Home Food Chinese food: ಏನಿದು ಬೌ ಬೌ ಹಬ್ಬದ ವಿಶೇಷ ?ಡಾಗ್ ಮೀಟ್ ಫೆಸ್ಟಿವಲ್ ಎಲ್ಲಿ ನಡೆಯುತ್ತೆ?...

Chinese food: ಏನಿದು ಬೌ ಬೌ ಹಬ್ಬದ ವಿಶೇಷ ?ಡಾಗ್ ಮೀಟ್ ಫೆಸ್ಟಿವಲ್ ಎಲ್ಲಿ ನಡೆಯುತ್ತೆ? ಪಾಚಿ ಛಪ್ಪರಿಸೋ ದೇಶ ಯಾವುದು?

Chinese food

Hindu neighbor gifts plot of land

Hindu neighbour gifts land to Muslim journalist

Chinese Food: ಚೈನಿಸ್ ಫುಡ್ ಗಳು ಕೆಲವೊಂದು ಬಹಳ ಹೆಸರು ಪಡೆದಿದ್ದರೆ, ಇನ್ನು ಕೆಲವು ಆಹಾರ ಕುಖ್ಯಾತಿ ಪಡೆದಿದೆ. ವಿಚಿತ್ರ ಆಹಾರ ಪದ್ಧತಿ ಚೀನಾದಲ್ಲಿ ಇದ್ದು, ಇವರು ಕ್ರಿಮಿಯಿಂದ ಹಿಡಿದು ಕೀಟ ವಿಷಜಂತುಗಳು, ಅಷ್ಟೇ ಯಾಕೆ ಪಾಚಿ ಯನ್ನು ಸಹ ಬಿಡುವುದಿಲ್ಲವಂತೆ.

ಈಗಾಗಲೇ ಚೀನಾದ ಜನಪ್ರಿಯ ‘ಡಾಗ್ ಮೀಟ್ ಪೆಸ್ಟಿವಲ್’ ಅನ್ನು ಇಡೀ ಜಗತ್ತು ವಿರೋಧಿಸುತ್ತದೆ. ಎಲ್ಲರ ವಿರೋಧದ ನಡುವೆಯೂ ಅಲ್ಲಿ ಇಂದಿಗೂ ಬರೋಬ್ಬರಿ ಹತ್ತು ದಿನಗಳ ಕಾಲ ಡಾಗ್ ಫೆಸ್ಟಿವಲ್ ನಡೆಸಲಾಗುತ್ತದೆ. ಈ ಹಬ್ಬದಲ್ಲಿ ಚೀನಾದ ಜನರು ನಾಯಿಯನ್ನು ಬೆಂಕಿಯಲ್ಲಿ ಹುರಿದು ತಿನ್ನುತ್ತಾರೆ. ನಿಯತ್ತಿಗೆ ಇನ್ನೊಂದು ಹೆಸರಾಗಿರುವ ನಾಯಿಗಳ ಮಾರಣಹೋಮ ಪ್ರತಿವರ್ಷವೂ ಅಲ್ಲಿ ನಡೆಯುತ್ತದೆ ಇದು ನಮಗೆ ತಿಳಿದಿರುವ ವಿಚಾರ.

ಈಗಾಗಲೇ ಚೀನೀಯರ ಆಹಾರ (Chinese Food) ಪದ್ಧತಿಯಿಂದ ಅನೇಕ ರೀತಿಯ ವೈರಸ್ ಗಳು ಹರಡುತ್ತಿವೆ. ಕೊರೋನಾ ಕೂಡ ಚೀನಾದಿಂದಲೇ ಹರಡಿದೆ ಎನ್ನುವುದು ಸಾಬೀತು ಆಗಿದೆ. ಇದೀಗ ಪಾಚಿ ತಿಂದು ಯಾವ ರೋಗ ಹರಡಲಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹೌದು ಇದೀಗ ಚೀನೀ ಜನರು ಈ ಬಾರಿ ಪಾಚಿ (Algae) ಯನ್ನು ತಿನ್ನುವ ಮೂಲಕ ಜನರು ಶಾಕ್ ಆಗುವಂತೆ ಮಾಡಿದ್ದಾರೆ.

