IAAD recruitment 2023: ಐಎಎಡಿ ನೇಮಕಾತಿ 2023: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಉದ್ಯೋಗಾವಕಾಶ! ಒಟ್ಟು 1773 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ
Central Government jobs news India audit and accounts department recruitment apply for 1773 post
IAAD recruitment 2023: ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳ(IAAD recruitment 2023) ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.
ಸದ್ಯ ಈ ಹುದ್ದೆಗಳು ಜೆನೆರಲ್ ಸೆಂಟ್ರಲ್ ಸರ್ವೀಸೆಸ್ ಗ್ರೂಪ್ ಸಿ ನಾನ್ ಗೆಜೆಟೆಡ್, ನಾನ್ ಮಿನಿಸ್ಟೇರಿಯಲ್ ಹುದ್ದೆಗಳಾಗಿವೆ. ಲೆವೆಲ್ 4 ಪೇ ಮೆಟ್ರಿಕ್ಸ್ ವೇತನ ನೀಡಲಾಗುತ್ತದೆ.
ಆದರೆ ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಏನಾದರೂ ಆಕ್ಷೇಪಣೆ ಇದ್ದಲ್ಲಿ ಕೆಳಗಿನ ಮಾಹಿತಿಗಳನ್ನು ತಿಳಿದು, ನಂತರ ಸೆಪ್ಟೆಂಬರ್ 17, 2023 ರವರೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಪ್ರಾಧಿಕಾರ : ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ (India Audit And Accounts Department)
ಹುದ್ದೆ ಹೆಸರು : ಆಡಳಿತ ಸಹಾಯಕ
ಹುದ್ದೆಗಳ ಸಂಖ್ಯೆ : 1773
ವಿದ್ಯಾರ್ಹತೆ / ಇತರೆ ಅರ್ಹತೆಗಳು:
ಪದವಿ ಪಾಸ್ ಆಗಿರಬೇಕು ಮತ್ತು ಕನಿಷ್ಠ ಕಂಪ್ಯೂಟರ್ ಜ್ಞಾನ ಇರಬೇಕು.
ವಯಸ್ಸಿನ ಅರ್ಹತೆಗಳು:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.
ಪ್ರೊಬೇಷನ್ ಅವಧಿ : 2 ವರ್ಷ.
ಪ್ರಮುಖ ದಿನಾಂಕಗಳು:
ಆಕ್ಷೇಪಣೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-09-2023
ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ (ಸ್ಪೀಡ್ ಪೋಸ್ಟ್ ಮೂಲಕ)
ಶ್ರೀ ನಿಲೇಶ್ ಪಾಟಿಲ್, ಅಸಿಸ್ಟಂಟ್, ಸಿ&ಎಜಿ (ಎನ್)-I, O/o ಸಿ&ಎಜಿ ಆಫ್ ಇಂಡಿಯಾ, 9, ದೀನ್ ದಯಾಲ್ ಉಪಧ್ಯಾಯ ಮಾರ್ಗ್, ನವದೆಹಲಿ – 110124.
ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸ : https://cag.gov.in/en/page-cag-of-india
ನೇಮಕಾತಿ ವಿಧಾನ ನೇರ ನೇಮಕಾತಿ ಆಗಿದ್ದು, ಷರತ್ತುಗಳು ಅನ್ವಯವಾಗಲಿದೆ.
ಇದನ್ನೂ ಓದಿ: ಶಿಕ್ಷಕ ಉದ್ಯೋಗ ಬಯಸುವವರಿಗೆ ಭರ್ಜರಿ ಸಿಹಿ ಸುದ್ದಿ! ರಾಜ್ಯ ಸರಕಾರದಿಂದ 10 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ!
Comments are closed.