೈತ್ರಿಕೂಟದ ಮೂರನೇ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಪಾಲ್ಗೊಳ್ಳಲಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಒಂದು ಸೋಮವಾರ ಘೋಷಣೆ ಮಾಡಿದ್ದಾರೆ. ಇದರಿಂದ ಮೈತ್ರಿ ಕೂಟಗಳು ರಚಿಸಿಕೊಂಡು ಮೋದಿಯನ್ನು (Narendra Modi )ಎದುರಿಸಲು ಯೋಜನೆ ಹಾಕಿಕೊಂಡು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ದೊಡ್ಡ ಭರವಸೆ ಮೂಡಿದಂತಾಗಿದೆ.
ನಾವು ಮುಂಬೈ ಸಭೆಗೆ ಹೋಗುತ್ತೇವೆ ಮತ್ತು ಸಭೆಯಲ್ಲಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಬಗ್ಗೆ ನಿಮಗೆ ತಿಳಿಸುತ್ತೇವೆ ಎಂಬುದಾಗಿ ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಕಳೆದ ಬುಧವಾರ ದೆಹಲಿಯಲ್ಲಿ ಚುನಾವಣೆ ಸಿದ್ಧತೆ ಬಗ್ಗೆ ಕಾಂಗ್ರೆಸ್ ನಾಯಕರ ಸಭೆ ನಡೆದಿತ್ತು. ತದನಂತರ ಮುಂದಿನ ಲೋಕ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇವೆ. ಆಮ್ ಆದ್ಮಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಭೆಯ ಬಳಿಕ ಕಾಂಗ್ರೆಸ್ ವಕ್ತಾರ ಅಲ್ಕಾ ಲಂಬಾ ಘೋಷಿಸಿದ್ದರು. ಎಎಪಿ ಒಂದು ವೇಳೆ ಕಾಂಗ್ರೆಸ್ ಈ ಹಾದಿ ತುಳಿದರೆ, INDIA ಮೈತ್ರಿ ಕೂಟದ ಮುಂದಿನ ಸಭೆಯಿಂದ ಹೊರಗುಳಿಯುವುದಾಗಿ ಹೇಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಕಾಂಗ್ರೆಸ್ ದೆಹಲಿ ಉಸ್ತುವಾರಿ ದೀಪಕ್ ಬಬಾರಿಯಾ ಅವರು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಪರಿಸ್ಥಿತಿ ತಿಳಿಯಾಗಿತ್ತು. ಈ ಬಿಕ್ಕಟ್ಟು ಶಮನದ ನಂತರ ಕೇಜ್ರಿವಾಲ್ ಅವರು ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿಕೆ ನೀಡಿದ್ದಾರೆ.

NDA ಗೆ ವಿರುದ್ಧವಾಗಿ ಇಂಡಿಯಾ ಮೈತ್ರಿಕೂಟವು ತನ್ನ ಮೂರನೇ ಸಭೆಯನ್ನು ಮುಂಬೈನಲ್ಲಿ ನಡೆಸಲಿದ್ದು, ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ ವಿರುದ್ಧ ಕಾಂಗ್ರೆಸ್ ಬೆಂಬಲ ನೀಡದ ಕಾರಣ ಎಎಪಿಯು ಈ ಮೊದಲಿನ ಸಭೆಗೆ ಹಾಜರಾಗಿರಲಿಲ್ಲ. ಕಾಂಗ್ರೆಸ್ ಬೆಂಬಲ ನೀಡುವುದಾಗಿ ಘೋಷಿಸಿದ ಬಳಿಕ ಎಎಪಿ ಬೆಂಗಳೂರಿನಲ್ಲಿ ಜುಲೈ 17-18 ರಂದು ಎರಡನೇ ಸಭೆಯಲ್ಲಿ ಪಾಲ್ಗೊಂಡಿತ್ತು. ಇದೀಗ ಮುಂಬೈನಲ್ಲಿ ನಡೆಯಲಿರುವ ಮೂರನೇ ಸಭೆಯಲ್ಲಿ ಭಾಗವಹಿಸಲು ಸಿದ್ಧವಾಗಿದೆ.

ಇದನ್ನೂ ಓದಿ: ಮತ್ತೊಂದು ಗಡಿದಾಟಿ ಪ್ರೇಮಪ್ರಕರಣ! ಗಂಡ, ಮಕ್ಕಳನ್ನು ಬಿಟ್ಟು ಲವ್ವರನ್ನು ನಂಬಿ ಗಡಿ ದಾಟಿ ಹೋದ ಮಹಿಳೆಗೆ ಕಾದಿತ್ತು ಶಾಕಿಂಗ್‌ ನ್ಯೂಸ್‌! ಹುಡುಗನ ಬಣ್ಣ ಬಟ್ಟಾ ಬಯಲು!

Comments are closed.