Home News ಬಂತು ಹೊಸ ಕಠಿಣ ಮಸೂದೆ: ಸುಳ್ಳು ಸುದ್ದಿ ಹರಡುವವರಿಗೆ ಏನು ಶಿಕ್ಷೆ ಗೊತ್ತಾ ?

ಬಂತು ಹೊಸ ಕಠಿಣ ಮಸೂದೆ: ಸುಳ್ಳು ಸುದ್ದಿ ಹರಡುವವರಿಗೆ ಏನು ಶಿಕ್ಷೆ ಗೊತ್ತಾ ?

Courtesy: Jakarta Post

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಸರ್ಕಾರ ಒಂದೊಂದಾಗಿ ಕಠಿಣ ಮತ್ತು ಪರಿಷ್ಕೃತ ಕಾನೂನುಗಳನ್ನು ಹೊರತರುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮಸೂದೆ 2023 ಅನ್ನು ಮಂಡಿಸಿದ್ದಾರೆ. ಇದರಂತೆ ಸುಳ್ಳು ಸುದ್ದಿ ಹರಡುವವರಿಗೆ ಇನ್ನು ದೊಡ್ಡ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಈಗ ಸುಳ್ಳು ಸುದ್ದಿ ಹರಡುವವರಿಗೆ ಸಂಬಂಧಿತ ಪ್ರಸ್ತಾವಿತ ಮಸೂದೆಯನ್ನು ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ‘ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿಗಳನ್ನು’ ಹರಡುವವರಿಗೆ ಸೆಕ್ಷನ್ 195 ರ ಅಡಿಯಲ್ಲಿ3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿಅವಕಾಶ ನೀಡಲಾಗಿದೆ.

ಸೆಕ್ಷನ್ 195(1) ಡಿ ಏನು ಹೇಳುತ್ತೆ?
“ಭಾರತದ ಸಾರ್ವಭೌಮತೆ ಏಕತೆ ಮತ್ತು ಸಮಗ್ರತೆ ಅಥವಾ ಭದ್ರತೆಗೆ ಧಕ್ಕೆ ತರುವಂತಹ ಸುಳ್ಳು / ತಪ್ಪುದಾರಿಗೆಳೆಯುವ ಮಾಹಿತಿಯನ್ನು ತಯಾರಿಸಿದರೆ ಅಥವಾ ಪ್ರಕಟಿಸಿದರೆ ಅಂಥವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ” ಎಂದು ಈ ಕಾನೂನು ಹೇಳುತ್ತದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾರು ನಿನ್ನೆ ಶುಕ್ರವಾರ ಲೋಕಸಭೆಯಲ್ಲಿ 3 ಮಸೂದೆಗಳನ್ನು ಮಂಡಿಸಿದ್ದಾರೆ. ಇದು ನ್ಯಾಯವನ್ನು ನೀಡುವ ಮತ್ತು ಸಂವಿಧಾನದ ಪ್ರಕಾರ ಭಾರತೀಯ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಇದೆ ಸಂದರ್ಭ ಮಂಡನೆ ಆದ ಇನ್ನೊಂದು ಪ್ರಮುಖ ಬಿಲ್ ಅತ್ಯಾಚಾರವೆಸಗಿದರೆ ಗಲ್ಲು ಶಿಕ್ಷೆಯ ಕುರಿತಾದದ್ದು. ಬ್ರಿಟಿಷರ ಕಾಲದ ಕಾನೂನು ರದ್ದು ಮಾಡಿ ಈಗ ಲೋಕಸಭೆಯಲ್ಲಿ ಅಪರಾಧ ತಿದ್ದುಪಡಿ ಕಾಯ್ದೆ ಮಂಡನೆ​ ಹೊಸದಾಗಿ ತಿದ್ದುಪಡಿ ಮಾಡಲಾಗುತ್ತಿದೆ. ಪ್ರಸಾವಿತ ಹೊಸ ಮಸೂದೆಯು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು ದೇಶವಿರೋಧಿ ಅಪರಾಧಗಳ ಕಾನೂನುಗಳ ತಡೆಗೆ ಆದ್ಯತೆ ನೀಡುತ್ತದೆ.