ಚೀನಿಯರು ಜಗತ್ತಿನಲ್ಲಿ ಯಾರೂ ತಿನ್ನದ ಆಹಾರಗಳನ್ನು ತಿನ್ನುತ್ತಾರೆ. ಕೆಲವೊಮ್ಮೆ ಅವರು ಹೆಬ್ಬಾವು, ಜಿರಳೆ, ನಾಯಿ ಗಳನ್ನು ಬೇಯಿಸಿ ತಿನ್ನುವ ವಿಡಿಯೋಗಳು ಕೂಡ ವೈರಲ್ ಆಗಿದೆ. ಇಷ್ಟೇ ಅಲ್ಲದೇ ಇವರು ಕಾಡು ಪ್ರಾಣಿಗಳ ಮಾಂಸಗಳನ್ನು ಕೂಡ ಬಹಳ ಇಷ್ಟಪಟ್ಟು ತಿಂತಾರೆ. ಈ ಬಾರಿ ನದಿಯ ದಡದಲ್ಲಿ ಹೆಪ್ಪುಗಟ್ಟಿದ ಪಾಚಿಯನ್ನು ಸೇವಿಸುವ ವಿಡಿಯೋ ವೈರಲ್ ಆಗಿದೆ.

ಈ ಪಾಚಿಯ ಹೊಸ ಅಡುಗೆಗೆ ಮೊದಲು ನದಿ ಅಥವಾ ಕೆರೆಯ ದಡದಲ್ಲಿ ಬೆಳೆದಿರುವ ತಾಜಾ ಪಾಚಿಯನ್ನು ತರಲಾಗುತ್ತದೆ. ನಂತರ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅದನ್ನು ಕಾದ ಬಾಣಲೆಗೆ ಹಾಕಿ ಬೇಯಿಸಲಾಗುತ್ತದೆ. ನಂತರ ಅದಕ್ಕೆ ಕೆಂಪುಮೆಣಸಿನ ಕಾಯಿಯನ್ನು ಹಾಕಿ ಹದಗೊಳಿಸುತ್ತಾರೆ. ಈ ಹೊಸ ಡಿಶ್ ಅನ್ನು ಚೀನಾದ ಜನರು ಬಹಳ ಖುಷಿಯಿಂದ ತಿನ್ನುತ್ತಿದ್ದಾರೆ .

ಭಾರತದಲ್ಲೂ ಕೂಡ ಅನೇಕ ಚೈನಿಸ್ ಆಹಾರಗಳು ಪ್ರಸಿದ್ಧವಾಗಿವೆ. ಅಲ್ಲಿನ ಚ್ಯಾಮಿನ್ ಚಿಲ್ಲಿ ಭಾರತದಲ್ಲಿ ಬಹಳ ಫೇಮಸ್ ಆಗಿದೆ. ಆದರೆ ಚೀನಾದಲ್ಲಿ ಆಹಾರದ ಬಗ್ಗೆ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತದೆ. ಅವುಗಳ ಒಳಿತು ಕೆಡುಕು ಕುರಿತು ಅವರು ಚಿಂತಿಸುವುದೇ ಇಲ್ಲ. ಈಗ ಚೀನಾದ ಜನರು ಪಾಚಿ ತಿನ್ನುವುದರ ಮೂಲಕ ಜಗತ್ತಿನ ಕೆಂಗಣ್ಣಿಗೆ ಬಲಿಯಾದರೂ ಅಚ್ಚರಿಯಿಲ್ಲ.

https://youtube.com/shorts/KG4zQUl6ikE?feature=share

ಇದನ್ನೂ ಓದಿ: ಕರಾವಳಿ: ಅಡಿಕೆ ಬೆಲೆಯಲ್ಲಿ ಭಾರೀ ಹೆಚ್ಚಳ ; 500 ಗಡಿಯಲ್ಲಿ ಹೊಳೆಯುತ್ತಿರುವ ಗೊಲ್ಡನ್ ನಟ್ !